Ad Widget .

ಸೆಕ್ಸ್‌ದಂಧೆಯಿಂದ ಲಕ್ಷ ಲಕ್ಷ ಆದಾಯ ಸಿಗ್ತಿತ್ತಂತೆ | ದಿನಕ್ಕೊಂದು ಭಯಾನಕ ಸತ್ಯ ಬಾಯ್ಬಿಡ್ತಿದಾರೆ ಬಾಂಗ್ಲಾ ಯುವತಿಯ ರೇಪಿಸ್ಟ್ ಗಳು

ಬೆಂಗಳೂರು: ಕಳೆದ ವಾರ ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿಯ ಮೇಲೆ ನಡೆದಿದ್ದ ಭಯಾನಕ ಹಾಗೂ ವಿಕೃತ ಗ್ಯಾಂಗ್‌ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳಿಂದ ಭಯಾನಕ ಸತ್ಯಗಳು ಹೊರಬೀಳುತ್ತಿವೆ. ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಅವರ ವಿಚಾರಣೆಯನ್ನು ತೀವ್ರಗೊಳಿಸುತ್ತಿದ್ದಂತೆಯೇ ಒಂದೊಂದೇ ಸತ್ಯವನ್ನು ಹೊರಹಾಕುತ್ತಿದ್ದಾರೆ.

Ad Widget . Ad Widget .

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಾಂಗ್ಲಾ ಯುವತಿಯ ಮೇಲೆ ಬೆಂಗಳೂರಿನಲ್ಲಿ ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಬಾಟಲಿ ತುರುಕಿ ಅದರ ವಿಡಿಯೋ ಮಾಡಿ ಹರಿಬಿಟ್ಟ ಭಯಾನಕ ಘಟನೆ ಇದಾಗಿದೆ. ಇಡೀ ದೇಶಾದ್ಯಂತ ಈ ಘಟನೆ ಸಂಚಲನವನ್ನೇ ಸೃಷ್ಟಿಸಿತ್ತು. ಪ್ರಕರಣದ ಪ್ರಮುಖ 10 ಆರೋಪಿಗಳು ಇದಾಗಲೇ ಬಂಧಿತರಾಗಿದ್ದಾರೆ.
ಇಂದು ಈ ಯುವಕರು ಬಾಯಿಬಿಟ್ಟಿರುವ ಸತ್ಯ ಎಂದರೆ ವೇಶ್ಯಾವಾಟಿಕೆಯೇ ಈ ಯುವಕರ ಕಸುಬು.
ಬಾಂಗ್ಲಾ ಸೇರಿದಂತೆ ಎಲ್ಲೆಲ್ಲಿಂದಲೋ ಯುವತಿಯನ್ನು ಕರೆತಂದು ಹೈದರಾಬಾದ್‌, ಕೇರಳ ಮಾತ್ರವಲ್ಲದೇ ಬೆಂಗಳೂರಿನಲ್ಲಿಯೂ ವೇಶ್ಯಾವಾಟಿಕೆ ಮಾಡುತ್ತಿದ್ರಂತೆ. ಇದೇ ದಂಧೆಯಿಂದ ಇವರಿಗೆ ದಿನವೊಂದಕ್ಕೆ ಬರುವ ಆದಾಯ ಒಂದು ಲಕ್ಷ ರೂಪಾಯಿಯಂತೆ!

Ad Widget . Ad Widget .

ಇವರೆಲ್ಲವೂ ಅಕ್ರಮ ವಲಸಿಗರು. ಬೆಂಗಳೂರಿನಲ್ಲಿ ಬಾಡಿಗೆ ಪಡೆದು, ನಕಲಿ ಆಧಾರ್‌ ಕಾರ್ಡ್‌ ಕೂಡ ಮಾಡಿಸಿಕೊಂಡಿದ್ದಾರೆ. .ಬಾಂಗ್ಲಾ ದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದ ಬಳಿಕ ಬೃಹತ್ ಮಾನವ ಕಳ್ಳಸಾಗಣೆಯ ವಿಚಾರವೂ ಪತ್ತೆಯಾಗಿದೆ. ವೀಸಾ, ಪಾಸ್​ಪೋರ್ಟ್​ ಇಲ್ಲದೆ ಯುವತಿಯರನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರಿನಲ್ಲಿ ವಿಕೃತಿ ಮೆರೆದಿದ್ದ ಕಾಮುಕರ ಮಾಡಿದ್ದ ವಿಡಿಯೋ ಬಾಂಗ್ಲಾದೇಶ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ಸಂಚಲನ ಸೃಷ್ಟಿಸಿತ್ತು. ನಂತರ ವಿಡಿಯೋದ ತನಿಖೆ ಕೈಗೊಂಡಾಗ ಅದು ಬೆಂಗಳೂರಿನಲ್ಲಿ ನಡೆದಿರುವುದು ತಿಳಿದಿತ್ತು. ಅತ್ಯಾಚಾರ ಎಸಗಿದ ಬಳಿಕ ಯುವತಿಯನ್ನು ಬಾಂಗ್ಲಾದೇಶಕ್ಕೆ ರವಾನೆ ಮಾಡಿದ್ದರು. ನಂತರ ಯುವತಿ ಅಲ್ಲಿ ಪತ್ತೆಯಾಗಿದ್ದಾಳೆ.

Leave a Comment

Your email address will not be published. Required fields are marked *