May 2021

ಪರಸತಿಯ ಜೊತೆಗಿನ ಸರಸದ ಪೋಟೋ ಸ್ಟೇಟಸ್ ಹಾಕಿದ ಪ್ರಿಯಕರ: ವಿಷಯ ತಿಳಿದ ಪತಿ ಏನ್ಮಾಡಿದ ಗೊತ್ತೇ?

ಚಾಮರಾಜನಗರ.ಮೇ.20: ಪತ್ನಿ ಜತೆ ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದ ಪ್ರಿಯಕರ ತಮ್ಮಿಬ್ಬರ ಅನೈತಿಕ ಸಂಬಂಧದ ಫೋಟೊ ಹಾಗೂ ವೀಡಿಯೊಗಳನ್ನು ವಾಟ್ಸಪ್ ನ ಸ್ಟೇಟಸ್ ನಲ್ಲಿ ಹಾಕಿ ವಿಕೃತಿ ಮೆರೆಯುತ್ತಿದ್ದ. ಇದನ್ನು ಗಮನಿಸಿದ ಆಕೆಯ ಪತಿ ಪ್ರಿಯಕರನನ್ನು ಕೊಂದು ಆತನ ವಿಕೃತಿಗೆ ಅಂತ್ಯ ಹಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಬುಧವಾರ ರಾತ್ರಿ ಪತ್ನಿ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ ಬಸವ ಶೆಟ್ಟಿ (37) ಎಂಬಾತನನ್ನು ಗಂಡ […]

ಪರಸತಿಯ ಜೊತೆಗಿನ ಸರಸದ ಪೋಟೋ ಸ್ಟೇಟಸ್ ಹಾಕಿದ ಪ್ರಿಯಕರ: ವಿಷಯ ತಿಳಿದ ಪತಿ ಏನ್ಮಾಡಿದ ಗೊತ್ತೇ? Read More »

ರೈತರಿಗೆ ಕೇಂದ್ರದಿಂದ ಶುಭಸುದ್ದಿ : ರಸಗೊಬ್ಬರ ಸಬ್ಸಿಡಿಯಲ್ಲಿ ಭಾರೀ ಏರಿಕೆ

ನವದೆಹಲಿ:ಮೇ.20: ಡಿಎಪಿ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿಯ ಪ್ರಮಾಣವನ್ನು ಕೇಂದ್ರ ಸರ್ಕಾರವು ಬುಧವಾರ ಶೇಕಡ 140ರಷ್ಟು ಹೆಚ್ಚಿಸಿದೆ. ಇದಕ್ಕೆ ಸರ್ಕಾರವು ₹ 14,775 ಕೋಟಿ ವಿನಿಯೋಗಿಸಲಿದೆ. ಡಿಎಪಿ ರಸಗೊಬ್ಬರದ ಬೆಲೆಯಲ್ಲಿ ತೀವ್ರ ಹೆಚ್ಚಳ ಆಗಿದ್ದರೂ, ರೈತರಿಗೆ ಇದು ಹಳೆಯ ಬೆಲೆಯಲ್ಲೇ ಸಿಗುವಂತೆ ಆಗಬೇಕು ಎಂಬ ಉದ್ದೇಶದಿಂದ ಸರ್ಕಾರವು ಈ ಕ್ರಮ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಪ್ರಧಾನಿಯವರ ಕಚೇರಿಯ ಹೇಳಿಕೆ ತಿಳಿಸಿದೆ. ಡಿಎಪಿ ರಸಗೊಬ್ಬರವನ್ನು ದೇಶದಲ್ಲಿ

ರೈತರಿಗೆ ಕೇಂದ್ರದಿಂದ ಶುಭಸುದ್ದಿ : ರಸಗೊಬ್ಬರ ಸಬ್ಸಿಡಿಯಲ್ಲಿ ಭಾರೀ ಏರಿಕೆ Read More »

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಜಿಲ್ಲಾಧಿಕಾರಿ ಎತ್ತಂಗಡಿ?

ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ  ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ಸ್ಥಳ ನೀಡದೇ ಸರ್ಕಾರ ಅವರನ್ನು ಎತ್ತಂಗಡಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಫೆ‌.13ರಂದೇ ಚಾಮರಾಜನಗರ ಡಿಸಿ ರವಿ ಅವರನ್ನು ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ.ಬಿ‌.ಸಿ.ಸತೀಶ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಬಳಿಕ ಕೆಲವು ಬೆಳವಣಿಗೆಗಳು ನಡೆದು ರವಿ ಗಡಿಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಮುಂದುವರೆದಿದ್ದರು. ದುರಂತ ನಡೆದ ಬಳಿಕ ನಡೆದ ನ್ಯಾಯಾಂಗ ತನಿಖೆಯಲ್ಲಿ ರವಿ ಅವರ ವೈಫಲ್ಯ, ನಾಯಕತ್ವ ಪ್ರದರ್ಶಿಸುವಲ್ಲಿ ವಿಫಲರಾಗಿರುವುದರ

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಜಿಲ್ಲಾಧಿಕಾರಿ ಎತ್ತಂಗಡಿ? Read More »

ದಕ್ಷಿಣ ಕನ್ನಡದಲ್ಲಿ ಲಾಕ್ ಡೌನ್ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ

ಮಂಗಳೂರು. ಮೇ20: ಕೊರೊನಾ ನಿಯಂತ್ರಣ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹೊಸ ನಿಯಮ ಹೊರಡಿಸಿರುವುದಾಗಿ ಕೆಲವು ನ್ಯೂಸ್ ವೆಬ್ಸೈಟ್ ಗಳು ತಪ್ಪು ವರದಿ ಮಾಡಿರುವ ಬಗ್ಗೆ ಇದೀಗ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ” ದ.ಕ.ಜಿಲ್ಲೆಯಾದ್ಯಂತ ಕೆಲವು ನಿರ್ಬಂಧಗಳೊಂದಿಗೆ ಹೊಸ ಮಾರ್ಗಸೂಚಿ ಜಾರಿಯಾಗುತ್ತದೆ, ವಾರದಲ್ಲಿ ಎರಡು ದಿನ ಮಾತ್ರ ಸಾಮಾಗ್ರಿ ಖರೀದಿಗೆ ಅವಕಾಶ ನೀಡಲಾಗುತ್ತದೆ, ಮೇ. 24 ರಿಂದ ಜಿಲ್ಲೆಯಲ್ಲಿ ಮದುವೆ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಹಾಗೂ ವೆಬ್ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿತ್ತು. ಈ ಬಗ್ಗೆ ತಕ್ಷಣ

ದಕ್ಷಿಣ ಕನ್ನಡದಲ್ಲಿ ಲಾಕ್ ಡೌನ್ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ Read More »

ಕಾಸರಗೋಡು: ಅಕ್ರಮ ತಂಬಾಕು ಉತ್ಪನ್ನ ಸಾಗಾಟ: ಓರ್ವ ಬಂಧನ

ಕಾಸರಗೋಡು, ಮೇ.೧೯: ಕಾರಿನಲ್ಲಿ ಅಕ್ರಮವಾಗಿ ೧೧೦ ಕಿಲೋ ತಂಬಾಕು ಉತ್ಪನ್ನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ. ವಡಗರದ ಅಬೂಬಕ್ಕರ್ (೩೪)ಬಂಧಿತ ಆರೋಪಿ. ಅಬಕಾರಿ ಸಿಬ್ಬಂದಿ ಬುಧವಾರ ಬೆಳಿಗ್ಗೆ ಮಂಜೇಶ್ವರ ವಾಮಂಜೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ.ಈತನಿಗೆ ಅಬಕಾರಿ ಸಿಬ್ಬಂದಿ ವಾಹನ ನಿಲ್ಲಿಸಲು ಸೂಚನೆ ನೀಡಿದರೂ ಕಾರು ನಿಲ್ಲಿಸದೆ ಪರಾರಿಯಾಗಿದ್ದ. ಇದನ್ನು ಗಮನಿಸಿ ಬೆನ್ನಟ್ಟಿದ ಸಿಬ್ಬಂದಿ ಉಪ್ಪಳ ಹಿದಾಯತ್ ನಗರದಲ್ಲಿ ತಡೆದು ತಪಾಸಣೆ

ಕಾಸರಗೋಡು: ಅಕ್ರಮ ತಂಬಾಕು ಉತ್ಪನ್ನ ಸಾಗಾಟ: ಓರ್ವ ಬಂಧನ Read More »

ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸುರಿದ ಆರ್ಥಿಕ ಪ್ಯಾಕೇಜ್

ಕಳೆದೆರಡು ವಾರದಿಂದ ಕೊರೊನ ಕಂಟ್ರೋಲ್ ಗಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಹೇರಿದ್ದು, ಹಲವು ವರ್ಗಗಳ ಜನರ, ಕಾರ್ಮಿಕರ ಜೀವನ ದುರ್ಬರವಾಗಿದೆ. ಹಲವಾರು ಕುಟುಂಬಗಳು ತುತ್ತು ಅನ್ನಕ್ಕಾಗಿ ಬೀದಿಗೆ ಬಂದಿದ್ದರೆ, ಮಧ್ಯಮ ವರ್ಗದ ಜನ ಅತ್ತ ನುಂಗಲೂ ಆಗದೆ, ಇತ್ತ ಉಗುಳಲೂ ಆಗದೇ ಕಷ್ಟ ಪಡುತ್ತಿದ್ದಾರೆ. ಹಲವು ಯುವಬಳಗ ಕೆಲಸ ಕಳೆದು ಬೀದಿಗೆ ಬಂದಿದ್ದು, ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಕಷ್ಟಕ್ಕೊಳಗಾದ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪ್ಯಾಕೇಜ್ ಮೊಣಕೈಗೆ ತುಪ್ಪ ಸವರಿದಂತಾಗಿದೆ. ಬೆಂಗಳೂರು

ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸುರಿದ ಆರ್ಥಿಕ ಪ್ಯಾಕೇಜ್ Read More »

ಇತಿಹಾಸ ಸೃಷ್ಟಿಸಿದ ಕೇರಳ ಸರ್ಕಾರ: ದಲಿತ ಶಾಸಕನಿಗೆ ಸಿಕ್ತು ಮಹತ್ವದ ಖಾತೆ

ತಿರುವನಂತಪುರ.ಮೇ.18: ಇತ್ತೀಚೆಗೆ ಕೇರಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಒಕ್ಕೂಟ ಭರ್ಜರಿ ವಿಜಯ ಸಾಧಿಸಿದೆ. ಇದೀಗ ರಾಜ್ಯದಲ್ಲಿ ಎಡಪಂಥೀಯವ ಸರ್ಕಾರ ಸತತವಾಗಿ ಎರಡನೆ ಬಾರಿಗೆ ಅಧಿಕಾರಕ್ಕೆ ಹಿಡಿಯುತ್ತಿದೆ. ಪಿಣರಾಯಿ ವಿಜಯನ್ ಅವರ ಎರಡನೇ ಅವಧಿಯ ಸರ್ಕಾರವು ದೇವಸ್ವಂ ಇಲಾಖೆ (ಮುಜರಾಯಿ ಇಲಾಖೆ)ಗೆ ಚೆಲಕ್ಕರ ಕ್ಷೇತ್ರದ ಶಾಸಕರಾಗಿರುವ ದಲಿತ ನಾಯಕ ಕೆ. ರಾಧಾಕೃಷ್ಣನ್ ಅವರನ್ನು ಸಚಿವರನ್ನಾಗಿ ನೇಮಿಸುವ ಮೂಲಕ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. 1996 ರಲ್ಲಿ ಇ.ಕೆ.ನಯನಾರ್ ಅವರ ಸಂಪುಟದಲ್ಲಿ ಎಸ್‌ಸಿ/ಎಸ್‌ಟಿ ಅಭಿವೃದ್ಧಿ ಸಚಿವರಾಗಿದ್ದ ಪರಿಶಿಷ್ಟ

ಇತಿಹಾಸ ಸೃಷ್ಟಿಸಿದ ಕೇರಳ ಸರ್ಕಾರ: ದಲಿತ ಶಾಸಕನಿಗೆ ಸಿಕ್ತು ಮಹತ್ವದ ಖಾತೆ Read More »

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ನಮ್ಮ ಸುತ್ತಲಿದೆ ಮನೆ ಮದ್ದು

ಶುಂಠಿ ಮತ್ತು ನಿಂಬೆ ಟೀ: ಹೆಚ್ಚಿನ ಜನರಿಗೆ ಬೆಳಿಗ್ಗೆ ಚಹಾ ಕುಡಿಯುವ ಅಭ್ಯಾಸವಿದೆ. ಇದರ ಜೊತೆ ಶುಂಠಿ ಮತ್ತು ನಿಂಬೆ ಮಿಶ್ರಣ ಮಾಡಬೇಕಷ್ಟೇ. ಇದಕ್ಕಾಗಿ ಒಂದು ಕಪ್ ನೀರನ್ನು ಬಿಸಿ ಮಾಡಿ, ನಂತರ ಅದಕ್ಕೆ ಅರ್ಧ ತುಂಡು ನಿಂಬೆ ಮತ್ತು ಸಣ್ಣ ತುಂಡು ಶುಂಠಿ ಹಾಕಿ ಒಂದು ನಿಮಿಷ ಕುದಿಸಿ. ಇದರ ನಂತರ, ಅದನ್ನು ಒಂದು ಕಪ್​ನಲ್ಲಿ ಹಾಕಿ ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿಯಿರಿ. ಇದು ಆರೋಗ್ಯಕ್ಕೆ ಉತ್ತಮ ಪಾನೀಯ. ಕಿತ್ತಳೆ ರಸ: ದೇಹದ ರೋಗನಿರೋಧಕ ಶಕ್ತಿಯನ್ನು

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ನಮ್ಮ ಸುತ್ತಲಿದೆ ಮನೆ ಮದ್ದು Read More »

ಕೋವಿಡ್ ನಿಯಮ ಉಲ್ಲಂಘನೆ: ಡಾ. ಕಕ್ಕಿಲಾಯ ವಿರುದ್ದ ಪ್ರಕರಣ ದಾಖಲು

ಮಂಗಳೂರು: ಮೇ 19: ಇಲ್ಲಿನ ಸೂಪರ್ ಮಾರ್ಕೆಟ್ ಗೆ ತೆರಳಿ ಮಾಸ್ಕ್ ಬಗ್ಗೆ ವಾಗ್ವಾದ ಮಾಡಿ ತೆರಳಿದ್ದ ನಗರದ ಖ್ಯಾತ ವೈದ್ಯ ಡಾ.ಬಿ.ಎಸ್. ಕಕ್ಕಿಲ್ಲಾಯ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಕದ್ರಿಯಲ್ಲಿ ಕಾರ್ಯಾಚರಿಸುತ್ತಿರುವ ಜಿಮ್ಮಿ ಮಾರ್ಕೆಟ್ ಪಾಲುದಾರ ರೇನ್ ರೊಸಾರಿಯೋ ಕದ್ರಿ ಠಾಣೆಯಲ್ಲಿ ಕಕ್ಕಿಲಾಯ ವಿರುದ್ಧ ದೂರು ನೀಡಿದ್ದಾರೆ. ಮೇ 18ರ ಬೆಳಗ್ಗೆ ಮಾರ್ಕೆಟ್ ಗೆ ಬಂದಿದ್ದ ವೈದ್ಯರು ಅಲ್ಲಿನ ಸಿಬ್ಬಂದಿ ಜೊತೆ ಮಾಸ್ಕ್ ವಿಚಾರದಲ್ಲಿ ವಾಗ್ವಾದ ನಡೆಸಿದ್ದಾರೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕೆಂದು

ಕೋವಿಡ್ ನಿಯಮ ಉಲ್ಲಂಘನೆ: ಡಾ. ಕಕ್ಕಿಲಾಯ ವಿರುದ್ದ ಪ್ರಕರಣ ದಾಖಲು Read More »

ರಷ್ಯಾ ಪ್ರವಾಸದೊಂದಿಗೆ ಲಸಿಕೆ!! ಈ ಟೂರಿಸಂ ಬೆಲೆ ಎಷ್ಟು?

ನವದೆಹಲಿ: ದೇಶದಲ್ಲಿ ಲಸಿಕೆ ಕೊರತೆ ಬೆನ್ನಲ್ಲೇ ಹಲವು ಭಾರತೀಯರು ವಿದೇಶದಲ್ಲಿ ಲಸಿಕೆ ಹಾಕಿಸಿಕೊಂಡು ಬರಲು ಯೋಜನೆ ರೂಪಿಸುತ್ತಿರುವಾಗ, ದೆಹಲಿಯ ಟ್ರಾವೆಲ್ ಏಜೆನ್ಸಿಯೊಂದು ರಷ್ಯಾ ಲಸಿಕೆ ಪ್ರವಾಸವೆಂಬ ಭರ್ಜರಿ ಆಫರ್ ಘೋಷಿಸಿದೆ. ಈ ಆಫರ್‌ನಲ್ಲಿ 24 ದಿನಗಳ ರಷ್ಯಾ ಪ್ರವಾಸ ಸೇರಿದಂತೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಳ್ಳಬಹುದಾಗಿದೆ. ಎರಡೂ ಡೋಸ್ ವ್ಯಾಕ್ಸಿನ್ ಪಡೆಯಲು 21 ದಿನಗಳ ಅಂತರವಿದ್ದು, ಈ ಸಮಯದಲ್ಲಿ ಪ್ರಯಾಣಿಕರು ರಷ್ಯಾ ಪ್ರವಾಸ ಮಾಡಬಹುದಾಗಿದೆ. 24 ದಿನಗಳ ಈ ಪ್ರವಾಸಕ್ಕೆ 1.29 ಲಕ್ಷ ರೂ.

ರಷ್ಯಾ ಪ್ರವಾಸದೊಂದಿಗೆ ಲಸಿಕೆ!! ಈ ಟೂರಿಸಂ ಬೆಲೆ ಎಷ್ಟು? Read More »