May 2021

ಬೆಂಗಳೂರಿನಲ್ಲಿ ಅಕ್ರಮ ವ್ಯಾಕ್ಸೀನ್ ಮಾರಾಟ: ವೈದ್ಯೆ ಮತ್ತು ಸಹಚರರ ಬಂಧನ

ಬೆಂಗಳೂರು: ಕಳೆದೊಂದು ವರ್ಷದಲ್ಲಿ ಕೊರೋನ ಹಾವಳಿಯಿಂದ ವಿಶ್ವವೇ ಕಂಗೆಟ್ಟಿದ್ದು ಇತ್ತೀಚಿನ ದಿನಗಳಲ್ಲಿ ಕಠಿಣ ನಿಯಮಾವಳಿಗಳು ಹಾಗೂ  ವ್ಯಾಕ್ಸಿನೇಷನ್ ಕಾರ್ಯಕ್ರಮಗಳ ಬಲದಿಂದ ಭಾರತ ಸೇರಿದಂತೆ ಇತರ ರಾಷ್ಟ್ರಗಳು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ಜನಸಂಖ್ಯೆಯಲ್ಲಿ ಬಹುದೊಡ್ಡ ರಾಷ್ಟ್ರಗಳು ಎಂದೆನಿಸಿಕೊಂಡಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮ ಹಂತಹಂತವಾಗಿ ನಡೆಯುತ್ತಿದೆ. ಒಂದೇ ಹಂತದಲ್ಲಿ ಇಷ್ಟು ದೊಡ್ಡ ಜನಸಂಖ್ಯೆಗೆ ವ್ಯಾಕ್ಸಿನ್ ಪೂರೈಕೆ ಕಷ್ಟವಾಗಿರುವುದರಿಂದ ಸರಕಾರ ಹಂತ ಹಂತವಾಗಿ ವ್ಯಾಕ್ಸಿನ್ ನಿರ್ವಹಣೆ ಮಾಡುತ್ತಿದೆ. ಆದರೆ ಭ್ರಷ್ಟಾಚಾರದ ಕರಿನೆರಳು ವ್ಯಾಕ್ಸಿನೇಷನ್ ಗೂ ತಟ್ಟಿದ್ದು, ಬೆಂಗಳೂರಿನಲ್ಲಿ ವೈದ್ಯಕೀಯ ಇಲಾಖೆ […]

ಬೆಂಗಳೂರಿನಲ್ಲಿ ಅಕ್ರಮ ವ್ಯಾಕ್ಸೀನ್ ಮಾರಾಟ: ವೈದ್ಯೆ ಮತ್ತು ಸಹಚರರ ಬಂಧನ Read More »

ಸರ್ಕಾರ ಎಷ್ಟೇ ಮುಚ್ಚಿಟ್ಟರೂ ನನಗೆ ಮಾಹಿತಿ ಸಿಗುತ್ತದೆ: ಡಿಕೆಶಿ

ಬೆಂಗಳೂರು: ಬಿಜೆಪಿ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಎಲ್ಲೆಲ್ಲಿ, ಯಾವ ಆಸ್ಪತ್ರೆಯಲ್ಲಿ ಏನೆಲ್ಲಾ ಅನಾಹುತ ನಡೆಯುತ್ತಿದೆ ಎಂಬ ಮಾಹಿತಿ ನನಗೆ ಸಿಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು. ಇದು ಸಂವಿಧಾನ ಬದ್ಧವಾಗಿ ಬಂದಿರುವ ಹುದ್ದೆ, ಅಧಿಕಾರ. ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಜಿಲ್ಲೆ ಪ್ರವಾಸ ಮಾಡಿ ಅಧಿಕಾರಿಗಳ ಜತೆ ಸಭೆ ಮಾಡಿಲ್ಲವೇ? ಈ ಸಂಕಷ್ಟದ ಸಮಯದಲ್ಲಿ

ಸರ್ಕಾರ ಎಷ್ಟೇ ಮುಚ್ಚಿಟ್ಟರೂ ನನಗೆ ಮಾಹಿತಿ ಸಿಗುತ್ತದೆ: ಡಿಕೆಶಿ Read More »

ಲಾಕ್ ಡೌನ್ “ಇಕ್ಕಟ್” ನಲ್ಲಿ “ಲವ್ ಇನ್ ದ ಟೈಮ್ ಆಫ್ ಕೋವಿಡ್” ಕಂಪ್ಯೂಟರ್ ಸ್ಕ್ರೀನ್ ಫಾರ್ಮೆಟ್ ನಲ್ಲಿ ರೆಡಿಯಾಗಿದೆ ಎರಡು ಕನ್ನಡ ಸಿನಿಮಾ

ಬೆಂಗಳೂರು: ಕೋವಿಡ್ ಬಂದ ನಂತರ ಹಲವು ವರ್ಗದ ಜನ ಕೆಲಸ ಕಲೆದುಕೊಂಡರೆ, ಇನ್ನೂ ಕೆಲವರು ಹೊಸ ತಾಂತ್ರಿಕತೆಯನ್ನು ಬಳಸಿಕೊಳ್ತಿದ್ದಾರೆ. ಲಾಕ್ ಡವನ್ ನಿಂದ ಸಿನಿಮಾ ಮಂದಿರಗಳು ಮುಚ್ಚಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯ ‌ಹಲವರು ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾರೆ. ಈ ನಡುವೆ ಹೊಸ ತಂತ್ರಜ್ಞಾನ ಬಳಸಿ 2 ಸಿನಿಮಾಗಳು ಕನ್ನಡದಲ್ಲಿ ತಯಾರಾಗಿದೆ. ದೊಡ್ಡ ದೊಡ್ಡ ಸೆಟ್‌, ನೂರಾರು ಕಲಾವಿದರು, ದೊಡ್ಡ ಕ್ಯಾಮೆರಾ ಇಟ್ಟುಕೊಂಡು ಚಿತ್ರೀಕರಣ ಮಾಡುವುದು ಸದ್ಯಕ್ಕೆ ಸಾಧ್ಯವಿಲ್ಲ. ಹಾಗಂತ ಪ್ರತಿಭೆ ಲಾಕ್‌ ಆಗುವುದಿಲ್ಲ. ಸ್ಯಾಂಡಲ್‌ವುಡ್‌ನ ಕೆಲ ನಿರ್ದೇಶಕರು ಮನೆಯೊಳಗೆ

ಲಾಕ್ ಡೌನ್ “ಇಕ್ಕಟ್” ನಲ್ಲಿ “ಲವ್ ಇನ್ ದ ಟೈಮ್ ಆಫ್ ಕೋವಿಡ್” ಕಂಪ್ಯೂಟರ್ ಸ್ಕ್ರೀನ್ ಫಾರ್ಮೆಟ್ ನಲ್ಲಿ ರೆಡಿಯಾಗಿದೆ ಎರಡು ಕನ್ನಡ ಸಿನಿಮಾ Read More »

ಕ್ರೈಸ್ತರ ಅವಹೇಳನ ; ಸಂಸದೆ ಶೋಭಾ ವಿರುದ್ಧ ಎಫ್ಐಆರ್

ಮಂಗಳೂರು, ಮೇ 20: ಕ್ರೈಸ್ತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಮುಖಂಡ, ಎಐಸಿಸಿ ಕಾರ್ಯದರ್ಶಿ ಐವನ್ ಡಿ’ಸೋಜ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಲಸಿಕೆ ಪಡೆಯದಂತೆ ಕ್ರೈಸ್ತ ಸಮುದಾಯಕ್ಕೆ ಚರ್ಚ್ ಕಡೆಯಿಂದ ಸೂಚನೆ ನೀಡಲಾಗಿದೆ ಎಂದು ಸಂಸದೆ ಶೋಭಾ ಹೇಳಿಕೆ ನೀಡಿದ್ದಾಗಿ ಸುದ್ದಿಯಾಗಿತ್ತು. ಈ ಬಗ್ಗೆ ಕ್ರೈಸ್ತ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮಾಜಿ ಎಂಎಲ್ಸಿ ಐವನ್ ಡಿಸೋಜ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ನಿಯೋಗ

ಕ್ರೈಸ್ತರ ಅವಹೇಳನ ; ಸಂಸದೆ ಶೋಭಾ ವಿರುದ್ಧ ಎಫ್ಐಆರ್ Read More »

ಲಾಕ್ ಡೌನ್ ನಡುವೆಯೂ ಶೂಟಿಂಗ್ : ಮಲೆಯಾಳಂ ಬಿಗ್‍ಬಾಸ್ ಮನೆಗೆ ಬೀಗ ಜಡಿದ ಪೊಲೀಸರು

ಚೆನ್ನೈ: ಕೊರೊನಾ ಲಾಕ್‍ಡೌನ್ ನಡುವೆ ನಡೆಯುತ್ತಿದ್ದ ಮಲೆಯಾಳಂನ ಬಿಗ್‍ಬಾಸ್ ಶೋನ ಶೂಟಿಂಗ್ ಸೆಟ್‍ಗೆ ದಾಳಿ ಮಾಡಿದ ಪೊಲೀಸರು ಬೀಗ ಜಡಿದಿದ್ದಾರೆ. ಕೊರೊನಾ ಎರಡನೇ ಅಲೆಯಿಂದಾಗಿ ದೇಶದಲ್ಲಿ ಚಲನಚಿತ್ರ ಮತ್ತು ಧಾರಾವಾಹಿಗಳ ಚಿತ್ರೀಕರಣಕ್ಕೆ ನಿಷೇಧವಿದೆ. ಆದರೆ ಮಲೆಯಾಳಂನ ಬಿಗ್‍ಬಾಸ್ ಶೋದ ಚಿತ್ರೀಕರಣ ಚೆನ್ನೈನ ಇವಿಪಿ ಫಿಲಂ ಸಿಟಿ ಚೆಂಬರಂಕ್ಕಂನಲ್ಲಿ ನಡೆಯುತ್ತಿತ್ತು. ಹಾಗಾಗಿ ಇಲ್ಲಿಗೆ ದಾಳಿ ಮಾಡಿದ ಕಂದಾಯ ವಿಭಾಗೀಯ ಅಧಿಕಾರಿ ತಿರುವಳ್ಳೂರು, ಪ್ರೀತಿ ಪಾರ್ಕವಿ ನೇತೃತ್ವದ ತಂಡ ಶೂಟಿಂಗ್ ಸೆಟ್‍ನಲ್ಲಿದ್ದವರನೆಲ್ಲ ಹೊರಹಾಕಿ ಸೆಟ್‍ಗೆ ಬೀಗ ಹಾಕಿದ್ದಾರೆ. ಕೆಲ ಮಾಹಿತಿಗಳ

ಲಾಕ್ ಡೌನ್ ನಡುವೆಯೂ ಶೂಟಿಂಗ್ : ಮಲೆಯಾಳಂ ಬಿಗ್‍ಬಾಸ್ ಮನೆಗೆ ಬೀಗ ಜಡಿದ ಪೊಲೀಸರು Read More »

ಬ್ಲ್ಯಾಕ್ ಫಂಗಸ್ ನಿರ್ಲಕ್ಷ್ಡಿಸಬೇಡಿ ಏಮ್ಸ್ ಮಾರ್ಗಸೂಚಿ ಸಲಹೆ, ಪತ್ತೆ ಕ್ರಮ ಮತ್ತು ಆರೈಕೆ ಸಲಹೆಗಳು ಇಲ್ಲಿವೆ

ನವದೆಹಲಿ.ಮೇ.20: ಕೊರೋನಾ ಎರಡನೇ ಅಲೆ ಅಬ್ಬರದ ನಡುವೆಯೇ ಬ್ಲ್ಯಾಕ್ ಫಂಗಸ್ ವೈದ್ಯರ ಹಾಗೂ ಜನಸಾಮಾನ್ಯರ ಆತಂಕವನ್ನು ಹೆಚ್ಚಿಸಿದೆ. ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಅಥವಾ ಮ್ಯುಕೋರ್ಮೈಕೋಸಿಸ್ಗೆ ಸಂಬಂಧಿಸಿದಂತೆ ದೆಹಲಿಯ ಪ್ರತಿಷ್ಠಿತ ವೈದ್ಯ ವಿಜ್ಞಾನ ಸಂಸ್ಥೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಬ್ಲ್ಯಾಕ್ ಫಂಗಸ್ ಅನ್ನು ಹೇಗೆ ಗುರುತಿಸಬೇಕು ಮತ್ತು ಅದಕ್ಕೆ ಏನೇನು ಕ್ರಮ ಕೈಗೊಳ್ಳಬೇಕು ಎಂಬುವುದನ್ನು ಮಾರ್ಗಸೂಚಿಯಲ್ಲಿ ವಿವರಿಸಿದೆ. ಅನಿಯಂತ್ರಿತ ಮಧುಮೇಹ ಹೊಂದಿರುವವರು ಹಾಗೂ ಅತಿ ಹೆಚ್ಚು ಸ್ಟಿರಾಯ್ಡ್ ಬಳಕೆ ಮಾಡುವವರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಬಲುಬೇಗ ತುತ್ತಾಗುತ್ತಾರೆ.

ಬ್ಲ್ಯಾಕ್ ಫಂಗಸ್ ನಿರ್ಲಕ್ಷ್ಡಿಸಬೇಡಿ ಏಮ್ಸ್ ಮಾರ್ಗಸೂಚಿ ಸಲಹೆ, ಪತ್ತೆ ಕ್ರಮ ಮತ್ತು ಆರೈಕೆ ಸಲಹೆಗಳು ಇಲ್ಲಿವೆ Read More »

ಪೋಕ್ಸೊ ಪ್ರಕರಣದ ಆರೋಪಿ ಈಗ ಜಿಲ್ಲಾ ಎಸ್ಪಿ

ಹೊಸದಿಲ್ಲಿ : ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ಗೌರವ್ ಉಪಾಧ್ಯಾಯ ಎಂಬವರನ್ನು ಅಸ್ಸಾಂ ಜಿಲ್ಲೆಯೊಂದರ ಎಸ್‌ಪಿ ಆಗಿ ನೇಮಕಗೊಳಿಸಲಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಈ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತಾದ ಚಾರ್ಜ್ ಶೀಟ್ ಅನ್ನು ಮಾರ್ಚ್ ೩೧, ೨೦೨೦ರಂದು ಈ ನಿರ್ದಿಷ್ಟ ಅಧಿಕಾರಿ ವಿರುದ್ಧ ಐಪಿಸಿಯ ಸೆಕ್ಷನ್ ೩೫೪ ಹಾಗೂ ೩೫೪ಅ ಅನ್ವಯ ಹಾಗೂ ಪೋಕ್ಸೋ ಅನ್ವಯ ದಾಖಲಿಸಲಾಗಿತ್ತು. ಜನವರಿ ೩, ೨೦೨೦ರಂದು ದಾಖಲಾದ ಈ ಪ್ರಕರಣವನ್ನು ಅಸ್ಸಾಂ ಸಿಐಡಿ ತನಿಖೆ

ಪೋಕ್ಸೊ ಪ್ರಕರಣದ ಆರೋಪಿ ಈಗ ಜಿಲ್ಲಾ ಎಸ್ಪಿ Read More »

ತನ್ನ‌ ಬಾಲಕ್ಕೇ ಬೆಂಕಿಇಟ್ಟುಕೊಂಡ ದೊಡ್ಡಣ್ಣ: ಅಮೇರಿಕಾವನ್ನು ಒಂಟಿಯಾಗಿರಿಸಿದ ಇಸ್ರೇಲ್ ಪ್ರೇಮ

ವಿಶ್ವ ಕೊರೊನಾ ಬೆಂಕಿಯಲ್ಲಿ ಬಸವಳಿಯುತ್ತಿದ್ದರೆ, ಇತ್ತ ಕಡೆ ಇಸ್ರೇಲ್​​- ಪ್ಯಾಲೆಸ್ತೇನ್​​ ಸಂಘರ್ಷ 11ನೇ ದಿನಕ್ಕೆ ಕಾಲಿಟ್ಟಿದ್ದು, ಗಾಜಾಪಟ್ಟಿ ಮೇಲೆ ಇಸ್ರೇಲ್ ಬಾಂಬ್ ದಾಳಿ ಮುಂದುವರಿದಿದೆ. ಪ್ಯಾಲೆಸ್ತೇನ್​​ನಲ್ಲಿ ಮೃತರ ಸಂಖ್ಯೆ 227ಕ್ಕೆ ಏರಿಕೆಯಾದ್ರೆ, ಇಸ್ರೇಲ್ ಕಡೆ 12 ಮಂದಿ ಸಾವನ್ನಪ್ಪಿದ್ಧಾರೆ. ಈ ನಡುವೆ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿರೋ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕದನ ವಿರಾಮದ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದ್ರೆ ನಂತರ ಮಾತನಾಡಿರೋ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್​ ತನ್ನ ಗುರಿ ತಲುಪುವವರೆಗೂ ಬಾಂಬ್

ತನ್ನ‌ ಬಾಲಕ್ಕೇ ಬೆಂಕಿಇಟ್ಟುಕೊಂಡ ದೊಡ್ಡಣ್ಣ: ಅಮೇರಿಕಾವನ್ನು ಒಂಟಿಯಾಗಿರಿಸಿದ ಇಸ್ರೇಲ್ ಪ್ರೇಮ Read More »

ಶಿಕ್ಷಣ ಮುಗಿಸಿದ ಕೂಡಲೇ ಮೈಕ್ರೋಸಾಪ್ಟ್ ನಿಂದ 2 ಕೋಟಿ ಸಂಭಾವನೆಯ ಜಾಬ್ ಆಫರ್ ಪಡೆದ ಯುವತಿ

ಹೈದರಾಬಾದ್: ಕೊರೊನಾ ಬಂದ ನಂತರ ಕೆಲಸ ಗಿಟ್ಟಿಸಿಕೊಳ್ಳುವುದು ಮೊದಲಿನಷ್ಟು ಸುಲಭವಿಲ್ಲ. ಎಷ್ಟೇ ಬುದ್ಧಿವಂತಿಕೆಯಿದ್ದರೂ ಅವಕಾಶದ ಬಾಗಿಲುಗಳು ತೆರೆಯದೇ ಅನೇಕರು ನಿರುದ್ಯೋಗಿಗಳಾಗಿ ಉಳಿದಿದ್ದಾರೆ. ಇನ್ನು ಕೆಲವರು ಕೈ ತುಂಬಾ ಸಂಬಳ ನೀಡುವ ಒಳ್ಳೆಯ ಕೆಲಸವನ್ನು ಕಳೆದುಕೊಂಡು ಅನಿವಾರ್ಯವಾಗಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಇಂತಹ ಕಾಲದಲ್ಲಿ ಹೈದರಾಬಾದ್​ನ ಯುವತಿಯೊಬ್ಬಳಿಗೆ ಸಾಫ್ಟ್​ವೇರ್ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ವಾರ್ಷಿಕ 2ಕೋಟಿ ರೂಪಾಯಿ ಸಂಬಳ ನೀಡುವುದಾಗಿ ಹೇಳಿ ಕೆಲಸ ನೀಡಿದೆ. ಹೈದರಾಬಾದ್ ಮೂಲದ ದೀಪ್ತಿ ನಾರ್ಕುತಿ ಎಂಬ ಯುವತಿಗೆ ಇಷ್ಟು ದೊಡ್ಡ ಮಟ್ಟದ ಕೆಲಸ

ಶಿಕ್ಷಣ ಮುಗಿಸಿದ ಕೂಡಲೇ ಮೈಕ್ರೋಸಾಪ್ಟ್ ನಿಂದ 2 ಕೋಟಿ ಸಂಭಾವನೆಯ ಜಾಬ್ ಆಫರ್ ಪಡೆದ ಯುವತಿ Read More »

ಮುಹೂರ್ತದ ವೇಳೆ ಮಂಗಲಸೂತ್ರ ಎಗರಿಸಿದ ಅರ್ಚಕ: ಮೂರನೇ ಕಣ್ಣಲ್ಲಿ ಕೈಚಳಕ ಬಯಲು

ತೆಲಂಗಾಣ: ಮದುವೆ ಕಾರ್ಯ ನಡೆಸಿಕೊಡಲು ಬಂದ  ಅರ್ಚಕನೋರ್ವ ತಾಳಿ ಎಗರಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅರ್ಚಕನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಅರ್ಚಕನೋರ್ವ ಮದುವೆ ಕಾರ್ಯದಲ್ಲಿ ಮಂತ್ರ ಹೇಳುತ್ತಿರುವ ಸಂದರ್ಭದಲ್ಲಿ ಕೈ ಚಳಕದಿಂದ   ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿ,  ನಕಲಿ ಮಾಂಗಲ್ಯ ಸರವನ್ನು ವರನಿಂದ ಕಟ್ಟಿಸಿದ್ದಾನೆ. ಇದು ಮದುವೆ ದಿನ ಯಾರಿಗೂ ಗೊತ್ತಾಗಿಲ್ಲ. ಮನೆಗೆ ತೆರಳಿದ ಬಳಿಕ ಮಾಂಗಲ್ಯ ಸರ ಬದಲಾಗಿರುವ ಬಗ್ಗೆ ಮನೆಯವರಿಗೆ ತಿಳಿದಿದೆ. ಇದರಿಂದ ಮನೆ ಕಡೆಯವರಿಗೆ ಯಾರ

ಮುಹೂರ್ತದ ವೇಳೆ ಮಂಗಲಸೂತ್ರ ಎಗರಿಸಿದ ಅರ್ಚಕ: ಮೂರನೇ ಕಣ್ಣಲ್ಲಿ ಕೈಚಳಕ ಬಯಲು Read More »