ಬೆಂಗಳೂರು: ಮುಂದಿನ ವರ್ಷ ರೈತರಿಗೆ 20,810 ಕೋಟಿಗೂ ಅಧಿಕ ನೀಡುವ ಗುರಿ ಹೊಂದಲಾಗಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಕಳೆದ ವರ್ಷ ಅಂದರೆ 2020-21 ನೇ ಸಾಲಿನಲ್ಲಿ 15,400 ಕೋಟಿಗೂ ಅಧಿಕ ಬೆಳೆಸಾಲ ವಿತರಿಸಲಾಗಿತ್ತು. ಈ ಬಾರಿ ಅಂದರೆ 2021-22 ನೇ ಸಾಲಿಗೆ ಈಗಾಗಲೇ ಗುರಿ ನಿಗದಿಪಡಿಸಲಾಗಿದ್ದು ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ. ಮೂರು ಕೋಟಿಗೂ ಅಧಿಕ ರೈತರು ಫಲಾನುಭವಿಗಳಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಕಳೆದ ವರ್ಷ ಹೆಚ್ಚಿನ ಇಲ್ಲ ಸಹಕಾರಿ ಬ್ಯಾಂಕುಗಳ ಶಾಖೆಗಳು ನೀಡಿದ ಗುರಿ ಸಾಧಿಸಿದ್ದವು, ಗುರಿತಲುಪದ ಬ್ಯಾಂಕುಗಳಿಗೆ ಈ ಬಾರಿ ಹೆಚ್ಚಿನ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.