ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸಿ | ನೂತನ ವೈದ್ಯರಿಗೆ ಸಚಿವ ಸುಧಾಕರ್ ಕರೆ

ಬೆಂಗಳೂರು: ನೂತನವಾಗಿ ನೇಮಕಗೊಂಡ ಸರಕಾರಿ ವೈದ್ಯರುಗಳಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಸ್ವಾಗತ ಕೋರಿ ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದ್ದಾರೆ.

Ad Widget ... ..

ರಾಜ್ಯವ್ಯಾಪಿ ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ಸರ್ಕಾರದ ವತಿಯಿಂದ ನೇಮಕವಾದ 715 ಹಿರಿಯ ತಜ್ಞ ವೈದ್ಯರು ಮತ್ತು 1,048 ಸಾಮಾನ್ಯ ವೈದ್ಯಾಧಿಕಾರಿಗಳನ್ನು ಉದ್ದೇಶಿಸಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಭಾಷಣ ಮಾಡಿದ್ದು, ಆರೋಗ್ಯ ಇಲಾಖೆಗೆ ಬರಮಾಡಿಕೊಂಡಿದ್ದಾರೆ.

Ad Widget

ಇಂದು ವರ್ಚುವಲ್ ವೇದಿಕೆಯ ಭಾಷಣದ ಮೂಲಕ ವೈದ್ಯರನ್ನು ಸ್ವಾಗತಿಸಿದ ಸಚಿವರು, ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸಿ ವೃತ್ತಿ ಘನತೆಯನ್ನು ಎತ್ತಿ ಹಿಡಿಯುವಂತೆ ಕರೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿಯಾಗಿದ್ದಾರೆ.

Leave a Comment

Your email address will not be published. Required fields are marked *