ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ ಐನೂರು ದಾಟಿದ್ದು ಆರೋಗ್ಯ ಇಲಾಖೆ ದಾಖಲೆಗಳಲ್ಲಿ ಮಾತ್ರ 154 ದಾಟಿಲ್ಲ. ಆಸ್ಪತ್ರೆಗಳು ಕೊರೊನಾದಿಂದ ಸಾವು ಸಂಭವಿಸಿದೆ ಎಂದರು ಆರೋಗ್ಯ ಇಲಾಖೆ ಮಾತ್ರ ಅದನ್ನು ಅಲ್ಲಗಳೆದಿದೆ.
ಇನ್ನು ಕೋವಿಡ್ ನಿಂದ ಸಾವು ಸಂಭವಿಸಿದಾಗ ಅದನ್ನು ದಾಖಲೆಗೆ ಸೇರಿಸಿಕೊಳ್ಳಲು ರಾಜ್ಯ ಸರ್ಕಾರದ ಕೆಲವು ನಿಬಂಧನೆಗಳಿವೆ. ಅದಕ್ಕನುಗುಣವಾಗಿ ಸಾವಿನ ಸಂಖ್ಯೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದ್ದು ಇನ್ನು ಸರಕಾರ ಕೈಗೊಂಡ ನಿಬಂಧನೆಗಳಲ್ಲಿರುವ ಕುಂದುಕೊರತೆಗಳಿಂದಾಗಿ ಈ ದಾಖಲೆಗಳಲ್ಲಿ ಕೊರತೆ ಉಂಟಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಜಿಲ್ಲಾಮಟ್ಟದ ಅಧಿಕಾರಿಗಳು ಸಾವಿನ ಸಂಖ್ಯೆ ಕಡಿಮೆ ತೋರಿಸಲು ಈ ರೀತಿ ಮಾಡಲಾಗುತ್ತಿದೆ ಎನ್ನಲಾಗಿದೆ. ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿ ಕಾಸರಗೋಡು ಜಿಲ್ಲೆಗಿಂತ ಹೆಚ್ಚಿನ ವೈದ್ಯಕೀಯ ಸೌಲಭ್ಯವಿದ್ದರೂ ಅಲ್ಲಿ ಕೊರೋನಾ ಸಾವಿನ ಸಂಖ್ಯೆ ಹೆಚ್ಚಿದ್ದು ಇಲ್ಲಿ ದಾಖಲೆಗಳನ್ನು ನಿಜವಾಗಿಯೂ ತಿರುಚಲಾಗಿದೆ ಎನ್ನಲಾಗುತ್ತಿದೆ.