ಮೂಡಿಗೆರೆಯ ಮೂತ್ರ ಕುಡಿಸಿದ ಪ್ರಕರಣ: ಯುವಕನ ವಿರುದ್ಧ ಎಫ್ಐಆರ್ ದಾಖಲು | ವಿವಾಹಿತ ಮಹಿಳೆ ಜೊತೆಗಿನ ಫೋನ್ ಸಂಭಾಷಣೆ ವೈರಲ್
ಮೂಡಿಗೆರೆ: ಕಳೆದೆರಡು ವಾರಗಳಿಂದ ರಾಜ್ಯದಾದ್ಯಂತ ಧೂಳೆಬ್ಬಿಸಿರುವ ಮೂಡಿಗೆರೆಯಲ್ಲಿ ಪಿಎಸ್ ಐ, ದಲಿತ ಯುವಕನೋರ್ವನಿಗೆ ಮೂತ್ರ ಕುಡಿಸಿದ್ದರು ಎನ್ನಲಾದ ಪ್ರಕರಣ ದಿನ ಕಳೆದಂತೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪಿಎಸ್ಎ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ದೂರು ನೀಡಿದ್ದ ಯುವಕನ ಮೇಲೆಯೂ ಎಫ್ಐಆರ್ ದಾಖಲಾಗಿದೆ. ಕಿರುಗುಂದ ವಿವಾಹಿತ ಮಹಿಳೆಯೋರ್ವರ ದೂರಿನ ಆಧಾರದ ಮೇಲೆ ಬಂಧಿತನಾಗಿದ್ದ ಅದೇ ಗ್ರಾಮದ ದಲಿತ ಯುವಕ ಪುನೀತ್, ಗೋಣಿಬೀಡು ಪಿಎಸ್ಐ ವಿಚಾರಣೆ ವೇಳೆ ನನಗೆ ಮೂತ್ರ ಕುಡಿಸಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ. […]