ಮುಂಬೈ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪದ ಮೇಲೆ ಕಿರುತೆರೆ ನಟ ಪರ್ವ್ ವಿ. ಪುರಿ ಸೇರಿದಂತೆ 6 ಮಂದಿಯನ್ನು ಮುಂಬೈ ವಾಲಿವ್ ಪೊಲೀಸರು ಬಂಧಿಸಿದ್ದಾರೆ.
ಕಾರಿನಲ್ಲಿ ನಟ ಸೇರಿದಂತೆ ಇತರರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ನೀಡಿದ ದೂರಿನ ಅನ್ವಯ ಮುಂಬೈನ ವಾಲಿವ್ ಪೊಲೀಸರು ಪರ್ವ್ ವಿ ಪುರಿ ಸೇರಿದಂತೆ 6 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ದಿಲ್ ಕಿ ನಸರ್ ಸೆ ಖೂಬ್ ಸೂರತ್ ಧಾರವಾಹಿ ಮೂಲಕ 2013ರಲ್ಲಿ ಕಿರುತೆರೆ ಕಾಲಿಟ್ಟ ಪರ್ವ್ ವಿ ಪುರಿ, ಫಿರ್ ಬಿ ನಾ ಮಾನೆ ಮೂಲಕ ಜನಪ್ರಿಯತೆ ಪಡೆದಿದ್ದರು. ನಾಗಿಣಿ-3, ಬ್ರಹ್ಮರಾಕ್ಷಸ್-2 ಮುಂತಾದ ಧಾರವಾಹಿಗಳಲ್ಲಿ ನಟಿಸಿದ್ದಾರೆ.
ಬಾಲಕಿಯ ಸಾಮೂಹಿಕ ಅತ್ಯಾಚಾರ: ಕಿರುತೆರೆ ನಟನ ಬಂಧನ
