ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಜ್ವರ, ಸುಸ್ತು, ಮೈಕೈ ನೋವು ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದು ಉತ್ತಮ ಬೆಳವಣಿಗೆ. ಹೌದು, ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ಲಸಿಕೆ ಪಡೆದ ಬಳಿಕ ಹೆಚ್ಚು ಜ್ವರ, ಮೈಕೈ ನೋವು, ಸುಸ್ತು, ತಲೆನೋವು ಇತ್ಯಾದಿ ಲಕ್ಷಣ ಕಾಣಿಸಿಕೊ೦ಡವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಹೆಚ್ಚು 400ಕ್ಕೂ ಆ್ಯಂಟಿಬಾಡಿ ಉತ್ಪತ್ತಿ ಆಗಿರುವುದು ಕಂಡುಬಂದಿದೆ. ಇಂಥ ಲಕ್ಷಣ ಕಾಣಿಸಿಕೊಳ್ಳದೇ ಇರುವವರಲ್ಲಿ 150ರ ಇಂದ 200 ಕೌಂಟ್ಸ್ ಆ್ಯಂಟಿಬಾಡಿ ಜನರೇಟ್ ಆಗಿರುವುದು ತಿಳಿದುಬಂದಿದೆ. ಹೀಗಾಗಿ ಲಸಿಕೆ ಪಡೆದ ನಂತರ ಬರುವ ಜ್ವರದಂಥ ಲಕ್ಷಣಗಳಿಗೆ ಹೆದರುವುದಕ್ಕಿಂತ ಖುಷಿಪಡುವುದು ಉತ್ತಮ.
ಲಸಿಕೆ ಪಡೆದುಕೊಳ್ಳಲು ತೆರಳುವ ಮುನ್ನ ದೇಹವನ್ನು ಹೆಚ್ಚು ಹೈಟ್ರೇಟ್ ಆಗಿ ಇಟ್ಟುಕೊಳ್ಳುವುದು ಮುಖ್ಯ. ಲಸಿಕೆ ಪಡೆದ ನಂತರ ದೇಹಕ್ಕೆ ಆಯಾಸವಾಗಿರುತ್ತದೆ. ಹೀಗಾಗಿ, ಯಾವುದೇ ದೈಹಿಕ ಚಟುವಟಿಕೆಗೆ
ಒಳಪಡದೇ ದೇಹಕ್ಕೆ ಸಂಪೂರ್ಣ ಆರಾಮ ನೀಡಬೇಕು. ನಿದ್ರೆ ಮಾಡುವುದರಿಂದ ದೇಹಕ್ಕೆ ಹೆಚ್ಚು ಆರಾಮ ಸಿಗಲಿದೆ. ಈ ಸಂದರ್ಭದಲ್ಲಿ ಹೆಚ್ಚು ನೀರು ಸೇವನೆ ಮುಖ್ಯ. ಜತೆಗೆ ಪೌಷ್ಟಿಕ ಆಹಾರ ಸೇವನೆ ಸಹ ಮುಖ್ಯ.
ಕೋಮಾರ್ಬಿಡಿಟಿ ಸಮಸ್ಯೆ ಇರುವವರು (ಇತರ ಆರೋಗ್ಯ ಸಮಸ್ಯೆ ಹೊಂದಿರುವವರು) ಲಸಿಕೆ ಪಡೆದ ನಂತರ, ಪ್ರತಿನಿತ್ಯ ಸೇವಿಸುವ ಮಾತ್ರೆಗಳನ್ನು ಆ ದಿನ ಡೋಸ್ ಕಡಿಮೆ ಮಾಡಿದರೆ ಒಳಿತು. ಹೀಗಾಗಿ ಲಸಿಕೆ ಪಡೆದ ಬಳಿಕ ಜ್ವರದಂಥ ಲಕ್ಷಣ ಕಂಡುಬಂದರೆ ಭಯ ಪಡುವ ಅವಶ್ಯಕತೆ ಇಲ್ಲ. ಆದ್ರೆ ಈ ಲಕ್ಷಣಗಳಿಗೆ ಪೇನ್ ಕಿಲ್ಲರ್‌ನಂಥ ಮಾತ್ರೆ ತೆಗೆದುಕೊಳ್ಳಬಾರದು. ಇದರಿಂದ ಇತರ ಆರೋಗ್ಯ ಸಮಸ್ಯೆಗೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ. ಹೀಗಾಗಿ ಡೋಲೋ, ಪ್ಯಾರಸಿಟಮಲ್ ಮಾತ್ರೆಯನ್ನು ಮಾತ್ರ ಸೇವಿಸಬೇಕು.
ಡಾ. ಶೀಲಾ ಚಕ್ರವರ್ತಿ, ಪೋರ್ಟಿಸ್ ಆಸ್ಪತ್ರೆ, ಬೆಂಗಳೂರು