Ad Widget .

ಕನ್ನಡಿಗರ ಸ್ವಾಭಿಮಾನಕ್ಕೆ ಮಣಿದ ಗೂಗಲ್: ಹುಡುಕಿದ್ದೆಲ್ಲಾ ಪರಿಪೂರ್ಣವಲ್ಲ ಎಂದು ಕ್ಷಮೆಯಾಚನೆ

ಬೆಂಗಳೂರು: ಕನ್ನಡದ ಕುರಿತು ಅವಹೇಳನಕಾರಿ ಅಂಶವನ್ನು ಪ್ರಕಟಿಸಿದ್ದಕ್ಕೆ ಗೂಗಲ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿ ದನಿ ಎತ್ತಿದ್ದು, ಕೊನೆಗೂ ಮಣಿದ ಗೂಗಲ್​ ಕನ್ನಡಿಗರ ಕ್ಷಮೆಯನ್ನು ಯಾಚಿಸಿದೆ.

Ad Widget . Ad Widget .

‘ಅಗ್ಲಿಯೆಸ್ಟ್ ಲ್ಯಾಂಗ್ವೇಜ್ ಇನ್​ ಇಂಡಿಯಾ’ ಎಂದು ಸರ್ಚ್ ಮಾಡಿದಾಗ ಕನ್ನಡ ಎಂದು ಉತ್ತರ ಬರುವಂತೆ ಇದ್ದಿದ್ದನ್ನು ಗಮನಿಸಿದ ಕನ್ನಡಿಗರು ಬೆಳಗಿನಿಂದ ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕನ್ನಡದ ಮಾಧ್ಯಮಗಳು ಬೆಳಕು ಚೆಲ್ಲಿದ್ದಲ್ಲದೆ, ಸೆಲೆಬ್ರಿಟಿಗಳು ಸೇರಿ ಅಸಂಖ್ಯಾತ ಕನ್ನಡಿಗರೂ ಸೋಷಿಯಲ್ ಮೀಡಿಯಾಗಳ ಮೂಲಕ ದನಿ ಎತ್ತಿದ್ದರು. ಒಟ್ಟಾರೆಯಾಗಿ ಕನ್ನಡಿಗರ ಒತ್ತಾಯಕ್ಕೆ ಮಣಿದ ಗೂಗಲ್ ಕ್ಷಮೆ ಕೋರಿದೆ.

Ad Widget . Ad Widget .

ಗೂಗಲ್ ಸರ್ಚ್​ನಲ್ಲಿ ಬರುವಂಥದ್ದು ಯಾವಾಗಲೂ ಪರಿಪೂರ್ಣವಲ್ಲ.
ಕೆಲವೊಮ್ಮೆ ಬರಹಗಳನ್ನು ಯಾವ ರೀತಿ ಬರೆಯಲಾಗಿರುತ್ತದೆ ಎಂದರೆ ಕೆಲವೊಂದು ಪ್ರಶ್ನೆಗಳಿಗೆ ವಿಚಿತ್ರವಾದ ಉತ್ತರಗಳು ಬಂದು ಬಿಟ್ಟಿರುತ್ತವೆ ಎಂದ ಸಮಜಾಯಿಷಿ ನೀಡಿರುವ ಸಂಸ್ಥೆ, ಇದು ಗೂಗಲ್ ಅಭಿಪ್ರಾಯವಲ್ಲ ಎಂದು ಹೇಳಿದೆ. ಅದಾಗ್ಯೂ ಇನ್ನೊಬ್ಬರ ಭಾವನೆಗಳಿಗೆ ನೋವಾಗಿದ್ದಕ್ಕೆ ಕ್ಷಮೆ ಯಾಚಿಸುತ್ತೇವೆ ಎಂದು ಗೂಗಲ್ ತಿಳಿಸಿದೆ.

Leave a Comment

Your email address will not be published. Required fields are marked *