May 2021

ಬೆಳ್ತಂಗಡಿ | ವಿದ್ಯುತ್ ಆಘಾತಕ್ಕೊಳಗಾಗಿ ಲೈನ್ ಮ್ಯಾನ್ ಮೃತ್ಯು

ಬೆಳ್ತಂಗಡಿ: ತಂತಿ ದುರಸ್ತಿಗೊಳಿಸುತ್ತಿದ್ದಾಗ ಲೈನ್ ಮ್ಯಾನ್ ಒಬ್ಬರು ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟ ಘಟನೆ ಇಂದು ತಾಲೂಕಿನ ತೆಕ್ಕಾರು ಸಮೀಪದ ಪಿಂಡಿಕಲ್ಲು ಎಂಬಲ್ಲಿ ನಡೆದಿದೆ.ಕಲ್ಲೇರಿ ಸೆಕ್ಷನ್ ಮೆಸ್ಕಾಂನ ಲೈನ್ ಮ್ಯಾನ್ ವಿಕಾಸ್ ಮೃತಪಟ್ಟವರು. ಇವರು ಕಳೆದೆರಡು ದಿನಗಳಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಹಾಗಾಗಿ ಸರಿಪಡಿಸುವ ಕಾರ್ಯ ನಡೆಯುತ್ತಿತ್ತು. ಇದೇ ವೇಳೆ ಸ್ಥಳದಲ್ಲಿ ಕಂಬದ ಮೇಲೆ ದುರಸ್ತಿಕಾರ್ಯ ಕೈಗೊಂಡಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಬೇಟಿ ನೀಡಿದ್ದು, […]

ಬೆಳ್ತಂಗಡಿ | ವಿದ್ಯುತ್ ಆಘಾತಕ್ಕೊಳಗಾಗಿ ಲೈನ್ ಮ್ಯಾನ್ ಮೃತ್ಯು Read More »

ವಿರಾಟ್ ಒಬ್ಬ ಚಾಂಪಿಯನ್ ಆಟಗಾರ: ಟಿಮ್ ಪೇನ್

ಸಿಡ್ನಿ: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಟಿಮ್ ಪೇನ್ ಅವರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ. ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಸೀಸ್ ನಾಯಕ, ‘ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್. ನಾನು ಯಾವತ್ತೂ ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಚಾಂಪಿಯನ್ ಪ್ಲೇಯರ್. ತಂಡದ ಗೆಲುವಿಗಾಗಿ ಕೊನೆಯವರೆಗೂ ಹೋರಾಡುವ ಮೂಲಕ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸುತ್ತಾರೆ. ನಾನು ಕೊಹ್ಲಿ ಅವರನ್ನು ಮತ್ತು ಅವರ ಆಟವನ್ನು ತುಂಬಾ ಇಷ್ಟಪಡುತ್ತೇನೆ. ಅವರ ಚಾಲೆಂಜಿಂಗ್

ವಿರಾಟ್ ಒಬ್ಬ ಚಾಂಪಿಯನ್ ಆಟಗಾರ: ಟಿಮ್ ಪೇನ್ Read More »

ನನ್ನನ್ನು ಬಂಧಿಸಿ: ರಾಹುಲ್ ಗಾಂಧಿ ಟ್ವೀಟ್

ನವದೆಹಲಿ: ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಆಡಳಿತ ಸರ್ಕಾರ ತೆಗೆದುಕೊಳ್ಳುತ್ತಿರುವ ನಿಲುವಿನ ಕುರಿತಾಗಿ ಟ್ವೀಟ್ ಮಾಡುತ್ತಾ ಜಾಗೃತಿ, ಎಚ್ಚರಿಕೆ ನೀಡುತ್ತಿರುವ ಜೊತಗೆ ಇದೀಗ ನನ್ನನ್ನು ಬಂಧಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ದೆಹಲಿಯ ಕೆಲವು ಗೋಡೆಗಳ ಮೇಲೆ ಮೋದಿ ವಿರುದ್ಧ ಗೋಡೆ ಬರಹಗಳನ್ನು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ದೆಹಲಿ ಪೊಲೀಸರು ೧೭ ಜನರನ್ನು ಬಂಧಿಸಿ ಅವರ ವಿರುದ್ಧವಾಗಿ ೨೧ ಕೇಸ್‌ಗಳನ್ನು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಇಂತಹ ಒಂದು ಟ್ವೀಟ್

ನನ್ನನ್ನು ಬಂಧಿಸಿ: ರಾಹುಲ್ ಗಾಂಧಿ ಟ್ವೀಟ್ Read More »

ಸಾಯೋರು ಎಲ್ಲಾದರೂ ಸಾಯಲಿ: ಬಿಜೆಪಿ ಶಾಸಕ

ಚಿತ್ರದುರ್ಗ: ನಾನು ಇಲ್ಲಿ ಆಸ್ಪತ್ರೆ ಮಾಡೋದಿಲ್ಲ. ನನಗೆ ಅವಶ್ಯಕತೆ ಇಲ್ಲ. ಸಾಯೋರು ಎಲ್ಲಾದರೂ ಸಾಯಲಿ ಎಂದು ಉಡಾಫೆಯ ಉತ್ತರ ನೀಡುವ ಮೂಲಕ ಹೊಳಲ್ಕೆರೆ ಬಿಜೆಪಿ ಶಾಸಕ ಹಾಗೂ ಸಾರಿಗೆ ನಿಗಮ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಟೀಕೆಗೆ ಗುರಿಯಾಗಿದ್ದಾರೆ.ಜಿಲ್ಲೆಯಲ್ಲಿ ಕೋವಿಡ್ ವಾರ್ಡ್ ನಿರ್ಮಾಣದ ಕುರಿತಾಗಿ ಎಂ.ಚಂದ್ರಪ್ಪ, ಡಿಹೆಚ್‌ಓ ಡಾ.ಪಾಲಾಕ್ಷಗೆ ಹೇಳಿದ ವೀಡಿಯೋ ಸಂಭಾಷಣೆ ಇದಾಗಿದ್ದು, ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ ೫೦ ಬೆಡ್‌ನ ಕೋವಿಡ್ ವಾರ್ಡ್ ನಿರ್ಮಾಣದ ಕುರಿತಾಗಿ ಶಾಸಕರು ತಿಳಿಸಿದ್ದರು. ಆದರೆ ೧೦ ಆಕ್ಸಿಜನ್ ಬೆಡ್ ನಿರ್ಮಾಣದ ಬಗ್ಗೆ

ಸಾಯೋರು ಎಲ್ಲಾದರೂ ಸಾಯಲಿ: ಬಿಜೆಪಿ ಶಾಸಕ Read More »

ನೀವೆಲ್ಲಿದ್ದೀರೋ ಅಲ್ಲಿಗೆ ಬಂದು ಬೆಳೆ ಖರೀದಿಸ್ತಿನಿಯೆಂದ ಉಪೇಂದ್ರ

ಬೆಂಗಳೂರು: ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಸಿನಿ ಕಾರ್ಮಿಕರ ನೇರವಿಗೆ ನಿಂತಿದ್ದ ಸ್ಯಾಂಡಲ್‍ವುಡ್ ಸೂಪರ್ ಸ್ಟಾರ್ ಇದೀಗ ರೈತರು ಬೆಳೆದಿರುವ ಬೆಳೆಗೆ ಸೂಕ್ತ ಬೆಲೆ ಕೊಟ್ಟು ಖರೀದಿ ಮಾಡಲು ಮುಂದಾಗಿದ್ದಾರೆ. ಲಾಕ್‍ಡೌನ್ ನಿಂದ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರಿಂದ ತರಕಾರಿ ಖರೀದಿಸಿ ಅವಶ್ಯಕತೆ ಇರುವವರಿಗೆ ಹಂಚಲು ಮುಂದಾಗಿದ್ದಾರೆ ಈ ವಿಚಾರವನ್ನು ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ. ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಬೆಳೆಗಳನ್ನು ಎಲ್ಲಿ ಬೆಳದಿದ್ದಾರೋ ಅವರಿರುವ ಜಾಗಕ್ಕೆ ತೆರಳಿ

ನೀವೆಲ್ಲಿದ್ದೀರೋ ಅಲ್ಲಿಗೆ ಬಂದು ಬೆಳೆ ಖರೀದಿಸ್ತಿನಿಯೆಂದ ಉಪೇಂದ್ರ Read More »

ತೌಕ್ತೆ ಪರಿಣಾಮ: ಬೆಳ್ತಂಗಡಿಯ ಹಳ್ಳದಲ್ಲಿ ಕಾಣಿಸಿಕೊಂಡ ನೀರು ನಾಯಿಗಳು ಹಿಂಡು…!ಸ್ಥಳೀಯರಲ್ಲಿ ಅಚ್ಚರಿ

ಬೆಳ್ತಂಗಡಿ: ಮೇ17: ತೌಕ್ತೆ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೀಗಿರುವಾಗಲೇ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯಲ್ಲಿನ ಫಲ್ಗುಣಿ ನದಿ ಸಂಪರ್ಕಿಸುವ ಹಳ್ಳದಲ್ಲಿ ನೀರು ನಾಯಿಗಳು ಕಂಡು ಬಂದು ಅಚ್ಚರಿ ಮೂಡಿಸಿವೆ. ನೀರು ನಾಯಿಗಳು ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಇವುಗಳು ಇಲ್ಲಿ ಕಾಣಿಸಿಕೊಂಡಿರೋದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿವೆ. ನೀಳ ದೇಹ, ನೀರಿನಲ್ಲಿ ತೋಯ್ದ ತುಪ್ಪಳದ ಚರ್ಮ,ಚಪ್ಪಟೆಯಾದ ತಲೆ, ಬಲವಾದ ಬಾಲ, ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶಸೂಕ್ಷ್ಮ ಮೀಸೆಗೂದಲು

ತೌಕ್ತೆ ಪರಿಣಾಮ: ಬೆಳ್ತಂಗಡಿಯ ಹಳ್ಳದಲ್ಲಿ ಕಾಣಿಸಿಕೊಂಡ ನೀರು ನಾಯಿಗಳು ಹಿಂಡು…!ಸ್ಥಳೀಯರಲ್ಲಿ ಅಚ್ಚರಿ Read More »

ಅಕ್ಕ-ತಂಗಿಯರ ಒಟ್ಟಿಗೆ ವರಿಸಿದ ಯುವಕ: ಅಸಲಿ ಕಾರಣ ಗೊತ್ತೇ?

ಕೋಲಾರ.ಮೇ.17: ಸಾಮಾನ್ಯವಾಗಿ ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ಹುಡುಗ ಮದುವೆ ಆಗುವ ದೃಶ್ಯಗಳು ಸಿನಿಮಾದಲ್ಲಿ ಬರುತ್ತವೆ.‌ ಆದರೆ ಇಂಥಹುದೇ ಸಿನಿಮೀಯ ಘಟನೆಯೊಂದು ಕೋಲಾರದ ಮುಳುಬಾಗಿಲು ತಾಲೂಕಿನಲ್ಲಿ ನಡೆದಿದೆ. ಹಾಗಂತ ಈ ಸನ್ನಿವೇಶ ಬೇಕಂತಾನೇ ನಡೆದದ್ದಲ್ಲ. ಎಲ್ಲವೂ ತಂತಾನೆ ಸೃಷ್ಟಿಯಾಗಿ ಅಪರೂಪದ‌ ಮದುವೆಯೊಂದು‌ ನಡೆದು ಹೋಗಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಎನ್ನಲಾಗಿದ್ದು, ಸುಪ್ರಿಯಾ ಹಾಗೂ ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎಂಬಾತ ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾನೆ. ಸದ್ಯ, ಮದುವೆಯಾದ ಫೋಟೋ ಹಾಗೂ ಮದುವೆ

ಅಕ್ಕ-ತಂಗಿಯರ ಒಟ್ಟಿಗೆ ವರಿಸಿದ ಯುವಕ: ಅಸಲಿ ಕಾರಣ ಗೊತ್ತೇ? Read More »

ಸರ್ಕಾರ, ಸಾರ್ವಜನಿಕರ ನಿರ್ಲಕ್ಷ್ಯವೇ ಕೊರೊನಾ ಭೀಕರ ಪರಿಸ್ಥಿತಿಗೆ ಕಾರಣ: ಮೋಹನ್ ಭಾಗವತ್

ನವದೆಹಲಿ: ಪ್ರಸ್ತುತ ಕೊರೊನಾ ಭೀಕರ ಪರಿಸ್ಥಿತಿಗೆ ಮೊದಲ ಅಲೆ ಬಳಿಕ ಸರ್ಕಾರ, ಆಡಳಿತ ಹಾಗೂ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಿರುವುದೇ ಕಾರಣ ಎಂದು ಆರ್ ‌ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಈ ಮೂಲಕ ಸರ್ಕಾರ ಹಾಗೂ ಆಡಳಿತ ವರ್ಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕೊರೊನಾ ಮೊದಲ ಅಲೆಯ ಬಳಿಕ ವೈದ್ಯರು ಎಷ್ಟೇ ಎಚ್ಚರಿಕೆ ನೀಡಿದರೂ ಸರ್ಕಾರ, ಆಡಳಿತ ವರ್ಗ ಹಾಗೂ ಸಾರ್ವಜನಿಕರು, ಎಲ್ಲರೂ ಸುರಕ್ಷತೆಯನ್ನು ನಿರ್ಲಕ್ಷಿಸಿದ್ದೇವೆ. ಹೀಗಾಗಿಯೇ ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಇಂತಹ

ಸರ್ಕಾರ, ಸಾರ್ವಜನಿಕರ ನಿರ್ಲಕ್ಷ್ಯವೇ ಕೊರೊನಾ ಭೀಕರ ಪರಿಸ್ಥಿತಿಗೆ ಕಾರಣ: ಮೋಹನ್ ಭಾಗವತ್ Read More »

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಬೋಟ್ ಪಲ್ಟಿ – ಓರ್ವ ಸಾವು 

ಪಡುಬಿದ್ರೆ: ತೌಕ್ತೆ ಚಂಡಮಾರುತಕ್ಕೆ ಸಿಲುಕಿದ ಬೋಟು ಪಲ್ಟಿಯಾಗಿ ಓರ್ವ ಮೃತಪಟ್ಟು, ಐವರು ನಾಪತ್ತೆಯಾದ ಘಟನೆ ಪಡುಬಿದ್ರೆ ಬಿಚ್‌ನಲ್ಲಿ ನಡೆದಿದೆ. ಬೆಳಿಗ್ಗೆ 10ಗಂಟೆಯಿಂದ ಈ ಸಿಂಗಲ್ ಮೆಂಟೆನೆನ್ಸ್ ಬೋಟ್ ಸಂಪರ್ಕ ಕಡಿದು ಕಂಡಿತ್ತು. ಬೋಟಿನಲ್ಲಿ ಎಂಟು ಜನರಿದ್ದು ಇಬ್ಬರು ಈಜಿಕೊಂಡು ಮಟ್ಟು ಬೀಚಿನಲ್ಲಿ ದಡ ಸೇರಿದ್ದಾರೆ. ಇನ್ನು ಒಂದು ಮೃತ ದೇಹ ಪತ್ತೆಯಾಗಿದ್ದು, ಕಾಣೆಯಾದ ಐವರಿಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಕರಾವಳಿ ಪೋಲೀಸ್ ಅಧಿಕಾರಿ ಚೇತನ್ ಐಪಿಎಸ್ ತಿಳಿಸಿದ್ದಾರೆ. ಇನ್ನು  ಚಂಡಮಾರುತ ಬೀಸಿದ ಪರಿಣಾಮ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಸಮುದ್ರ

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಬೋಟ್ ಪಲ್ಟಿ – ಓರ್ವ ಸಾವು  Read More »

ತೌಖ್ತೆ ಅಬ್ಬರ: 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ರಾಜ್ಯಾದ್ಯಂತ ಬಿರುಸುಗೊಂಡ ಮಳೆ

ಮಂಗಳೂರು.ಮೇ.15: ತೌಖ್ತೆ ಚಂಡಮಾರುತ ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ತೀವ್ರ ಪರಿಣಾಮ ಬೀರುತ್ತಿದ್ದು, ಶನಿವಾರದಿಂದಲೇ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಾರಂಭಿಸಿದೆ. ಮುಂಜಾನೆಯಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಹಾನಿಯಾಗಿದೆ. ಕಡಲ ಕಿನಾರೆಯುದ್ದಕ್ಕೂ ಭೀಮ ಶಕ್ತಿಯ ಭಾರೀ ಗಾತ್ರದ ಅಲೆಗಳು ದಡವನ್ನು ನುಂಗಿಹಾಕಿವೆ. ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್‌ ಸರಬರಾಜು ಕಡಿತವಾಗಿದೆ. ಉಡುಪಿ, ಬ್ರಹ್ಮಾವರ, ಕಾರ್ಕಳ, ಕಾಪು ಭಾಗದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಭಾರೀ

ತೌಖ್ತೆ ಅಬ್ಬರ: 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ರಾಜ್ಯಾದ್ಯಂತ ಬಿರುಸುಗೊಂಡ ಮಳೆ Read More »