Ad Widget .

ಕಮರಿದ ಪೈಲಟ್ ಆಗುವ ಕನಸು: ಕೊಡಗು ಮೂಲದ ಯುವಕ ಅಹಮದಾಬಾದ್ ನಲ್ಲಿ ಆತ್ಮಹತ್ಯೆ

Ad Widget . Ad Widget .

ಅಹಮದಾಬಾದ್: ಕೊಡಗು ಮೂಲದ ಮಹತ್ವಾಕಾಂಕ್ಷಿ ಪೈಲಟ್ ಆಗುವ ಕನಸು ಹೊಂದಿದ್ದ ಯುವಕ ಅಹಮದಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಯುವಕನನ್ನು ಸೋಮವಾರಪೇಟೆ ತಾಲ್ಲೂಕಿನ ಜಂಬುರು ಗ್ರಾಮದ ಬೋಪಯ್ಯ ಮತ್ತು ಪೊನಮ್ಮ ಅವರ ಮಗ ಶಿಬಿ ಬೋಪಯ್ಯ (23) ಎಂದು ಗುರುತಿಸಲಾಗಿದೆ. ಶಿಬಿ ಯಾವಾಗಲೂ ಪೈಲಟ್ ಆಗಬೇಕೆಂಬ ಕನಸು ಕಂಡಿದ್ದನು ಮತ್ತು ಅಹಮದಾಬಾದ್‌ನ ಏರೋನಾಟಿಕಲ್ ಸೆಂಟರ್‌ನಲ್ಲಿ ತನ್ನ ತರಬೇತಿ ಕೋರ್ಸ್ ಅನ್ನು ಓದುತ್ತಿದ್ದ. ದಿನಂಪ್ರತಿ ತನ್ನ ಹೆತ್ತವರ ಜೊತೆ ಫೋನಿನಲ್ಲಿ ಮಾತಾನಾಡುತ್ತಿದ್ದನು ಮತ್ತು ಗುರುವಾರ ರಾತ್ರಿ ಅವನ ಕಾಲ್ ಬಂದಿರಲಿಲ್ಲ.
ಅಲ್ಲದೇ ಅವನಿಗೆ ಕಾಲ್ ಮಾಡಿದರೂ ರಿಸೀವ್ ಮಾಡಿರಲಿಲ್ಲ.
ಅದೇ ಸಮಯದಲ್ಲಿ ಅಹಮದಾಬಾದ್‌ನ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಶಿಬಿಯ ಮನೆಯವರಿಗೆ ಕಾಲ್ ಮಾಡಿ ಶಿಬಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದಾಗ ಕುಟುಂಬವು ಆಘಾತಕ್ಕೊಳಗಾಗಿದೆ. ಏರೋನಾಟಿಕಲ್ ಸೆಂಟರ್ ಸಮೀಪದ ಮರದಿಂದ ಶಿಬಿಯ ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಸುತ್ತ‌ ಅನುಮಾನದ ಹುತ್ತ‌ ಬೆಳೆದಿದ್ದು, ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *