ಬೆಂಗಳೂರು : ಈಗಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಮಪುರಾಣ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮದು ಒಪ್ಪಿತ ಸಂಬಂಧವಾಗಿತ್ತು ಎಂಬುದಾಗಿ ತಿಳಿಸಿದ್ದರು. ಈ ಮೂಲಕ ಸ್ಪೋಟಕ ಟ್ವಿಸ್ಟ್ ನೀಡಿದ್ದರು. ಇದಾದ ಬಳಿಕ ಈಗ ಮತ್ತೆ ಸಿಡಿ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಪಡೆದಿದೆ. ಎಸ್‌ಐಟಿ ಅಧಿಕಾರಿಗಳು, ಆರೋಪಿಗಳಿಗೆ ಜಾಮೀನು ನೀಡದಂತೆ ಕೋರ್ಟ್ ಗೆ ಸಲ್ಲಿಸಿರುವಂತ ಮನವಿ, ಅಚ್ಚರಿ ಮೂಡಿಸಿದೆ.
ಹೌದು.. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ದಿನಕ್ಕೊಂದು ತಿರುವು ಪಡೆಯುತ್ತಿದೆ
ಪ್ರಕರಣದ ಪ್ರಮುಖ ಆರೋಪಿಗಳಾದ ನರೇಶ್ ಗೌಡ, ಶ್ರವಣ್ ಕೋರಿ ಸಲ್ಲಿಸಿರುವಂತ ಜಾಮೀನು ಅರ್ಜಿಗೆ ಎಸ್ ಐಟಿ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಇಂತಹ ಆಕ್ಷೇಪಣೆಯ ಮಾಹಿತಿ ಬಹಿರಂಗವಾಗಿದ್ದು, ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತೆ ಆಗಿದೆ.
ಎಸ್‌ಐಟಿ ಅಧಿಕಾರಿಗಳು ಸಿಡಿ ಸಂತ್ರಸ್ತ ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರನ್ನು ಮೊಬೈಲ್, ವಾಟ್ಸ್ ಆಪ್, ವೀಡಿಯೋ ಕಾಲ್ ಮೂಲಕ ಸಂಪರ್ಕಿಸುವಂತೆ ತಿಳಿಸಿದ್ದರು ಎನ್ನುವ ಸ್ಪೋಟಕ ಮಾಹಿತಿ ಕೋರ್ಟ್ ಮುಂದೆ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೇ, ಲೈಂಗಿಕ ಸಂಪರ್ಕವೂ ಸುಲಿಗೆ, ಬ್ಲಾಕ್ ಮೇಲ್ ಉದ್ದೇಶದಿಂದಲೇ ಆಗಿರೋದು ಎಂಬುದಾಗಿ ಮಾಹಿತಿಯನ್ನು ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಇದಷ್ಟೇ ಅಲ್ಲದೇ ಸಿಡಿ ಗ್ಯಾಂಗ್ ಹನಿಟ್ರ್ಯಾಫ್ ಮಾಡಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ಹಲವು ಬಾರಿ ಹಣ ಪಡೆದಿದ್ದಾರೆ. ಇದಕ್ಕೆ ಶಾಸಕ ಎಂ.ವಿ.ನಾಗರಾಜ್ ಕೂಡ ಪೂರಕ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪ್ರಕರಣ ತನಿಖೆಯ ಹಂತದಲ್ಲಿದ್ದು, ಪ್ರಕರಣದ ಆರೋಪಿಗಳಾದಂತ ಶ್ರವಣ್, ನರೇಶ್ ಗೌಡಗೆ ಜಾಮೀನು ನೀಡದಂತೆ ಎಸ್ ಐಟಿ ಮನವಿ ಮಾಡಿದೆ. ಈ ಮೂಲಕ ಸಿಡಿ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಂತಾಗಿದೆ.