Ad Widget .

ಶಿವಮೊಗ್ಗ: ನಿರ್ಬಂಧವಿದ್ದರೂ ಮೈದಾನಕ್ಕೆ ವಾಕಿಂಗ್ ಬಂದರು | ಪೊಲೀಸರಿಂದ ವಾಹನ ಸೀಜ್ | ವಾಕರ್ಸ್ ಲಾಕ್

ಶಿವಮೊಗ್ಗ: ನಿರ್ಬಂಧದ ನಡುವೆ ವಾಕಿಂಗ್ ಗೆ ಬಂದವರನ್ನು ಪೊಲೀಸರು ಬಂಧಿಸಿ ವಾಹನಗಳನ್ನು ವಶಪಡಿಸಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Ad Widget . Ad Widget .

ಶಿವಮೊಗ್ಗದ ನೆಹರು ಸ್ಟೇಡಿಯಮ್ ಅನ್ನು ಲಾಕ್ ಡೌನ್ ನಿಮಿತ್ತ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ದಿನಗಳಲ್ಲಿ ಮೈದಾನದಲ್ಲಿ ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದವರು ಇಂದು ಸ್ಟೇಡಿಯಂ ಪಕ್ಕದಲ್ಲಿ ವಾಕಿಂಗ್ ಮಾಡಿದ್ದಾರೆ. ಇದು ಪೊಲೀಸರ ಗಮನಕ್ಕೆ ಬಂದಿದ್ದು, ಕೋವಿಡ್ ನಿಯಮ ಉಲ್ಲಂಘಿಸಿ ವಾಕಿಂಗ್ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿ ಅವರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಯಮ ಉಲ್ಲಂಘಿಸಿದವರಿಗೆ ವ್ಯಾಯಾಮ ಮಾಡಿಸಿ ಪಾಠ ಹೇಳಿದ್ದು, ಈ ತುರ್ತುಪರಿಸ್ಥಿತಿಯಲ್ಲಿ ಪೊಲೀಸರ ಮೇಲಿರುವ ಒತ್ತಡದ ಬಗ್ಗೆ ತಿಳಿ ಹೇಳಿದ್ದಾರೆ.

Ad Widget . Ad Widget .

ಇನ್ನು ಲಾಕ್ಡೌನ್ ಮುಗಿಯುವವರೆಗೆ ವಾಹನಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಹೇಳಿದ್ದಾರೆ. ಪೊಲೀಸ್ ವಶದಲ್ಲಿರುವವನ್ನು ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ಬಂದರಷ್ಟೇ ಮನೆಗೆ ಬಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *