Ad Widget .

ಟ್ಯೂಷನ್ ನಡುವೆ ಒಂದು ಲವ್ ಕಹಾನಿ: 11ನೇ‌ ತರಗತಿ ವಿದ್ಯಾರ್ಥಿ ಜೊತೆ ಶಿಕ್ಷಕಿ ಎಸ್ಕೇಪ್

ಹರಿಯಾಣ: ಇಲ್ಲಿನ ಪಾಣಿಪತ್ ನಲ್ಲಿ ಕೊರೊನಾ ಮಧ್ಯೆ ಗುರು- ಶಿಷ್ಯ ಓಡಿಹೋಗಿರುವ ಅಪರೂಪದ ಘಟನೆಯೊಂದು ವರದಿಯಾಗಿದೆ. ಟ್ಯೂಷನ್ ಕೊಡುತ್ತಿದ್ದ ಶಿಕ್ಷಕಿಯೊಬ್ಬಳು ವಿದ್ಯಾರ್ಥಿಯೊಂದಿಗೆ ಪ್ರೇಮಾಂಕುರ ಗೊಂಡು ಇಬ್ಬರು ಮನೆ ಬಿಟ್ಟು ಓಡಿ ಹೋಗಿರುವ ಪ್ರಕರಣ ನಡೆದಿದೆ.

Ad Widget . Ad Widget .

ಕೊರೊನಾದಿಂದಾಗಿ ಶಾಲೆ ಕಾಲೇಜುಗಳು ಮುಚ್ಚಿದೆ. ಪಾಣಿಪತ್ ನ ದೇಶರಾಜು ಕಾಲೋನಿಯ ಖಾಸಗಿ ಶಾಲೆಯೊಂದರ ಶಿಕ್ಷಕಿ ಅದೇ ಕಾಲೋನಿಯ ವಿದ್ಯಾರ್ಥಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಳು. ಕಳೆದ ಎರಡು ವರ್ಷಗಳಿಂದ ಟ್ಯೂಷನ್ ಕೊಡುತ್ತಿದ್ದಳಂತೆ ಟೀಚರ್. ಆದರೆ ಕೊರೊನಾ ಬಂದ ನಂತರ 2 ಗಂಟೆ ಇದ್ದ ಟ್ಯೂಷನ್ ನಾಲ್ಕು ಗಂಟೆ ತನಕ ಬದಲಾಯಿತು. ‌

Ad Widget . Ad Widget .

ಟ್ಯೂಷನ್ ಮಧ್ಯೆ 11ನೇ ತರಗತಿಯಲ್ಲಿದ್ದ 17 ವರ್ಷದ ಬಾಲಕ ಹಾಗೂ ಟೀಚರ್​ ನಡುವೆ ಪ್ರೀತಿ ಹುಟ್ಟಿದ್ದು ಇಬ್ಬರೂ ಇದೀಗ ಪರಾರಿಯಾಗಿದ್ದಾರೆ.

ಮೇ 29ರಂದು ಮಧ್ಯಾಹ್ನ 2 ಗಂಟೆಗೆ ಟೀಚರ್​ ಮನೆಗೆ ಹೋದ ಮಗ ನಂತರ ಮನೆಗೆ ವಾಪಸು ಬಂದಿಲ್ಲ ಎಂದು ಕಾಣೆಯಾಗಿರುವ ಬಾಲಕನ ತಂದೆ ದೂರು ನೀಡಿದ್ದಾರೆ. ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಶಿಕ್ಷಕಿಯ ಮೇಲೆ ಅಪ್ರಾಪ್ತ ಬಾಲಕನ ಅಪಹರಣ ಕೇಸ್ ದಾಖಲಾಗಿದೆ. ಟೀಚರ್​ಗೆ ಮದುವೆಯಾಗಿ ವಿಚ್ಛೇದನವೂ ಆಗಿರುವುದಾಗಿ ತಿಳಿದುಬಂದಿದೆ. ಸದ್ಯ ಕಾಣೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Leave a Comment

Your email address will not be published. Required fields are marked *