Ad Widget .

ಪಾಸಿಟಿವ್ ಸಮಾಚಾರ : ಚಾಲಕರಿಂದ ಲಂಚ ಸ್ವೀಕರಿಸಿ ವೈರಲ್ ಆಗಿದ್ದ ಅರಣ್ಯಾಧಿಕಾರಿ ಅಮಾನತು

ಉಪ್ಪು ತಿಂದವ ನೀರು ಕುಡಿಯಬೇಕು ಎಂಬ ಗಾದೆಗೆ‌ ಈ ಘಟನೆ ಸಾಕ್ಷಿಯಾಗಿದೆ. ಮಾಣಿ‌ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಚೆಕ್ ಪೋಸ್ಟ್ ‌ನಲ್ಲಿ ಲಾರಿ ಚಾಲಕರಿಂದ ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಇದೀಗ ಸಸ್ಪೆಂಡ್ ಆಗಿದ್ದಾರೆ.
ಸಂಪಾಜೆ ವಲಯದ ದಬ್ಬಡ್ಕ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಕ್ಷಿತ್ ಅಮಾನತುಗೊಂಡ ಅಧಿಕಾರಿ. ಮೇ.24ರಂದು‌ ಸಂಪಾಜೆ ‌ತನಿಖಾ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಲಾರಿ ಚಾಲಕನಿಂದ ಹಣ ಪಡೆದು ಧಮ್ಕಿ ಹಾಕಿದ ವಿಡಿಯೋ ವೈರಲ್ ಆಗಿ ಸುದ್ದಿಯಾಗಿತ್ತು.

Ad Widget . Ad Widget .

ಈ ಹಿನ್ನೆಲೆಯಲ್ಲಿ ಈತನನ್ನು ವೃತ್ತ ಸಂರಕ್ಷಣಾಧಿಕಾರಿ ಸೇವೆಯಿಂದ ಅಮಾನತುಗೊಳಿಸಿರುವುದಾಗಿ ತಿಳಿದುಬಂದಿದೆ. ಇಂತಹ ಭ್ರಷ್ಟ ಅಧಿಕಾರಿಗಳು ಈ ರೀತಿಯಲ್ಲಿ ಶಿಕ್ಷೆಗೊಳಗಾದಾಗ ಮಾತ್ರ ಜನ ಆಡಳಿತವನ್ನು ಪಾಸಿಟಿವ್ ಆಗಿ ನೋಡುತ್ತಾರೆ.

Ad Widget . Ad Widget .

Leave a Comment

Your email address will not be published. Required fields are marked *