ಮರಕ್ಕೆ ಢಿಕ್ಕಿ ಹೊಡೆದ ಆಂಬುಲೆನ್ಸ್ : ಮೂವರು ಸಾವು

ಕೇರಳ : ಆಂಬುಲೆನ್ಸ್ ಒಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಕಣ್ಣೂರಿನಲ್ಲಿ ಸೋಮವಾರ ನಡೆದಿದೆ.

Ad Widget ... ..

ಮೃತರನ್ನು ಪಯ್ಯನ್ನೂರು ನಿವಾಸಿಗಳಾದ ಬೀಜೋ (45), ಆತನ ಸಹೋದರಿ ರಜಿನಾ (37), ಮತ್ತು ಆಂಬುಲೆನ್ಸ್ ಚಾಲಕ ನಿತಿನ್ ರಾಜ್ (40) ಎಂದು ಗುರುತಿಸಲಾಗಿದೆ. ಜೊತೆಯಲ್ಲಿ ಇದ್ದ ಬೆಣ್ಣಿ ಎಂಬವರು ಗಂಭೀರ ಗಾಯಗೊಂಡಿದ್ದು ಕಣ್ಣೂರಿನ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.

Ad Widget

ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದ್ದು, ಚಾಲಕ ನಿದ್ರೆಯ ಮಂಪರಿನಲ್ಲಿ ಇದ್ದುದರಿಂದ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಮರಕ್ಕೆ ಢಿಕ್ಕಿ ಹೊಂಡೆದಿದೆ ಎಂದು ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *