Ad Widget .

ನವವಿವಾಹಿತ ಅರಣ್ಯವೀಕ್ಷಕ ಆತ್ಮಹತ್ಯೆ: ಕಾರಣ ನಿಗೂಢ

ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆ ಪಲ್ಲಿದಳಿಕೆ ನಿವಾಸಿ, ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದಲ್ಲಿ ನೆಡುತೋಪು ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಲಕೃಷ್ಣ ಗೌಡ (40) ಅವರು ಗುರುವಾರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Ad Widget . Ad Widget .

ಬಾಲಕೃಷ್ಣ ಗೌಡ ಅವರು ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯದಲ್ಲಿ 15 ವರ್ಷಗಳಿಂದ ನೆಡುತೋಪು ವೀಕ್ಷಕರಾಗಿ ಕರ್ತವ್ಯನಿರ್ವಹಿಸುತ್ತಿದ್ದರು. ಕಳೆದ 6 ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದರು.

Ad Widget . Ad Widget .

ಗುರುವಾರ ಬೆಳಗ್ಗೆ ಮನೆ ಸಮೀಪವೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ, ಪೊಲೀಸ್ ಇಲಾಖೆ ಸ್ಥಳಕ್ಕೆ ಭೇಟಿ ನೀಡಿದೆ.

Leave a Comment

Your email address will not be published. Required fields are marked *