Ad Widget .

ಪ್ರೀತಿ ಕೊಂದ ಕೊಲೆಗಾರ: ಮುದ್ದಿನ ಹೆಂಡತಿಗೆ ಹಳ್ಳ ತೋಡಿದ ಕಿರಾತಕ

ಪ್ರೀತಿಸಿ‌ ಮದುವೆಯಾದ ಮುದ್ದಿನ ಹೆಂಡತಿಯನ್ನು ತಾನೇ ಕೈಯಾರೆ ಕೊಂದ ಕಿರಾತಕನೋರ್ವ ಕಂಬಿ ಎಣಿಸುತ್ತಿರುವ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ. ಇಲ್ಲಿನ ನಾರಾಯಣಗಟ್ಟ ಹಳ್ಳಿ ಎಂಬಲ್ಲಿ ಕೃತ್ಯ ನಡೆದಿದ್ದು, ಸರೋಜಾ(22) ಎಂಬಾಕೆ ಕೊಲೆಗೀಡಾದ ದುರ್ದೈವಿ. ಪುಟ್ಟಸ್ವಾಮಿ ಅಲಿಯಾಸ್ ಶರತ (25) ಮತ್ತು ಸರೋಜಾ ಕಳೆದ ಒಂದು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದರು. ಅಂತರ್ಜಾತಿಯಾದರೂ ಸಂತೋಷವಾಗಿದ್ದ ಈ ಪುಟ್ಟ ಕುಟುಂಬಕ್ಕೆ ಅದ್ಯಾರ ಕಣ್ಣು ಬಿದ್ದಿತ್ತೋ ಏನೋ.

Ad Widget . Ad Widget .

ಕಳೆದ ದಿನ ಗಂಡ ಹೆಂಡತಿ ಮಧ್ಯೆ ಗಲಾಟೆ ಪ್ರಾರಂಭವಾಗಿದೆ. ಗಲಾಟೆ ತಾರಕಕ್ಕೇರಿದ್ದು ಗಂಡ ಶರತ್ ಕಲ್ಲನ್ನು ಎತ್ತಿ ಹಾಕಿ ಹೆಂಡತಿ ಸರೋಜಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಹತ್ಯೆಗೀಡಾದ ಸರೋಜ 2 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಸದ್ಯ ಕೊಲೆಗೈದ ಪುಟ್ಟಸ್ವಾಮಿ(ಶರತ್) ಆರೋಪಿಯನ್ನು ಗ್ರಾಮಾಂತರ ಠಾಣೆಯ ಪೋಲಿಸರು ಬಂಧಿಸಿ ದೂರು ದಾಖಲಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *