ಹಿರಿಯ ನಟಿ ಬಿ.ಜಯಾ ವಿಧಿವಶ: ಕಂಬನಿ ಮಿಡಿದ ಚಿತ್ರರಂಗ

ಬೆಂಗಳೂರು. ಸ್ಯಾಂಡಲ್​ವುಡ್​ ನ ಹಿರಿಯ ನಟಿ ಬಿ. ಜಯಾ ಮೃತರಾಗಿದ್ದಾರೆ. ಗುರುವಾರ (ಜೂನ್​ 3) ಮಧ್ಯಾಹ್ನ 3:30 ಸುಮಾರಿಗೆ ಕೊನೆಯುಸಿರೆಳೆದರು.

Ad Widget ... ..

ಕೆಲ ದಿನದಿಂದ ಜಯಾ ಅವರಿಗೆ ವಯೋಸಹಜ ಅನಾರೋಗ್ಯ ಕಾಡುತ್ತಿತ್ತು. ಹೀಗಾಗಿ ಜಯಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಆರು ದಶಕಗಳ ಕಾಲ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಅವರು, 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಅವರನ್ನು ಚಿತ್ರರಂಗ ಕಳೆದುಕೊಂಡಿದ್ದು, ಅವರ ನಿಧನಕ್ಕೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

Ad Widget

Leave a Comment

Your email address will not be published. Required fields are marked *