May 2021

ಅಚ್ಚ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಕೆ.ಎಮ್. ಅಶ್ರಫ್

ತಿರುವನಂತಪುರಂ: ಕೇರಳ ವಿಧಾನಸಭೆಗೆ ಕಳೆದ ಏಪ್ರಿಲ್ ತಿಂಗಳಿನಲ್ಲಿ ಮತದಾನ ನಡೆದು ಈ ತಿಂಗಳಾರಂಭದಲ್ಲಿ ಫಲಿತಾಂಶ ಹೊರ ಬಿದ್ದಿತ್ತು. ಒಟ್ಟು 140 ಸ್ಥಾನಗಳಿರುವ ಕೇರಳ ವಿಧಾನಸಭೆ ಶಾಸಕರಾಗಿ ಆಯ್ಕೆಯಾದವರ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು ತಿರುವನಂತಪುರಂ ನಲ್ಲಿ ನಡೆದಿದೆ. ಈ ವೇಳೆ ಮಂಜೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಕೆ ಎಂ ಅಶ್ರಫ್ ಅವರು ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕನ್ನಡ ಅಭಿಮಾನ ಮೆರೆದಿದ್ದಾರೆ. ಅಶ್ರಫ್ ಅವರು ತನ್ನ ಸಂಪೂರ್ಣ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ಪಡೆದಿದ್ದು, ಕನ್ನಡದಲ್ಲಿ ಸ್ನಾತಕೋತ್ತರ […]

ಅಚ್ಚ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಕೆ.ಎಮ್. ಅಶ್ರಫ್ Read More »

ಜುಲೈ 3ನೇ ವಾರ ಪಿಯುಸಿ ಪರೀಕ್ಷೆ ಆಗಸ್ಟ್ ನಲ್ಲಿ ಫಲಿತಾಂಶ

ಬೆಂಗಳೂರು ಮೇ.24: ನಿನ್ನೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಳ್ ಅವರು ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವ ಸಂಬಂಧ ವೀಡಿಯೋ ಸಂವಾದ ನಡೆಸಿದರು. ಈ ವೀಡಿಯೋ ಸಂವಾದದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ನೀಡಿದ್ದರು. ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸುತ್ತಿದೆ. ಜುಲೈ 3ನೇ

ಜುಲೈ 3ನೇ ವಾರ ಪಿಯುಸಿ ಪರೀಕ್ಷೆ ಆಗಸ್ಟ್ ನಲ್ಲಿ ಫಲಿತಾಂಶ Read More »

ಅಕ್ಕ- ತಂಗಿಯರ ವರಿಸಿದ ಮತ್ತೊಬ್ಬ ಯುವಕ!

ತೆಲಂಗಾಣ: ಈ ಹಿಂದೆ ಕೋಲಾರದ ಉಮಾಪತಿ ಎಂಬ ಯುವಕ ಅಕ್ಕತಂಗಿಯರನ್ನು ವರಿಸಿ ರಾಜ್ಯಾದ್ಯಂತ ಸುದ್ದಿಯಾಗಿ, ಬಳಿಕ ಕಂಬಿ ಸೇರಿದ್ದ ಘಟನೆ ಮರೆಯುವಾಗಲೇ ಇಂತದ್ದೇ ಮದುವೆಯೋಗ ಮತ್ತೊಬ್ಬನಿಗೆ ಒಲಿದಿದ್ದು, ಆತನೊಂದಿಗೆ ಒಮ್ಮೆಲೆ ಇಬ್ಬರು ಯುವತಿಯರು ಸಪ್ತಪದಿ ತುಳಿದಿದ್ದಾರೆ. ಅಂದಹಾಗೆ ವಧುಗಳಿಬ್ಬರೂ ಒಡಹುಟ್ಟಿದವರು! ತೆಲಂಗಾಣ ರಾಜ್ಯದ ಮೆದಕ್​ ಜಿಲ್ಲೆಯ ಕೋಲ್ಚರಂ ಪಂಚಾಯಿತಿ ವ್ಯಾಪ್ತಿಯ ಅನ್ಸಾನ್ ಪಲ್ಲಿ ಗ್ರಾಮದಲ್ಲಿ ಇಂತದ್ದೊಂದು ಮದುವೆ ನಡೆದಿದೆ. ಗ್ರಾಮದ ಗೋಪಾಲ ವೆಂಕಟೇಶ್ ಎಂಬುವರ ಮಕ್ಕಳಾದ ಸ್ವಾತಿ ಮತ್ತು ಶ್ವೇತಾ ಇಬ್ಬರೂ ಒಬ್ಬನನ್ನೇ ಮದುವೆ ಆಗಿದ್ದಾರೆ. ಅಕ್ಕ

ಅಕ್ಕ- ತಂಗಿಯರ ವರಿಸಿದ ಮತ್ತೊಬ್ಬ ಯುವಕ! Read More »

ಮೂಲ್ಕಿ: ಇಸ್ರೇಲ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಾತನಿಗೆ ಬೆದರಿಕೆ

ಮುಲ್ಕಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇಸ್ರೇಲ್ ಪರ ಬರಹಗಳಿದ್ದ ಪೋಸ್ಟರ್ ಹಂಚಿಕೊಂಡ ಯುವಕನಿಗೆ ಪ್ಯಾಲೆಸ್ತೀನ್ ಪರವಾದಿ ಯುವಕರ ತಂಡ ಬೆದರಿಕೆಯೊಡ್ಡಿದ ಘಟನೆ ಇಲ್ಲಿಗೆ ಸಮೀಪದ ಕಾರ್ನಾಡ್ ಎಂಬಲ್ಲಿ ನಡೆದಿದೆ. ಕಾರ್ನಾಡ್ ನಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದ ಯುವಕ ಇಸ್ರೇಲ್ ಪರ ಘೋಷಣೆಗಳಿದ್ದ ಪೋಸ್ಟರ್ ಹಂಚಿಕೊಂಡ ಕಾರಣಕ್ಕಾಗಿ ಕೆಲ ಯುವಕರ ಗುಂಪೊಂದು ಬೇಕರಿಗೆ ನುಗ್ಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿತ್ತು. ನಂತರ ಹಿಂದೂ ಸಂಘಟನೆಗಳ ಮುಖಂಡರು ನೀಡಿದ ದೂರಿನಂತೆ ಮುಲ್ಕಿ ಪೊಲೀಸರು ಬೆದರಿಕೆಯೊಡ್ಡಿದ ಯುವಕರನ್ನು ಬಂಧಿಸಿ ಬುದ್ಧಿವಾದ ತಿಳಿಸಿ

ಮೂಲ್ಕಿ: ಇಸ್ರೇಲ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಾತನಿಗೆ ಬೆದರಿಕೆ Read More »

15 ದಿನಗಳಲ್ಲಿ ಹೊಸ ಮರಳು‌ ನೀತಿ ಜಾರಿ: ಸಚಿವ ನಿರಾಣಿ

ಬೆಂಗಳೂರು.ಮೇ.24: ಹೊಸ ಮರಳು ನೀತಿ ಹಾಗೂ ಗಣಿ ನೀತಿಯು ಇನ್ನು 15 ದಿನದೊಳಗೆ ಜಾರಿಗೆ ಬರಲಿದೆ. ಈಗಾಗಲೇ ಈ ಸಂಬಂಧ ಕರಡು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟವರಿಗೆ ಕಳುಹಿಸಲಾಗಿದ್ದು, ಈ ಕುರಿತು ವ್ಯಕ್ತವಾಗುವ ಅನಿಸಿಕೆ, ಅಭಿಪ್ರಾಯಗಳನ್ನು ಪಡೆದು ನೂತನ ಮರಳು ನೀತಿ ಹಾಗೂ ಗಣಿ ನೀತಿಯನ್ನು ಜಾರಿಗೆ ತರಲಾಗುವುದೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ

15 ದಿನಗಳಲ್ಲಿ ಹೊಸ ಮರಳು‌ ನೀತಿ ಜಾರಿ: ಸಚಿವ ನಿರಾಣಿ Read More »

ಕಡಬ: ಕಬ್ಬಿಣದ ಸಲಾಕೆಗೆ ವಿದ್ಯುತ್ ತಂತಿ ತಗುಲಿ ತೆಂಗಿನಕಾಯಿ ಕೊಯ್ಯುತ್ತಿದ್ದ ಯುವಕ ಮೃತ್ಯು

ಕಡಬ: ಕಬ್ಬಿಣದ ಸಲಾಕೆ ಸಹಾಯದಿಂದ ಮರದಿಂದ ತೆಂಗಿನಕಾಯಿ ಕೇಳುತ್ತಿದ್ದಾಗ ಸಲಕ್ಕೆ ಪಕ್ಕದಲ್ಲಿದ್ದ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬಡಬೆಟ್ಟು ಎಂಬಲ್ಲಿ ನಡೆದಿದೆ. ಕುಟ್ರುಪಾಡಿ ಗ್ರಾಮದ ಬಡಬೆಟ್ಟು ನಿವಾಸಿ ತಂಗಚ್ಚನ್ ಎಂಬವರ ಪುತ್ರ 35 ವರ್ಷದ ಲಿಜು ಮೃತಪಟ್ಟ ದುರ್ದೈವಿ. ಲಿಜು ತನ್ನ ಮನೆಯಲ್ಲಿ ಇಂದು ಬೆಳಿಗ್ಗೆ  ತೆಂಗಿನಕಾಯಿ ಕೀಳುತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಡಬ: ಕಬ್ಬಿಣದ ಸಲಾಕೆಗೆ ವಿದ್ಯುತ್ ತಂತಿ ತಗುಲಿ ತೆಂಗಿನಕಾಯಿ ಕೊಯ್ಯುತ್ತಿದ್ದ ಯುವಕ ಮೃತ್ಯು Read More »

ಸುಳ್ಯ: ‘ಉಲಾಯಿ-ಪಿದಾಯಿ’, ಬಿಜೆಪಿ ಮಾಜಿ ಜಿ.ಪಂ.ಸದಸ್ಯ ಸಹಿತ ೧೦ ಮಂದಿ ಉಲಾಯಿ

ಸುಳ್ಯ: ಕೊರೊನಾ ಮಾರ್ಗ ಸೂಚಿ ಉಲ್ಲಂಘಿಸಿ ರಾತ್ರಿ ವೇಳೆ ಅಕ್ರಮವಾಗಿ ಜೂಜಾಟ ಆಡುತಿದ್ದ ಮಾಜಿ ಜಿಲ್ಲಾ ಪಂಚಾಯತ್ ಸೇರಿದಂತೆ 10 ಮಂದಿಯನ್ನು ಸುಳ್ಯ ಪೊಲೀಸ್ ಬಂಧಿಸಿದ ಘಟನೆ ನೆಡೆದಿದೆ. ಮಾಜಿ ಜಿ.ಪಂ.ಸದಸ್ಯ, ಬಿ.ಜೆ.ಪಿ ಕಾರ್ಯಕರ್ತ ಗಂಗಾಧರ ಕೇಪಳಕಜೆ ಸಹಿತ, ಗೋಪಾಲಕೃಷ್ಣ, ಗಂಗಾಧರಚಂದ್ರಶೇಖರ, ರಾಮ, ಸೋಮಶೇಖರ, ಜನಾರ್ದನ, ದೀಪಕ್ , ಮೋಹನ್ ದಾಸ್, ಅಶೋಕ, ದಯಾನಂದ ಬಂಧಿತ ಆರೋಪಿಗಳು. ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ಮೋಂಡಡ್ಕದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದರು. ಈ ವೇಳೆ ರಾತ್ರಿ ಗಸ್ತು ನಿರತ ಸುಳ್ಯ

ಸುಳ್ಯ: ‘ಉಲಾಯಿ-ಪಿದಾಯಿ’, ಬಿಜೆಪಿ ಮಾಜಿ ಜಿ.ಪಂ.ಸದಸ್ಯ ಸಹಿತ ೧೦ ಮಂದಿ ಉಲಾಯಿ Read More »

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಿ ಗೋಣಿಬೀಡು ಪಿಎಸ್ಐ ಅಮಾನತು

ಮೂಡಿಗೆರೆ: ಮಹಿಳೆ ನಾಪತ್ತೆ ಪ್ರಕರಣದಲ್ಲಿ ಆರೋಪಿ ಎನ್ನಲಾಗಿದ್ದ ದಲಿತ ಯುವಕನೋರ್ವನಿಗೆ ತಲೆಕೆಳಗಾಗಿ ಕಟ್ಟಿಹಾಕಿ ಬೇರೊಬ್ಬ ಆರೋಪಿಯ ಮೂತ್ರ ಕುಡಿಸಿದ ಆರೋಪ ಎದುರಿಸುತ್ತಿರುವ ಪಿಎಸ್ಐ ಯನ್ನು ಅಮಾನತು ಮಾಡಲಾಗಿದೆ. ಮೇ10ರಂದು ಪುನೀತ್ ಎಂಬವನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುವಾಗ ಈ ಘಟನೆ ನಡೆದಿತ್ತು. ನಂತರ ಪಿಎಸ್ ಐ ಅರ್ಜುನ್ ಅವರ ಈ ಅಮಾನವೀಯ ವರ್ತನೆ ತಿಳಿಯುತ್ತಿದ್ದಂತೆ ಹಲವೆಡೆ ಪಿಎಸೈ ಅಮಾನತಿಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರು. ಅದರಂತೆ ಅರ್ಜುನ್ ಅವರನ್ನು ಪಶ್ಚಿಮ ವಲಯ ಐಜಿಪಿ ನಿನ್ನೆ ಸೇವೆಯಿಂದ ಅಮಾನತುಗೊಳಿಸಿ

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಿ ಗೋಣಿಬೀಡು ಪಿಎಸ್ಐ ಅಮಾನತು Read More »

ಬೇಕಾಬಿಟ್ಟಿ ಓಡಾಡಿದ್ರೆ ಕಠಿಣ ಕ್ರಮ: ಇಂದಿನಿಂದ ಲಾಕ್ ಡೌನ್ ಕಟ್ಟುನಿಟ್ಟು.

ಬೆಂಗಳೂರು:ಮೇ.24: ರಾಜ್ಯದಲ್ಲಿ ಕೊರೋನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಅನೇಕ ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್ಡೌನ್ ಜಾರಿಯಲ್ಲಿದೆ. ಮೇ 24 ರಂದು 6 ಬೆಳಗ್ಗೆ ಗಂಟೆಯವರೆಗೆ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಜೂನ್ 7 ರವರೆಗೆ ವಿಸ್ತರಿಸಲಾಗಿದೆ. ಕಟ್ಟುನಿಟ್ಟಾಗಿ ಲಾಕ್ ಡೌನ್ ಅನುಷ್ಠಾನಕ್ಕೆ ಪೊಲೀಸರು ಸ್ಥಳೀಯ ಆಡಳಿತಗಳಿಂದ ಕ್ರಮಕೈಗೊಳ್ಳಲಾಗಿದೆ. ಅನಗತ್ಯವಾಗಿ ಸಂಚರಿಸುವವರಿಗೆ ಬ್ರೇಕ್ ಹಾಕಲಾಗುತ್ತಿದ್ದು, ವಾಹನ ವಶ, ದಂಡ ವಸೂಲಿ ಸೇರಿ ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯಾದ್ಯಂತ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ

ಬೇಕಾಬಿಟ್ಟಿ ಓಡಾಡಿದ್ರೆ ಕಠಿಣ ಕ್ರಮ: ಇಂದಿನಿಂದ ಲಾಕ್ ಡೌನ್ ಕಟ್ಟುನಿಟ್ಟು. Read More »

ರಿಯಾದ್ ನಲ್ಲಿ ರಸ್ತೆ ಅಪಘಾತಕ್ಕೆ ಕರಾವಳಿ ಮೂಲದ ಮಗು ‌ಬಲಿ

ಮಂಗಳೂರು.ಮೇ23:‌ ಇಲ್ಲಿನ ಮೂಡುಬಿದಿರೆ ಪುರಸಭಾ ವ್ಯಾಪ್ತಿ ಕಲ್ಲಬೆಟ್ಟು ಮೂಲದ ದಂಪತಿಯ ಮಗು ರಿಯಾದ್ ನಲ್ಲಿ ನಡೆದಕಾರು ಅಪಘಾತದಲ್ಲಿ ಮೃತಪಟ್ಟಿದೆ. ಕಲ್ಲಬೆಟ್ಟು ಗಂಟಾಲ್ಕಟ್ಟೆ ಮೂಲದ ಆದಿಲ್ ದಂಪತಿ ರಿಯಾದ್ ನಲ್ಲಿ ವಾಸವಾಗಿದ್ದಾರೆ. ಆದಿಲ್ ಅವರು ಟ್ರಾವೆಲ್ ಏಜೆನ್ಸಿ ಹೊಂದಿದ್ದಾರೆ. ಅವರ ಕುಟುಂಬ ತಮ್ಮ ಕಾರಿನಲ್ಲಿ ದಮ್ಮಾಮ್ ಗೆ ತೆರಳಿತ್ತು. ಕೆಲಸ ಮುಗಿಸಿ ರಿಯಾದ್ ಗೆ ವಾಪಾಸಾಗುತ್ತಿದ್ದಾಗ ಆದಿಲ್ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ದಂಪತಿಗಳ ಒಂದು ವರ್ಷದ ಗಂಡು ಮಗು ಓವೈಸಿ ಆದಿಲ್ ಗೆ ಗಂಭೀರ

ರಿಯಾದ್ ನಲ್ಲಿ ರಸ್ತೆ ಅಪಘಾತಕ್ಕೆ ಕರಾವಳಿ ಮೂಲದ ಮಗು ‌ಬಲಿ Read More »