ಪುತ್ತೂರು: ಭಿನ್ನ ಕೋಮಿನ ಯುವಕನೋರ್ವ ಮೆಡಿಕಲ್‌ನ ಒಳಗೆ ನುಗ್ಗಿ ಮಹಿಳಾ ಸಿಬ್ಬಂದಿಯ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಜೂ.1ರಂದು ಈಶ್ವರಮಂಗಲದಲ್ಲಿ ನಡೆದಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪೇಟೆಯಲ್ಲಿರುವ ಮೆಡಿಕಲ್‌ಗೆ ಔಷಧಿ ಖರೀದಿಸಲು ಬಂದಿರುವ ಯುವಕ ಮೆಡಿಕಲ್‌ನಲ್ಲಿ ಯುವತಿಯೋರ್ವಳೆ ಇರುವುದನ್ನು ಗಮನಿಸಿ ಮೆಡಿಕಲ್ ಒಳನುಗ್ಗಿದ್ದು ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಯುವತಿ ಕೂಗಿಕೊಂಡಾಗ ಅಲ್ಲಿನ ಸ್ಥಳೀಯರು ಜಮಾಯಿಸಿ, ಆರೋಪಿ ಯುವಕನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.






