Ad Widget .

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ | ತಿರಸ್ಕಾರ ಭಾವನೆಯಿಂದ ಮನನೊಂದು ಕೃತ್ಯವೆಸಗಿದರೆ…?

ಚಾಮರಾಜನಗರ: ತಂದೆ-ತಾಯಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಮನೆಯ ನಾಲ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಮೂಕಹಳ್ಳಿ ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಮಹದೇವಪ್ಪ(46), ಇವರ ಪತ್ನಿ ಮಂಗಳಮ್ಮ (35), ಮಕ್ಕಳಾದ ಜ್ಯೋತಿ (14) ಮತ್ತು ಶ್ರುತಿ (12) ಆತ್ಮಹತ್ಯೆ ಮಾಡಿಕೊಂಡವರು.

Ad Widget . Ad Widget .

ಇಂದು ಬೆಳಿಗ್ಗೆ ಮಹಾದೇವಪ್ಪ ಕೆಲಸಕ್ಕೆ ತೆರಳುವ ಮನೆಯವರು ಕೆಲಸಕ್ಕೆಂದು ಕರೆಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಮದುವೆಯಾಗಿರುವ ತನ್ನ ಮಗಳಿಗೆ ಕರೆ ಮಾಡಿದ್ದ ಮಹದೇವಪ್ಪ ಸದ್ಯಕ್ಕೆ ಈ ಕಡೆ ಬರುವುದು ಬೇಡ ಎಂದಿದ್ದರು. ಸ್ಥಳೀಯವಾಗಿ ಬಹು ಒಡನಾಟದಿಂದಿದ್ದ ಮಹದೇವಪ್ಪ ಅವರಿಗೆ ಕೆಲ ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಬಂದಿತ್ತು. ಆನಂತರ ಮನೆಯಲ್ಲೇ ಇದ್ದ ಮಹಾದೇವಪ್ಪ ಹಾಗೂ ಕುಟುಂಬವನ್ನು ಊರಿನ ಕೆಲ ಜನರು ತಿರಸ್ಕಾರ ಭಾವದಿಂದ ನೋಡುತ್ತಿದ್ದರು ಮತ್ತು ಕೆಲಸಕ್ಕೆ ತೆರಳಲಾಗದೆ ಜೀವನ ಸಾಗಿಸುವಲ್ಲಿ ಕುಟುಂಬ ತುಂಬಾ ನೊಂದಿತ್ತು ಎನ್ನಲಾಗಿದೆ. ಇದೇ ಇವರ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *