Ad Widget .

ಹೀಗೂ ಉಂಟು: ನಾಯಿಯನ್ನು‌ ವರಿಸಿದ ಯುವತಿ: ನಂತರ ಏನಾಯ್ತು ಗೊತ್ತಾ?

ಎಂಥ ಅಚ್ಚರಿಯಲ್ಲವೇ! ಎಲ್ಲಾದರೂ ಉಂಟೇ? ನಮಗೆ ತಿಳಿದಿರುವ ಹಾಗೆ ಮದುವೆ ಎಂದರೆ ಮನುಷ್ಯರ ನಡುವೆ ಆಗುತ್ತದೆ. ಆದರೆ ಇಲ್ಲೊಂದು ವಿಶೇಷ ಸುದ್ದಿ ಇದೆ. ಪ್ರಪಂಚದಲ್ಲಿ ಈ ರೀತಿಯ ವಿಚಿತ್ರಗಳು ನಡೆಯುತ್ತಿರುತ್ತವೆ .ಇಂತಹ ಅನಿರೀಕ್ಷಿತ ಸನ್ನಿವೇಶಗಳು ಸಾಮಾನ್ಯ ಜನರಿಗೆ ಪ್ರೇರೇಪಿಸುತ್ತಿರುತ್ತವೆ. ಇಂತಹ ಸುದ್ದಿ ಗಳನ್ನು ಓದಿದಾಗ ಇಂತಹದ್ದೂ ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಸಂಗತಿ ಓದಿದರೇ ನಿಜಕ್ಕೂ ಆಶ್ಚರ್ಯವೆನಿಸಬಹುದು. ಈ ಘಟನೆ ಜಾರ್ಖಂಡ್ ನಲ್ಲಿ ಮಂಗಳಿ ಮುಂಡ ಎಂಬ 18 ವರ್ಷದ ಯುವತಿ ನಾಯಿಯೊಂದನ್ನು ಮದುವೆಯಾದ ವಿಚಿತ್ರ ಘಟನೆ ನಡೆದಿದೆ.

Ad Widget . Ad Widget .

ಒಬ್ಬ ಯುವತಿ ಒಬ್ಬ ಪುರುಷನನ್ನು ಮದುವೆಯಾಗುವುದು ಸಾಮಾನ್ಯ ಆದರೆ ಈ ಮಂಗಳಿ ಎಂಬ ಯುವತಿ ನಾಯಿಯ ಜೊತೆ ಮದುವೆ ಯಾಗಿದ್ದಾಳೆ.
ಆದರೆ ಆಕೆ ನಾಯಿಯ ಮೇಲಿನ ಪ್ರೀತಿ- ಮಮತೆಯಿಂದಂತೂ ಅದನ್ನು ಮದುವೆ ಯಾಗಲಿಲ್ಲ. ಅದಕ್ಕೆ ಕಾರಣ ಮತ್ತೊಂದು ಇದೆ. ತಿಳಿದರೆ ನಿಮಗೆ ಆಶ್ಚರ್ಯ ವಾಗಬಹುದು. ಜಾರ್ಖಂಡ್ ಗ್ರಾಮವೊಂದರಲ್ಲಿ ಸಾಮಾನ್ಯ ವಿವಾಹಗಳಂತೆ ಈ ಮದುವೆಯೂ ಅದ್ಧೂರಿಯಾಗಿ ನಡೆದಿದೆ. ನಾಯಿ ಜೊತೆ ಈ ಯುವತಿ ಹಸೆಮಣೆ ಏರಿದ್ದಾಳೆ.

Ad Widget . Ad Widget .

ಈ ಭರ್ಜರಿ ವಿವಾಹ ಲಕ್ಕೆ ಒಂದು ದೊಡ್ಡ ಕಾರಣವಿದೆ‌. ಮಂಗಳಿ ಮುಂಡ ಎಂಬ ಈ ಯುವತಿಯ ಜಾತಕದಲ್ಲಿ ದೋಷವೊಂದಿತ್ತು. ಅದಕ್ಕೆ ನಾಯಿಯ ಜೊತೆ ಮದುವೆಯಾದರೆ ಆ ದೋಷ‌ ನಿವಾರಣೆ ಆಗುತ್ತದೆಂದು ಜ್ಯೋತಿಷಿಯೊಬ್ಬರು ಹೇಳಿದ್ದರು. ಆ ಮಾತಿನಂತೆ ಯುವತಿಯ ಪೋಷಕರು, ಆ ದೋಷ ಕಂಟಕವನ್ನು ಕಳೆಯಲು ಬೀದಿ ನಾಯಿಯ ಜೊತೆ ಮದುವೆ ಮಾಡುತ್ತಾರೆ. ಇದಾದ ಕೆಲವೇ ದಿನಗಳ ನಂತರ ಆ ಯುವತಿಯ ನಿಜವಾದ ಮದುವೆ ನಡೆಯುತ್ತದೆ.

ಅದೇ ಗ್ರಾಮದ ಯುವಕನಿಗೆ ಈ ಯುವತಿ ಯನ್ನು ಕೊಟ್ಟು ಸಂಪ್ರದಾಯದ ಪ್ರಕಾರ ಮದುವೆ ಮಾಡಿದ್ದಾರೆ. ಕೇವಲ ಯುವತಿಯ ದೋಷ ಕಳೆಯಲು ಕಂಟಕ ಪರಿಹಾರವಾಗಿ ಮಾತ್ರ ನೆಮ್ಮದಿಯ ದಾಂಪತ್ಯ ಜೀವನ ಕಳೆಯಲು ನಾಯಿಯ ಜೊತೆ ಮದುವೆ ಮಾಡಿ ನಂತರ ನಿಜವಾದ ಮದುವೆ ಒಬ್ಬ ಯುವಕನೊಟ್ಟಿಗೆ ಮಾಡಿದ್ದಾರೆ. ಇದೆಲ್ಲಾ ತಮ್ಮ ಮಗಳು ಮತ್ತು ಅಳಿಯನ ಒಳಿತಿಗಾಗಿ ಮಾಡಿದೆವು‌ ಎಂದು ಯುವತಿಯ ಪೋಷಕರು ಹೇಳಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *