Ad Widget .

ಮುಖ್ಯಮಂತ್ರಿ ಆಮೇಲೆ ಆಗುವಿರಂತೆ, ಮೊದಲು ಕೋವಿಡ್ ನಿಯಂತ್ರಣದ ಕೆಲಸ ಮಾಡಿ: ಶಾಸಕರ ಕಿವಿಹಿಂಡಿದ ಯಡ್ಡಿ

ಬೆಂಗಳೂರು: ನಾಯಕತ್ವ ಬದಲಾವಣೆ, ಸಹಿ ಸಂಗ್ರಹಣೆ, ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ನಿಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೆಲಸ ಮಾಡಿ ಎಂದು ತಮ್ಮ ಶಾಸಕರಿಗೆ ಬಿಎಸ್ ಯಡಿಯೂರಪ್ಪ ಬುದ್ದಿವಾದ ಹೇಳಿದ್ದಾರೆ.

Ad Widget . Ad Widget .

ಯಡಿಯೂರಪ್ಪ ಅವರ ಪರವಾಗಿ ಸಹಿ ಸಂಗ್ರಹಿಸಿ ಹೈಕಮಾಂಡ್ ಗೆ ನೀಡುತ್ತೇವೆ ಎಂದು ಮಾಜಿ ಸಚಿವ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದರು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿಯೊಳಗಡೆ ಅಧಿಕಾರ ಕಿತ್ತಾಟದ ಮಧ್ಯೆ ಈ ಹೇಳಿಕೆ ಬಂದಿತ್ತು. ಇದಕ್ಕೆ ಪ್ರತಿಪಕ್ಷಗಳು ಕೂಡ ಭಾರೀ ಟೀಕೆಯನ್ನು ಮಾಡಿದ್ದರು. ಇದರಿಂದ ಸಿಡಿಮಿಡಿಗೊಂಡ ಸಿಎಂ ತಮ್ಮ ಶಾಸಕರಿಗೆ ಬುದ್ದಿವಾದವನ್ನು ಹೇಳಿದ್ದು ಈ ಸಂಕಷ್ಟದ ಸಮಯದಲ್ಲಿ ತಮ್ಮ ಕ್ಷೇತ್ರದಲ್ಲಿ ಜನರ ಪರ ನಿಂತ ಶಾಸಕರು ಕೆಲಸ ಮಾಡಬೇಕೆಂದು ಹೇಳಿದ್ದಾರೆ.

Ad Widget . Ad Widget .

ಟ್ವೀಟ್ ಮೂಲಕ ಯಾರು ಕೂಡ ರಾಜಕೀಯ ಹೇಳಿಕೆಗಳನ್ನು ನೀಡಬೇಡಿ ಮೊದಲು ಕೆಲಸ ಮಾಡಿ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಯಡಿಯೂರಪ್ಪ ಹೈಕಮಾಂಡ್ ಬಯಸಿದರೆ ರಾಜೀನಾಮೆಗೆ ಸಿದ್ದ ಎಂದು ಹೇಳಿದ್ದರು. ಇದರ ಬಳಿಕ ಈ ಬಗ್ಗೆ ಭಾರೀ ಚರ್ಚೆ ನಡೆದಿತ್ತು.

Leave a Comment

Your email address will not be published. Required fields are marked *