Ad Widget .

ಲಸಿಕೆ ಖರೀದಿಗೆ ಮೀಸಲಿಟ್ಟ ಹಣ ಏನಾಯ್ತ? ಕೇಂದ್ರದ ಕಿವಿ ಹಿಂಡಿದ ಸುಪ್ರೀಂ

ನವದೆಹಲಿ: ಡಿಸೆಂಬರ್ ಹೊತ್ತಿಗೆ ದೇಶದ ಎಲ್ಲರಿಗೂ ವ್ಯಾಕ್ಸಿನ್ ಸಿಗಲಿದೆ ಅಂತ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಲೇ ಇದೆ. ಈ ಮಧ್ಯೆ ಲಸಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಿವಿ ಹಿಂಡಿದೆ. ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ ಅನುದಾನ ಏನಾಯಿತು ಅಂತ ಲೆಕ್ಕ ಪರಿಶೋಧನೆಗೆ ಸೂಚಿಸಿದೆ.

Ad Widget . Ad Widget .

ಬಜೆಟ್‍ನಲ್ಲಿ ಮೀಸಲಿಟ್ಟಿದ್ದ 35 ಸಾವಿರ ಕೋಟಿ ರೂ. ಏನಾಯಿತು? ಇದುವರೆಗೂ ಎಷ್ಟು ಮೊತ್ತದ ವ್ಯಾಕ್ಸಿನ್ ಖರೀದಿಗೆ ಆದೇಶ ನೀಡಲಾಗಿದೆ. 3 ಲಸಿಕೆಗಳ ಖರೀದಿಗೆ ಯಾವಾಗ ಆದೇಶ ಕೊಡಲಾಯಿತು ಮತ್ತು ಎಷ್ಟು ಬೆಲೆ? ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್-ವಿ ಖರೀದಿಯ ದಾಖಲೆ ನೀಡಿ ಎಂದು ಆದೇಶಿಸಿದೆ.
ಲಸಿಕೆ ಖಾಸಗಿ ಪಾಲಾಗ್ತಿರೋದು ತರ್ಕಬದ್ಧವಲ್ಲ. ಜನರ ಹಕ್ಕು ಉಲ್ಲಂಘನೆಯಾದಾಗ ಕಣ್ಮುಚ್ಚಿ ಕೂರಲು ಸಾಧ್ಯವಿಲ್ಲ. ಮೊದಲ ಡೋಸ್ ಎಷ್ಟು ಜನರಿಗೆ ನೀಡಲಾಗಿದೆ ಎಂದು ಮಾಹಿತಿ ಕೊಡಿ. ಎರಡನೇ ಅಲೆಯಲ್ಲಿ 18 ರಿಂದ 44 ವರ್ಷದೊಳಗಿನ ಜನರೇ ಸೋಂಕಿಗೆ ಒಳಗಾಗುತ್ತಿದ್ದಾರೆ. ಅಷ್ಟು ಮಾತ್ರ ಅಲ್ಲದೇ ಆಸ್ಪತ್ರೆಗೆ ವಾರಗಳವರೆಗೆ ಆಸ್ಪತ್ರೆಯಲ್ಲಿ ದಾಖಲಾಗುವ ಸನ್ನಿವೇಶ ಉಂಟಾಗಿದೆ. ಆದರೆ 18-44 ವರ್ಷದವರಿಗೆ ಇನ್ನು ಲಸಿಕೆ ನೀಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದೆ.

Ad Widget . Ad Widget .

ಲಸಿಕೆ ಹಂಚಿಕೆಗೆ ಡೆಡ್‍ಲೈನ್ ನಿಗದಿಪಡಿಸಬೇಕು. 2 ವಾರಗಳಲ್ಲಿ ವ್ಯಾಕ್ಸಿನ್ ಪಾಲಿಸಿ ದಾಖಲೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

Leave a Comment

Your email address will not be published. Required fields are marked *