May 2021

ಜೈಲಿನಿಂದ ಬಿಡುಗಡೆಯಾದವನ ರುಂಡ ಚೆಂಡಾಡಿದ ಹಂತಕರು. ಏನಿದು ಭೀಬತ್ಸ ಕೃತ್ಯ? ಮುಂದೆ ಓದಿ..

ಹಾಸನ.ಮೇ23: ಎರಡು ವಾರದ ಹಿಂದಷ್ಟೆ ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್ ಒಬ್ಬನ ತಲೆಯನ್ನು ಹಾಡುಹಗಲೇ ಮಚ್ಚಿನಿಂದ ಕೊಚ್ಚಿ, ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ನಗರದ ವಲ್ಲಭಾಯ್ ರಸ್ತೆಯ ನಿವಾಸಿ ಭರತ್ ಎಂಬುವನೇ ಕೊಲೆಯಾದ ಯುವಕ. ಇಂದು ಹಾಸನ ಸಂತೆಪೇಟೆಯ 80 ಫೀಟ್ ರಸ್ತೆಯಲ್ಲಿ ಭರತ್​​ ಬೈಕ್​ನಲ್ಲಿ ತೆರಳುತ್ತಿದ್ದಾಗ ಈ ಭೀಕರ ಘಟನೆ ನಡೆದಿದೆ. ಮಚ್ಚಿನಿಂದ ಕೊಚ್ಚಿರುವ ಹಂತಕರು ತಲೆಯನ್ನು ಎರಡು ಹೋಳು ಮಾಡಿದ್ದಾರೆ ಎನ್ನಲಾಗಿದೆ. ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪೂರ್ವದ್ವೇಷದಿಂದಲೇ‌ […]

ಜೈಲಿನಿಂದ ಬಿಡುಗಡೆಯಾದವನ ರುಂಡ ಚೆಂಡಾಡಿದ ಹಂತಕರು. ಏನಿದು ಭೀಬತ್ಸ ಕೃತ್ಯ? ಮುಂದೆ ಓದಿ.. Read More »

ಈ‌ ಕಂದನ ನಗುವನ್ನು ಉಳಿಸಿಕೊಡುವಿರಾ ಪ್ಲೀಸ್….

ಮಂಡ್ಯ.ಮೇ.23: ಈ ಮುದ್ದಾದ ಕಂದಮ್ಮನ ಹೆಸರು ಮನಸ್ವಿ. ಮಂಡ್ಯದ ದುದ್ದ ಹೋಬಳಿಯ ಹಾಡ್ಯ ಗ್ರಾಮದ ಹೆಚ್.ಡಿ ಸುಧಾಕರ್ ಎಂಬುವರ ಮಗಳು. ಈಕೆಗಿನ್ನೂ ಐದೂವರೆ ವರ್ಷ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುವ ಸುಧಾಕರ್ ಅವರಿಗೆ ಮಗಳ ಸಮಸ್ಯೆ ಎರಡೂವರೆ ತಿಂಗಳು ಇದ್ದಾಗಲೇ  ಮನವರಿಕೆ ಆಗಿತ್ತು. ಅಂದಿನಿಂದ ಇಲ್ಲೀವರೆಗೂ ಮಗಳ ಜೀವ ಉಳಿಸುವುದಕ್ಕಾಗಿ ಹೋರಾಡುತ್ತಿದ್ದಾರೆ. ಸುಧಾಕರ್ ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಹಲವಾರು ರೀತಿಯ ಕೆಲಸ ಮಾಡಿಕೊಂಡಿದ್ದರು. ಕಳೆದ 5 ವರ್ಷದಿಂದ ಕಾರು ಚಾಲಕನಾಗಿ ಕುಟುಂಬವನ್ನು ಸಾಕುತ್ತಿದ್ದಾರೆ. ಮದುವೆಯಾದ

ಈ‌ ಕಂದನ ನಗುವನ್ನು ಉಳಿಸಿಕೊಡುವಿರಾ ಪ್ಲೀಸ್…. Read More »

ಮಂಗಳೂರಿನಿಂದ ಬೆಳಗಾವಿಗೆ ಕಳ್ಳದಾರಿಯಲ್ಲಿ ರವಾನೆಯಾಯ್ತು ಬರೋಬ್ಬರಿ 4.9 ಕೆ.ಜಿ. ಚಿನ್ನ…! ಮಾರ್ಗ ಮದ್ಯೆ ಬಂಗಾರ ದೋಚಿದರಾ “ಕಳ್ಳ-ಪೊಲೀಸರು”…!?

ಬೆಳಗಾವಿ: ಮಂಗಳೂರಿನಿಂದ ಬೆಳಗಾವಿಗೆ ಕಳ್ಳದಾರಿಯಲ್ಲಿ ರವಾನೆಯಾದ ಬರೋಬ್ಬರಿ 4.9 ಕೆಜಿ ಚಿನ್ನವನ್ನು ಬೆಳಗಾವಿ ಪೊಲೀಸರು ದೋಚಿದ ಘಟನೆ ನಾಲ್ಕು ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ಇದೀಗ ಸಿಐಡಿ ತನಿಖೆಗಾಗಿ ಮುನ್ನೆಲೆಗೆ ಬರುತ್ತಿದೆ. ಜನವರಿ 9 ರಂದು ಮಂಗಳೂರಿನ ತಿಲಕ್ ಪೂಜಾರಿ ಎಂಬಾತ ಬೆಳಗಾವಿ ಜಿಲ್ಲೆಯ ಕೊಲ್ಲಾಪುರಕ್ಕೆ ತನ್ನ ಸಹಚರರ ನೆರವಿನಿಂದ ಕಾರಿನಲ್ಲಿ 4.9 ಕೆಜಿ ಚಿನ್ನ ಸಾಗಾಟ ಮಾಡುತ್ತಿರುವ ಬಗ್ಗೆ ತಿಲಕ್ ಗೆಳೆಯ, ಧಾರವಾಡ ಮೂಲದ ಕಿರಣ್ ವೀರನಗೌಡ ಎಂಬಾತ ಬೆಳಗಾವಿ ಡಿವೈಎಸ್ಪಿಗೆ ಮಾಹಿತಿ ನೀಡಿದ್ದಾನೆ. ಖಚಿತ

ಮಂಗಳೂರಿನಿಂದ ಬೆಳಗಾವಿಗೆ ಕಳ್ಳದಾರಿಯಲ್ಲಿ ರವಾನೆಯಾಯ್ತು ಬರೋಬ್ಬರಿ 4.9 ಕೆ.ಜಿ. ಚಿನ್ನ…! ಮಾರ್ಗ ಮದ್ಯೆ ಬಂಗಾರ ದೋಚಿದರಾ “ಕಳ್ಳ-ಪೊಲೀಸರು”…!? Read More »

ಕೇಂದ್ರದ ಸರ್ವಾಧಿಕಾರಿ ಧೋರಣೆ ಮತ್ತು ಪ್ರಾದೇಶಿಕತೆಯ ಕಾವು ಹೆಚ್ಚಾಗಿದೆ: ಸಚಿವ ಜೆ.ಸಿ. ಮಾಧುಸ್ವಾಮಿ

ಮೈಸೂರು: ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ರಾಜ್ಯದ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಕೇಂದ್ರಕ್ಕೆ  ಪ್ರಾದೇಶಿಕತೆಯ ಕಾವು ಹೆಚ್ಚಾಗಿದ್ದು, ರಾಜ್ಯಗಳ ನಡುವೆ ಸರಿಯಾಗಿ ಅನುದಾನ ಹಂಚಿಕೆ ಮಾಡುವಲ್ಲಿ ವಿಫಲವಾಗುತ್ತಿದೆ ಎಂದು ರಾಜ್ಯ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ. ಮೈಸೂರಿನಲ್ಲಿ ನಿನ್ನೆ  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನಗರ ಘಟಕ ವತಿಯಿಂದ ನಡೆದ ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ  ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೇಂದ್ರದ

ಕೇಂದ್ರದ ಸರ್ವಾಧಿಕಾರಿ ಧೋರಣೆ ಮತ್ತು ಪ್ರಾದೇಶಿಕತೆಯ ಕಾವು ಹೆಚ್ಚಾಗಿದೆ: ಸಚಿವ ಜೆ.ಸಿ. ಮಾಧುಸ್ವಾಮಿ Read More »

ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ

ಬೆಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಚಿತ್ರರಂಗದ ಪೋಷಕ ಕಲಾವಿದರಿಗೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಗೃಹ ನಿರ್ಮಾಣ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮನೆ ನೀಡಲಾಗುವುದು ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು. ಬೆಂಗಳೂರಿನಲ್ಲಿ ಭಾನುವಾರ ಬೆಳಿಗ್ಗೆ ಚಿತ್ರರಂಗದ ಪೋಷಕ ಕಲಾವಿದರಿಗೆ ಭರತ್‌ಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಫುಡ್ ಕಿಟ್ ವಿತರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ, ‘ಮನೆ ಅಗತ್ಯ ಇರುವ ಕಲಾವಿದರು ಅರ್ಜಿ ಹಾಕಬಹುದು. ತಕ್ಷಣವೇ ಅಂಥ ಕಲಾವಿದರಿಗೆ ಕಡಿಮೆ ದರದಲ್ಲಿ ಮನೆ

ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ Read More »

ಕೊರೋನಾ ಸುಳಿಯದಂತೆ ಗ್ರಾಮದ ನಾಲ್ಕು ಮೂಲೆಗೆ ಕಾಯಿ ಮಂತ್ರಿಸಿ ಕಟ್ಟಿದರು….!

ಚಿತ್ರದುರ್ಗ: ಒಂದೆಡೆ ಭಾರತದಲ್ಲಿ ಮೂಡನಂಬಿಕೆ ತೊಲಗಿದೆ ಎನ್ನುತ್ತಿದ್ದರೂ, ಉನ್ನೊಂದೆಡೆ ಜನ ಆಶ್ಚರ್ಯಕರ ರೀತಿಯಲ್ಲಿ ಮೂಡನಂಬಿಕ ಆಚರಣೆಯಲ್ಲಿ ತೊಡಗಿಕೊಳ್ಳುವುದು ಬೆಳಕಿಗೆ ಬರುತ್ತಿದೆ. ಅದರಂತೆ ಕೋವಿಡ್ ಗ್ರಾಮಕ್ಕೆ ಸುಳಿಯುವುದನ್ನು ತಡೆಯಲು, ಗ್ರಾಮದ ನಾಲ್ಕು ದಿಕ್ಕಿಗೆ ಮಂತ್ರಿಸಿದ ತೆಂಗಿನಕಾಯಿ ಕಟ್ಟಿದ ಘಟನೆ ಚಿತ್ರದುರ್ಗ ಜಿಲ್ಲೆಯ ನಡೆದಿದೆ. ಚಳ್ಳಕೆರೆ ತಾಲ್ಲೂಕಿನ ಮನ್ನೆಕೋಟೆ ಗ್ರಾಮದಲ್ಲಿ ಕಳೆದ ಒಂದು ತಿಂಗಳಲ್ಲಿ 15 ಜನರು ಕೊರೋನಾಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಎರಡು ಸಾವಿರ ಜನಸಂಖ್ಯೆಯ ಈ ಗ್ರಾಮದಲ್ಲಿ ಸುಮಾರು 450 ಕ್ಕೂ ಹೆಚ್ಚು ಜನರಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದೆ.

ಕೊರೋನಾ ಸುಳಿಯದಂತೆ ಗ್ರಾಮದ ನಾಲ್ಕು ಮೂಲೆಗೆ ಕಾಯಿ ಮಂತ್ರಿಸಿ ಕಟ್ಟಿದರು….! Read More »

ಎಂಆರ್ ಪಿಎಲ್ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ನಮ್ಮವರಿಗೆ “ಗೊತ್ತಾನಗ ಪೊರ್ತಾಂಡ್”

ಮಂಗಳೂರು. ಮೇ.23: ಇಲ್ಲಿನ ಎಂಆರ್ ಪಿಎಲ್ ನಲ್ಲಿ ನಡೆದ ನೇಮಕಾತಿಯಲ್ಲಿ ಕರ್ನಾಟಕದ ‌ಮತ್ತು ಸ್ಥಳೀಯ ಅಭ್ಯರ್ಥಿಗಳಿಗೆ  ಅನ್ಯಾಯವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ‌ಸಂಸದ ನಳಿನ್ ಕುಮಾರ್‌ ಕಟೀಲು ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸ್ಥಳೀಯ ಶಾಸಕರು‌ ಎಂಆರ್ ಪಿಎಲ್ ನ ಆಡಳಿತ ಮಂಡಳಿಯ ಜೊತೆಗೆ ಚರ್ಚೆ ನಡೆಸಿದ್ದಾರೆ. ಆದರೆ ಈ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಅಪಹಾಸ್ಯಕ್ಕೆ ಒಳಗಾಗಿದೆ. ನೇಮಕಾತಿಯಲ್ಲಿ ಇಬ್ಬರು ಕನ್ನಡಿಗರನ್ನು‌ ಮಾತ್ರ ಆಯ್ಕೆ ಮಾಡಲಾಗಿದ್ದು, ಈ

ಎಂಆರ್ ಪಿಎಲ್ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ನಮ್ಮವರಿಗೆ “ಗೊತ್ತಾನಗ ಪೊರ್ತಾಂಡ್” Read More »

“ನನ್ನ ಜೊತೆಗಿನ ನೆನಪುಗಳಿರುವ ಅಮ್ಮನ ಮೊಬೈಲ್ ಹಿಂದಿರುಗಿಸಿ” ಕೋವಿಡ್ ಗೆ ಜೀವತೆತ್ತ ತಾಯಿಯ ಮುದ್ದಿನ ಮಗಳ ಭಾವುಕ ಪತ್ರ ವೈರಲ್

ಕುಶಾಲನಗರ: ವಿಶ್ವದಾದ್ಯಂತ  ಕಳೆದೊಂದು ವರ್ಷಗಳಲ್ಲಿ ಕೊರೋನಾ ಹಲವಾರು ಕರುಣಾಜನಕ ವ್ಯಥೆಗಳನ್ನು ಸೃಷ್ಟಿಸಿದೆ. ಕೊರೊನಾದಿಂದಾಗಿ ಜೀವ ಕಳೆದುಕೊಂಡ ಕುಟುಂಬದ ಸದಸ್ಯರ ಕಳೇಬರವನ್ನೂ ನೋಡಲಾಗದೆ ಜನ ದುಖಃದ ಕಡಲಲ್ಲಿ ತೇಲುತ್ತಿರುವ ಅದೆಷ್ಟೋ ಸನ್ನಿವೇಶಗಳಿಗೆ ನಾವು ನಿತ್ಯ ಸಾಕ್ಷಿಯಾಗುತ್ತಿದ್ದೇವೆ. ಅಂದರಂತೆ ತಾಯಿಯನ್ನು ಕಳೆದುಕೊಂಡ 10 ವರ್ಷದ ಬಾಲಕಿಯೊಬ್ಬಳು ಅಮ್ಮನ ಜೊತೆ ತಾನು ಕಳೆದ ದಿನಗಳ ನೆನಪು ಹೊತ್ತ ಮೊಬೈಲ್​ ಅನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ ಈ ಕಥೆ ನಿಜಕ್ಕೂ ಕರುಣಾಜನಕವಾಗಿದೆ. ಕೊವಿಡ್ ತುತ್ತಾಗಿ ಜೀವ ತೆತ್ತ ಪ್ರೀತಿಯ ತಾಯಿ ಆಸ್ಪತ್ರೆಯಿಂದ

“ನನ್ನ ಜೊತೆಗಿನ ನೆನಪುಗಳಿರುವ ಅಮ್ಮನ ಮೊಬೈಲ್ ಹಿಂದಿರುಗಿಸಿ” ಕೋವಿಡ್ ಗೆ ಜೀವತೆತ್ತ ತಾಯಿಯ ಮುದ್ದಿನ ಮಗಳ ಭಾವುಕ ಪತ್ರ ವೈರಲ್ Read More »

“ರಿಷಭ್ ಒಬ್ಬ ಫೆಂಟಾಸ್ಟಿಕ್ ಪ್ಲೇಯರ್” ಸಹಾ ನಿಸ್ವಾರ್ಥತೆಗೆ ಕ್ರಿಕೆಟ್ ವಲಯ ದಿಲ್ ಖುಷ್

ಕೊಲ್ಕತ್ತಾ: “ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಟೂರ್ನಿಯ ಕಳೆದ ಕೆಲ ಪಂದ್ಯಗಳಲ್ಲಿ ರಿಷಬ್ ಪಂತ್ ಅಮೋಘ ಆಟವಾಡಿದ್ದಾರೆ . ಹೀಗಾಗಿ ಮುಂಬರುವ ಉಧ್ಟಾಟನಾ ಆವೃತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲೂ ಅವರೇ ನನ್ನ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್” ಎಂದಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರ ಮಾತಿಗೆ ಕ್ರಿಕೆಟ್ ವಲಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಪೋರ್ಟ್ಸ್ ಚಾನೆಲ್ ಒಂದರ ಸಂದರ್ಶನದಲ್ಲಿ  ಮಾತನಾಡಿದ್ದ ವೃದ್ಧಿಮಾನ್, ನಾನಿನ್ನು ಅವಕಾಶಕ್ಕಾಗಿ

“ರಿಷಭ್ ಒಬ್ಬ ಫೆಂಟಾಸ್ಟಿಕ್ ಪ್ಲೇಯರ್” ಸಹಾ ನಿಸ್ವಾರ್ಥತೆಗೆ ಕ್ರಿಕೆಟ್ ವಲಯ ದಿಲ್ ಖುಷ್ Read More »

ಸಹಿಸಲಾರದ ಉದರ ನೋವು ಬಾಧೆ ತಡೆಯಲಾರದೆ ಶಿಕ್ಷಕಿ ಮಾಡಿದ್ದೇನು?.

ಕೊಳ್ಳೇಗಾಲ: ತೀವ್ರ ಹೊಟ್ಟೆನೋವಿನ ಬಾಧೆಯಿಂದ  ಬೇಸತ್ತ ಶಿಕ್ಷಕಿಯೊಬ್ಬರು ದುಡುಕಿನ ನಿರ್ಧಾರ ತೆಗೆದುಕೊಂಡ ಘಟನೆ ಕೊಳ್ಳೇಗಾಲ ತಾಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ನಡೆದಿದೆ.  ಪಟ್ಟಣದ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿಯ ಜೀವನ ದುರಂತ ಅಂತ್ಯವಾಗಿದೆ. ತಾಲೂಕಿನ ಸಿಂಗನಲ್ಲೂರು ಗ್ರಾಮದ 28 ವರ್ಷ ವಯಸ್ಸಿನ ರಮ್ಯಾ ಅವರು ಹಲವಾರು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು.  ಹೊಟ್ಟೆ ನೋವಿಗೆ ಸಂಬಂಧಿಸಿದಂತೆ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಇತ್ತೀಚೆಗೆ ಹೊಟ್ಟೆ ನೋವು ತೀವ್ರವಾಗಿದ್ದು, ಸಹಿಸಿಕೊಳ್ಳಲು ಸಾಧ್ಯವಾಗದ ವೇದನೆಯಿಂದ ಬೇಸತ್ತ ಅವರು

ಸಹಿಸಲಾರದ ಉದರ ನೋವು ಬಾಧೆ ತಡೆಯಲಾರದೆ ಶಿಕ್ಷಕಿ ಮಾಡಿದ್ದೇನು?. Read More »