May 2021

ಗರಿಷ್ಠ 150 ವರ್ಷಗಳವರೆಗೂ ಮಾನವನು ಬದುಕಬಲ್ಲನು !

ನ್ಯೂಯಾರ್ಕ್: ಮಾನವನ ಆಯುಷ್ಯದ ಮೇಲೆ ನಿರಂತರ ಸಂಶೋಧನೆಗಳು ನಡೆಯುತ್ತಲೇ ಬಂದಿದೆ. ಇದೀಗ ಮಾನವನ ಜೀವಿತಾವಧಿಯ ಮೇಲೆ ನಡೆದ ಸಂಶೋಧನೆಯು ಮಾನವನ ಜೀವಿತಾವಧಿ ಗರಿಷ್ಠ 120-150 ವರ್ಷ ಎಂದು ತಿಳಿಸಿದೆ. ನೇಚರ್ ಕಮ್ಯೂನಿಕೇಷನ್‌ ಜರ್ನಲ್‌ನಲ್ಲಿ ಮಾನವ ಕ್ಯಾನ್ಸರ್, ಹೃದ್ರೋಗ ಅಥವಾ ಅಪಘಾತಗಳಿಂದ ಸಾಯದೇ ಉಳಿದರೆ 120-150ವರ್ಷಗಳ ಕಾಲ ಬದುಕಬಹುದು ಎಂದು ವರದಿಯಾಗಿದೆ.ಮನುಷ್ಯನ ವಯಸ್ಸಾಗುವ ವೇಗವು ಆತನ ಜೀವಾತಾವಧಿಯನ್ನು ನಿರ್ಧರಿಸುತ್ತದೆ.‌ವಯಸ್ಸಾದಂತೆ ದೇಹದ ಚಟುವಟಿಗಳಿಗೆ ರಕ್ತಕಣಗಳು ಸ್ಪಂದಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ವಯಸ್ಸಾದ ವ್ಯಕ್ತಿಯ ಚೇತರಿಕೆಗೆ ಅಧಿಕ ಸಮಯ ಬೇಕಾಗುತ್ತದೆ. ಆದರೆ, ಮನುಷ್ಯನ […]

ಗರಿಷ್ಠ 150 ವರ್ಷಗಳವರೆಗೂ ಮಾನವನು ಬದುಕಬಲ್ಲನು ! Read More »

ರಾಜ್ಯ ರಾಜಕೀಯದಲ್ಲಿ ಗರಿಗೆದರಿದ ಬೆಳವಣಿಗೆ | ಮತ್ತೆ ಬಿಜೆಪಿ- ಜೆಡಿಎಸ್ ಮೈತ್ರಿ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಯಾರೂ ನಿರೀಕ್ಷಿಸಲಾಗದ ಬೆಳವಣಿಗೆಗಳು ಗರಿಗೆದರುತ್ತಿದ್ದು ಮತ್ತೆ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಕುರಿತು ಆಲೋಚಿಸುತ್ತಿದೆ ಎನ್ನಲಾಗಿದೆ. ರಾಜ್ಯ ಬಿಜೆಪಿ ನಾಯಕರು ನಾಯಕತ್ವ ಬದಲಾವಣೆಗೆ ಹೈಕಮಾಂಡ್ ನ ಕದ ತಟ್ಟಿದ್ದು, ಈ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.ಈಗಾಗಲೇ ಕೆಲ ಪ್ರಭಾವಿ ನಾಯಕರು ಯಡಿಯೂರಪ್ಪ ನಾಯಕತ್ವ ಬದಲಾವಣೆಗಾಗಿ ದೆಹಲಿಯಲ್ಲಿ ಝಂಡಾ ಹೂಡಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯದಿದ್ದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ತಂತ್ರಗಳನ್ನು ರೂಪಿಸುತ್ತಿರುವುದಾಗಿ ಹೇಳಲಾಗುತ್ತಿದೆ.ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಹೈಕಮಾಂಡ್

ರಾಜ್ಯ ರಾಜಕೀಯದಲ್ಲಿ ಗರಿಗೆದರಿದ ಬೆಳವಣಿಗೆ | ಮತ್ತೆ ಬಿಜೆಪಿ- ಜೆಡಿಎಸ್ ಮೈತ್ರಿ? Read More »

ಆಸ್ಪತ್ರೆ ಆವರಣದಲ್ಲೇ ಹೆರಿಗೆ | ಕೆಳಗೆ ಬಿದ್ದು ಶಿಶು ಮೃತ್ಯು

ಮಂಡ್ಯ: ಹೆರಿಗೆ ನೋವು ತೀವ್ರಗೊಂಡು ಗರ್ಬಿಣಿಯೊಬ್ಬರು ದಯವಿಟ್ಟು ಅಡ್ಮಿಟ್​ ಮಾಡಿಕೊಳ್ಳಿ, ನಮ್ಮನ್ನು ಬದುಕಿಸಿ ಎಂದು ಗೋಗರೆದರೂ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಯೊಳಗೆ ಸೇರಿಸಿಕೊಳ್ಳದೆ, ಆಸ್ಪತ್ರೆ ಆವರಣದಲ್ಲೆ ಹೆರಿಗೆಯಾಗಿ, ನೆಲಕ್ಕೆ ಬಿದ್ದು ಮಗು ಮೃತಪಟ್ಟ ಆಘಾತಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ. ಇಂತಹ ಅಮಾನವೀಯ ಘಟನೆ ಮಂಡ್ಯ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಮುಂಭಾಗ ಇಂದು ಬೆಳಿಗ್ಗೆ ಸಂಭವಿಸಿದ್ದು, ನಿನ್ನೆ ಸೋನು ಎಂಬ ಗರ್ಬಿಣಿ ಹೆರಿಗೆಗೆ ದಿನವಾದ ಕಾರಣ ಆಸ್ಪತ್ರೆಗೆ ಬಂದಿದ್ದರು. ಕೋವಿಡ್ ರಿಪೋರ್ಟ್ ಇಲ್ಲ ಎನ್ನುವ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ಅಡ್ಮಿಟ್

ಆಸ್ಪತ್ರೆ ಆವರಣದಲ್ಲೇ ಹೆರಿಗೆ | ಕೆಳಗೆ ಬಿದ್ದು ಶಿಶು ಮೃತ್ಯು Read More »

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಇನ್ನಿಲ್ಲ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇಂದು ವಿಧಿವಶರಾಗಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಅವರು ನಿಧನಹೊಂದಿದ್ದಾರೆ. ಇತ್ತೀಚೆಗೆ ಅವರು ಕೊರೋನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದರು.ಬಳಿಕ ಉಸಿರಾಟದ ಸಮಸ್ಯೆ ತಲೆದೋರಿದ ಕಾರಣ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋ ಸಹಜ ಇತರ ಕಾಯಿಲೆಯಿಂದ ಕೂಡ ಅವರು ಬಳಲುತ್ತಿದ್ದರು. ಸಮಾಜದ ಎಲ್ಲ ಪ್ರಸಕ್ತ ವಿದ್ಯಮಾನಗಳಿಗೂ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತಿದ್ದರು. ಸರಳತೆಗೆ ಹೆಸರುವಾಸಿಯಾಗಿದ್ದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಇನ್ನಿಲ್ಲ Read More »

ಲಸಿಕೆ ಪಡೆದು ಸರ್ಟಿಫಿಕೇಟ್ ಸ್ಟೇಟಸ್ ಹಾಕುವ ಮುನ್ನ ಇರಲಿ ಎಚ್ಚರ…!

ನವದೆಹಲಿ: ಕೊರೊನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ವ್ಯಾಕ್ಸಿನೇಷನ್ ಕಾರ್ಯಕ್ರಮ ಹಂತ ಹಂತವಾಗಿ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ವ್ಯಾಕ್ಸೀನ್ ಪಡೆದವರು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದು ಟ್ರೆಂಡ್ ಆಗಿ ಬಿಟ್ಟಿದೆ. ಇದೀಗ ಕೇಂದ್ರ ಗೃಹ ಸಚಿವಾಲಯ ಜನತೆಗೆ ಎಚ್ಚರಿಕೆಯ ಸಂದೇಶ ನೀಡಿದ್ದು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹಂಚಿಕೊಳ್ಳದಂತೆ ತಿಳಿಸಿದೆ. ಪ್ರಸ್ತುತ 18 ರಿಂದ 44 ವರ್ಷದವರಿಗೆ ಲಸಿಕೆ ನೀಡಲಾಗುತ್ತಿದೆ. ಈ ವಯಸ್ಸಿನ ಅವರೆಲ್ಲರೂ ಸ್ಮಾರ್ಟ್ಫೋನ್ ಉಳ್ಳವರಾಗಿದ್ದು, ಅಪಾಯವನ್ನು ಅರಿಯದೆ ಲಸಿಕೆ ಪಡೆದ ನಂತರ ಸರ್ಟಿಫಿಕೇಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ

ಲಸಿಕೆ ಪಡೆದು ಸರ್ಟಿಫಿಕೇಟ್ ಸ್ಟೇಟಸ್ ಹಾಕುವ ಮುನ್ನ ಇರಲಿ ಎಚ್ಚರ…! Read More »

ಆನ್ ಲೈನ್ ಕ್ಲಾಸ್ ವೇಳೆ ಅರೆಬೆತ್ತಲೆ ಶೋ | ಕಾಮುಕ ಉಪನ್ಯಾಸಕ ಅರೆಸ್ಟ್

ಚೆನ್ನೈ: ಈತ ವೃತ್ತಿಯಲ್ಲಿ ಶಿಕ್ಷಕ. ಆದರೆ ಮಾಡಿರುವುದು ಖಚಡಾ ಕೆಲಸ. ಹೌದು, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಶಿಕ್ಷಕನೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಚೆನ್ನೈನಲ್ಲಿ ಸೋಮವಾರ ನಡೆದಿದೆ. ಜಿ.ರಾಜಗೋಪಾಲನ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈತನ ವಿರುದ್ಧ ದೂರಿದ್ದಾರೆ. ತರಗತಿಯಲ್ಲಿ ಅಸಭ್ಯವಾಗಿ ಮುಟ್ಟುವುದು ಹಾಗು ಅಶ್ಲೀಲವಾಗಿ ಮಾತನಾಡುವುದು ಈತನ ಕೆಟ್ಟ ಚಾಳಿ ಎಂದು ವಿದ್ಯಾರ್ಥಿಯರು ಆರೋಪಿಸಿದ್ದಾರೆ. ಕೋವಿಡ್ ಕಾರಣದಿಂದಾಗಿ ಪ್ರಾರಂಭವಾಗಿರುವ ಆನ್ ಲೈನ್ ಕ್ಲಾಸ್ ನಲ್ಲಿಯೂ ಈತ

ಆನ್ ಲೈನ್ ಕ್ಲಾಸ್ ವೇಳೆ ಅರೆಬೆತ್ತಲೆ ಶೋ | ಕಾಮುಕ ಉಪನ್ಯಾಸಕ ಅರೆಸ್ಟ್ Read More »

ಮೂಲ್ಕಿ | ಫೇಸ್‌ಬುಕ್‌ನಲ್ಲಿ ಇಸ್ರೇಲ್ ಪರ ಸಂದೇಶ; ಬೇಕರಿ ಮಾಲೀಕನ ಮೇಲೆ ಹಲ್ಲೆ- ಐವರು ಯುವಕರ ಬಂಧನ

ಮೂಲ್ಕಿ: ಫೇಸ್‌ಬುಕ್‌ನಲ್ಲಿ ಇಸ್ರೇಲ್ ಪರ ಸಂದೇಶ ಹಾಕಿದ ಕಾರಣಕ್ಕೆ ಬೇಕರಿಯಲ್ಲಿ ದಾಂಧಲೆ ನಡೆಸಿ, ಮಾಲೀಕನಿಗೆ ಹಲ್ಲೆ ಮಾಡಿದ ಆರೋಪದಲ್ಲಿ ಐವರು ಯುವಕರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಘಟನಾ ವಿವರ: ಕಾರ್ನಾಡಿನ ಐಶಾನಿ ಬೇಕರಿ ನಡೆಸುತ್ತಿರುವ ಕುಂದಾಪುರ ಮೂಲದ ಸುರತ್ಕಲ್ ನಿವಾಸಿ ಯುವಕ ಫೇಸ್‌ಬುಕ್‌ನ ತನ್ನ ಖಾತೆಯಲ್ಲಿ, ಇಸ್ರೇಲ್ ಘಟನೆ ಬಗ್ಗೆ ಸಂದೇಶ ಹಾಕಿ ಪ್ಯಾಲಿಸ್ತೇನ್ ಉಗ್ರರ ವಿರುದ್ಧ ಕೈಗೊಂಡ ಕ್ರಮವನ್ನು ಬೆಂಬಲಿಸಿದ್ದರು. ಈ ಬಗ್ಗೆ ಆಕ್ರೋಶಗೊಂಡ ಸ್ಥಳೀಯ ಯುವಕರು ಬೇಕರಿಗೆ ನುಗ್ಗಿ ಬೆದರಿಕೆ ಹಾಕಿದ್ದಲ್ಲದೆ, ಯುವಕನಿಂದ ಕ್ಷಮೆ

ಮೂಲ್ಕಿ | ಫೇಸ್‌ಬುಕ್‌ನಲ್ಲಿ ಇಸ್ರೇಲ್ ಪರ ಸಂದೇಶ; ಬೇಕರಿ ಮಾಲೀಕನ ಮೇಲೆ ಹಲ್ಲೆ- ಐವರು ಯುವಕರ ಬಂಧನ Read More »

ರಾಜ್ಯದ ಮುಖ್ಯಮಂತ್ರಿ ಬದಲಾವಣೆಯ ಮಾತು | ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ ಬಿಎಸ್ ವೈ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳ ಬದಲಾವಣೆ ಎಂಬ ವಿಚಾರದಲ್ಲಿ ರಾಜ್ಯ ರಾಜಕಾರಣ ಮುಳುಗಿ ಹೋದಂತಿದೆ. ಈ ಕುರಿತು ಸ್ವತ: ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ಸ್ಥಾನಕ್ಕೆ ಕೆಲ ನಾಯಕರ ಹೆಸರು ಕೇಳಿಬರುತ್ತಿದೆ. ಪ್ರತಿನಿತ್ಯ ನನ್ನ ಬಳಿ ಬರುವವರ, ಜತೆಯಲ್ಲಿಯೇ ಇರುವವರ ಹೆಸರೇ ಕೇಳಿಬರುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತ ಸಚಿವರ ಬಳಿ ಚರ್ಚೆ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಜೂನ್ 7ರಂದು ಬಿಜೆಪಿ ಶಾಸಕಾಂಗ ಪಕ್ಷದ

ರಾಜ್ಯದ ಮುಖ್ಯಮಂತ್ರಿ ಬದಲಾವಣೆಯ ಮಾತು | ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ ಬಿಎಸ್ ವೈ Read More »

ನೀರಿನ ಟ್ಯಾಂಕ್ ಗೆ ಬಿದ್ದ ಚಿರತೆಯ ರಕ್ಷಣೆ

ಕುಂದಾಪುರ:ಆಹಾರ ಹುಡುಕಿಕೊಂಡು ಬಂದು ನೀರಿನ ಟ್ಯಾಂಕ್ ಒಳಗೆ ಬಿದ್ದ ಚಿರತೆಯೊಂದನ್ನು ರಕ್ಷಿಸಲಾದ ಘಟನೆ ಮಂಗಳವಾರ ನಡೆದಿದೆ. ಕೊಡ್ಲಾಡಿಯ ಚಂದ್ರ ಶೆಟ್ಟಿಯವರ ಮನೆಯ ನೀರಿನ ಟ್ಯಾಂಕ್ ಗೆ ೫ ವರ್ಷದ ಗಂಡು ಚಿರತೆ ಮಂಗಳವಾರ ಮುಂಜಾನೆ ವೇಳೆಗೆ ಬಿದ್ದಿದೆ ಎನ್ನಲಾಗಿದ್ದು, ಮಧ್ಯಾಹ್ನ ಮನೆಯವರು ಗಮನಿಸಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಚಿರತೆಯನ್ನು ಅರಣ್ಯಧಿಕಾರಿಗಳು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನೀರಿನ ಟ್ಯಾಂಕ್ ಗೆ ಬಿದ್ದ ಚಿರತೆಯ ರಕ್ಷಣೆ Read More »

ಹೊಸ ಐಟಿ ನೀತಿ ಗ್ರಾಹಕರ ಖಾಸಗಿತನಕ್ಕೆ ದಕ್ಕೆಯುಂಟುಮಾಡಲಿದೆ | ಹೈಕೋರ್ಟ್ ಮೆಟ್ಟಿಲೇರಿದ ವಾಟ್ಸಪ್

ಹೊಸದಿಲ್ಲಿ: ಕೇಂದ್ರ ಸರ್ಕಾರ ಇಂದಿನಿಂದಿ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಐಟಿ ನೀತಿ ವಿರೋದಿಸಿ ವಾಟ್ಸಾಪ್ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಹೊಸ ನಿಯಮವು ವಾಟ್ಸಪ್ ಗ್ರಾಹಕರ ಖಾಸಗಿತನಕ್ಕೆ ದಕ್ಕೆ ತರಲಿದೆ ಎಂದು ಕಳವಳ ವ್ಯಕ್ತಪಡಿಸಿರುವ ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಹೊಸ ನಿಯಮದ ಪ್ರಕಾರ ನಾವು ಸಂದೇಶ ಕಳುಹಿಸಿದ ಮೂಲಗಳನ್ನು ಕಂಡುಹಿಡಿಯಬೇಕಾಗುತ್ತದೆ. ಇದು ಬಳಕೆದಾರರ ಖಾಸಗಿತನಕ್ಕೆ ಹಾನಿ ಮಾಡಲಿದೆ. ಸಾಮಾಜಿಕ ಮಾಧ್ಯಮಗಳು ಅಧಿಕಾರಿಗಳು ಬಯಸಿದ ಸಂದರ್ಭದಲ್ಲಿ ಸಂದೇಶವೊಂದರ ಮೊದಲ ಮೂಲ ಸೃಷ್ಟಿಕರ್ತನನ್ನು ಪತ್ತೆಹಚ್ಚುವುದು ಅಗತ್ಯ ಎಂದು

ಹೊಸ ಐಟಿ ನೀತಿ ಗ್ರಾಹಕರ ಖಾಸಗಿತನಕ್ಕೆ ದಕ್ಕೆಯುಂಟುಮಾಡಲಿದೆ | ಹೈಕೋರ್ಟ್ ಮೆಟ್ಟಿಲೇರಿದ ವಾಟ್ಸಪ್ Read More »