Ad Widget .

ಸರ್ಕಾರದ ಮೇಲಿನ ಮಾಧ್ಯಮಗಳ ಟೀಕೆಯನ್ನು ದೇಶದ್ರೋಹ ಎಂದು ಪರಿಗಣಿಸಲಾಗದು: ಸುಪ್ರೀಂ

ನವದೆಹಲಿ: ಸರ್ಕಾರದ ಕೆಲಸಗಳು ಅಥವಾ ನೀತಿ-ನಿಯಮಗಳನ್ನು ಟೀಕಿಸಿ ಮಾಧ್ಯಮಗಳು ವರದಿ ಮಾಡಿದರೆ ಅದನ್ನು ದೇಶದ್ರೋಹ ಎಂದು ಪರಿಗಣಿಸಲಾಗದು ಎಂದು ಸುಪ್ರೀಂಕೋರ್ಟ್ ಹೇಳಿದೆ.

Ad Widget . Ad Widget .

ಆಂಧ್ರ ಪ್ರದೇಶ ಸರ್ಕಾರದ ವಿರುದ್ಧ ಅಲ್ಲಿನ ಟಿವಿ5 ಹಾಗೂ ಎಬಿಎನ್ ಆಂಧ್ರಜ್ಯೋತಿ ಸುದ್ದಿವಾಹಿನಿಗಳು ಅಲ್ಲಿನ ಸಂಸದರೊಬ್ಬರ ನಿಲುವನ್ನು ಪ್ರಕಟಿಸಿ, ದೇಶದ್ರೋಹ ಆರೋಪ ಎದುರಿಸುತ್ತಿದ್ದವು. ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ, ಸುಪ್ರೀಂಕೋರ್ಟ್ ಟಿವಿ ಚಾನೆಲ್ ಗಳ ಮೇಲೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿದೆ.

Ad Widget . Ad Widget .

ದೇಶದ್ರೋಹ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಈಗಾಗಲೇ ಆರೋಪಗಳನ್ನು ಎದುರಿಸುತ್ತಿರುವ ಮಾಧ್ಯಮಗಳ ಮನವಿಗೆ 4 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಡಿವೈ ಚಂದ್ರಚೂಡ ನೇತೃತ್ವದ ಪೀಠ ಹೇಳಿದೆ. ಹಾಗೂ ಸರ್ಕಾರದ ವಿರುದ್ಧದ ನಿಲುವುಗಳನ್ನು ಪ್ರಕಟಿಸಿದ ಸುದ್ದಿವಾಹಿನಿಗಳ ಸಿಬ್ಬಂದಿಗಳ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರರಾವ್ ಹಾಗೂ ಎಸ್ ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠ ಆದೇಶಿಸಿದೆ. ಮಾಧ್ಯಮಗಳಿಗೆ ಸರ್ಕಾರದ ಪರವಾಗಿ ಹಾಗೂ ಸರ್ಕಾರದ ವಿರುದ್ಧವಾಗಿ ತನ್ನ ನಿಲುವು ಪ್ರಕಟಿಸುವ ಪೂರ್ಣ ಅಧಿಕಾರವಿದೆ ಎಂದು ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಹೇಳಿದೆ.

Leave a Comment

Your email address will not be published. Required fields are marked *