Ad Widget .

‘ತಂಬಾಕಿಗೆ ಹೇಳಬೇಕು ನೀನಿನ್ನು ಸಾಕು’ ತಂಬಾಕಿನ ವಿಷಪಾನದಿಂದ ಮುಕ್ತರಾಗೋಣ

ಮೇ 31 ವಿಶ್ವ ತಂಬಾಕು ರಹಿತ ದಿನ. ‘ಜೀವನ ಜಯಿಸಲು ತಂಬಾಕು ತ್ಯಜಿಸಿ’ (quit tobacco to be a winner) ಈ ಬಾರಿಯ ಘೋಷವಾಕ್ಯ. ಹಿಂದೆಂದಿಗಿಂತಲೂ ಈ ಬಾರಿಯ ಘೋಷವಾಕ್ಯ ಹೆಚ್ಚು ಅರ್ಥಪೂರ್ಣವಾಗಿದೆ. ಇಂದಿನ ಕೋವಿಡ್‌ ಸನ್ನಿವೇಶದಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಮುಕ್ತಿ ಪಡೆಯುವುದು ಬಹಳ ಅಗತ್ಯ ಮತ್ತು ಅನಿವಾರ್ಯ ಕ್ರಮವಾಗಿದೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಅಷ್ಟೆ ಅಲ್ಲ, ಧೂಮಪಾನ ಮತ್ತು ತಂಬಾಕು ಸೇವನೆಯನ್ನು ತ್ಯಜಿಸಲು ನೂರಾರು ಕಾರಣ, ಅಂತಹ ಹಲವು ಕಾರಣಗಳನ್ನು ಅದು ತನ್ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದೆ.

Ad Widget . Ad Widget .

ಇಂತಹ ಚಟಗಳಿಗೆ ದಾಸರಾಗುವುದು ಬಹಳ ಸುಲಭ, ಮುಕ್ತಿ ಪಡೆಯುವುದು ಅಷ್ಟೆ ಕಠಿಣ. ಆದರೆ ಅಸಾಧ್ಯವೇನೂ ಅಲ್ಲ. ವಿಶ್ವಾದ್ಯಂತ ಸುಮಾರು 78 ಕೋಟಿ (780 ಮಿಲಿಯನ್) ಜನರು ಈ ಚಟಗಳನ್ನು ತ್ಯಜಿಸಬೇಕೆಂದು ಬಯಸುತ್ತಾರೆ, ಆದರೆ ಅವರಲ್ಲಿ ಕೇವಲ ಶೇ30ರಷ್ಟು ಜನರಿಗೆ ಮಾತ್ರ ಅದು ಸಾಧ್ಯವಾಗುತ್ತದೆ.
ಸಾಂಕ್ರಾಮಿಕ ರೋಗದ ಪರಿಣಾಮ ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಒತ್ತಡದಿಂದಾಗಿ, ಈ ಚಟಕ್ಕೆ ಸೇರ್ಪಡೆಗೊಳ್ಳುವವರ ಸಂಖ್ಯೆ ಹೆಚ್ಚಿದೆ. ಇದರಿಂದ ಹೊರಬರಬೇಕು ಎಂದು ಬಯಸುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಅವರಿಂದ ಸಾಧ್ಯವಾಗುತ್ತಿಲ್ಲ. ಅಂಥವರಿಗಾಗಿ ವಿಶ್ವ ಆರೋಗ್ಯ ಸಂಸ್ಥೆ ಒಂದು ವರ್ಷದ ಅಭಿಯಾನವನ್ನು ಆರಂಭಿಸಿದೆ.

Ad Widget . Ad Widget .

ಇದನ್ನು ತ್ಯಜಿಸಬೇಕೆಂದು ನೀವು ದೃಢ ಸಂಕಲ್ಪ ಮಾಡಿದ್ದೇ ಆದರೆ ನಿಮ್ಮ ಬದುಕಿಗೆ, ನಿಮ್ಮ ಪ್ರೀತಿ ಪಾತ್ರರಿಗೆ, ನಿಮ್ಮ ಸಮಾಜಕ್ಕೆ, ಈ ಭೂಮಂಡಲಕ್ಕೆ ನಿಮ್ಮಿಂದ ಎಷ್ಟು ದೊಡ್ಡ ಉಪಕಾರವಾಗುತ್ತದೆ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಒತ್ತಿ ಹೇಳಿದೆ. ಅದರಿಂದ ಉಂಟಾಗುವ ಲಾಭಗಳನ್ನು ಅದು ಪಟ್ಟಿ ಮಾಡಿದೆ. ಆ ಕೆಲವು ಕಾರಣಗಳು ಹೀಗಿವೆ:

ಇಂದೇ ನೀವು ಧೂಮಪಾನ ಮತ್ತು ತಂಬಾಕು ಸೇವನೆಯನ್ನು ತ್ಯಜಿಸುವ ಸಂಕಲ್ಪ ಮಾಡಿ ಏಕೆಂದರೆ-

* ಧೂಮಪಾನ ತ್ಯಜಿಸಿದ ಕೇವಲ 20 ನಿಮಿಷದಲ್ಲಿಯೇ ಆರೋಗ್ಯ ಲಾಭಗಳನ್ನು ಗುರುತಿಸಬಹುದು. 20 ನಿಮಿಷಗಳಲ್ಲಿ, ಹೃದಯ ಬಡಿತ ಮತ್ತು ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ.

* 12 ಗಂಟೆಗಳಲ್ಲಿ, ರಕ್ತದಲ್ಲಿನ ಇಂಗಾಲದ ಮೊನಾಕ್ಸೈಡ್ ಮಟ್ಟವು ಸಾಮಾನ್ಯ ಸ್ಥಿತಿಗೆ ಬರುತ್ತದೆ.

* 2ರಿಂದ 12 ವಾರಗಳಲ್ಲಿ, ರಕ್ತಪರಿಚಲನೆಯು ಸುಧಾರಿಸುತ್ತದೆ ಮತ್ತು ಶ್ವಾಸಕೋಶದ ಕಾರ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

* 1ರಿಂದ 9 ತಿಂಗಳ ಒಳಗೆ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ.

* 1 ವರ್ಷದ ಒಳಗೆ, ಹೃದಯ ಕಾಯಿಲೆಯ ಅಪಾಯ ಅರ್ಧದಷ್ಟು ತಗ್ಗುತ್ತದೆ.

* 5 ವರ್ಷದ ಒಳಗೆ, ಪಾರ್ಶ್ವವಾಯು ಅಪಾಯವು ಕಡಿಮೆಯಾಗುತ್ತದೆ.

* 10 ವರ್ಷಗಳ ಒಳಗೆ, ಶ್ವಾಸಕೋಶದ ಕ್ಯಾನ್ಸರ್ ಅಪಾಯ ಅರ್ಧದಷ್ಟು ಕಡಿಮೆಯಾಗುತ್ತದೆ ಮತ್ತು ಬಾಯಿ, ಗಂಟಲು, ಅನ್ನನಾಳ, ಗರ್ಭಕಂಠ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯವೂ ಕಡಿಮೆಯಾಗುತ್ತದೆ.

ಇದಷ್ಟೆ ಅಲ್ಲ, ಧೂಮಪಾನಿಗಳು ಕೋವಿಡ್‌ಗೆ ಗುರಿಯಾಗುವ ಅಪಾಯ ಹೆಚ್ಚು. ಧೂಮಪಾನಿಗಳು ಕೋವಿಡ್‌ನ ತೀವ್ರವಾದ ದಾಳಿಗೆ ಒಳಗಾಗು ಸಾಧ್ಯತೆ ಹೆಚ್ಚು ಮತ್ತು ಸಾವಿನ ಅಪಾಯವೂ ಅಧಿಕ ಎಂದು ಡಬ್ಲ್ಯುಎಚ್‌ಒ ಎಚ್ಚರಿಸಿದೆ. ತಂಬಾಕು ಸೇವಿಸುವವರು ಇತರರಿಗಿಂತ 10 ವರ್ಷ ಮುಂಚೆ ಸಾವನ್ನಪ್ಪುತ್ತಾರೆ. ಅವರ ಜೀವನದ ಗುಣಮಟ್ಟವೂ ಸಹ ಕಳಪೆಯಾಗಿರುತ್ತದೆ. ಅವರು ಇತರರಿಗಿಂತ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ತಂಬಾಕು ಸಾಂಕ್ರಾಮಿಕ ರೋಗಗಕ್ಕಿಂತ ಭೀಕರವಾಗಿದ್ದು, ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಅಪಾಯಗಳಲ್ಲಿ ಒಂದಾಗಿದೆ.

ಹೊಸ ಪರಿಹಾರ ಹುಡುಕಬೇಕು
‘ಇಷ್ಟು ದಿನ ಧೂಮಪಾನ ಮುಕ್ತ ಭಾರತಕ್ಕಾಗಿ ನಾವೆಲ್ಲಾ ಪ್ರಯತ್ನಿಸಿದ್ದಾಗಿದೆ. ಈಗ ಧೂಮಪಾನ ನಿಷೇಧಿಸುವ ಸಮಗ್ರ ವಿಧಾನದ ಅಗತ್ಯವನ್ನು ಅರಿತುಕೊಳ್ಳುವ ಸಮಯ ಬಂದಿದೆ. ತಂಬಾಕು ಉತ್ಪನ್ನಗಳನ್ನು ಉತ್ಪಾದಿಸುವ ಎರಡನೇ ಅತಿ ದೊಡ್ಡ ದೇಶವಾಗಿರುವ ಭಾರತದಲ್ಲಿ ಇದರ ಸಾವುಗಳೂ ಅಷ್ಟೇ ಪ್ರಮಾಣದಲ್ಲಿವೆ. ಹೀಗಿರುವಾಗ ಇದನ್ನು ವರ್ಜಿಸುವುದು ಕೂಡಾ ಅಷ್ಟೇ ಮುಖ್ಯ. ಇಲ್ಲವಾದಲ್ಲಿ ಮುಂದೊಮ್ಮೆ ಭಾರತ ಕ್ಯಾನ್ಸರ್ ರಾಷ್ಟ್ರ‌ ಆಗಬಹುದು.

Leave a Comment

Your email address will not be published. Required fields are marked *