Ad Widget .

ನೆರಿಯ ಅನಾಥಾಶ್ರಮದಲ್ಲಿ ಕೊರೊನ ರಣಕೇಕೆ: 210 ಮಂದಿಯಲ್ಲಿ ಕಾಣಿಸಿಕೊಂಡ ಮಹಾಮಾರಿ

ಮಂಗಳೂರು.ಮೇ 31: ಇಲ್ಲಿನ ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನಾ ಮಹಾಸ್ಪೋಟವಾಗಿದೆ. ತಾಲೂಕಿನ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಡಿಬಾಗಿಲಿನಲ್ಲಿರುವ ಸಿಯೋನ್ ಅನಾಥಾಶ್ರಮದಲ್ಲಿ ಕೊರೊನಾ ಸ್ಫೋಟವಾಗಿದೆ. ಆಶ್ರಮದ 270 ಜನರಲ್ಲಿ 210 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸಾಮೂಹಿಕ ಟೆಸ್ಟ್ ಮಾಡುವಾಗ ಕೊರೊನಾ ಸೋಂಕು ಪತ್ತೆಯಾಗಿದೆ.
ಒಟ್ಟು 270 ಜನರಿರುವ ಆಶ್ರಮ ಇದಾಗಿದ್ದು,ಕಳೆದ ಕೆಲ ದಿನಗಳ ಹಿಂದೆ ಕೆಲವು ಮಂದಿಯಲ್ಲಿ ಕಂಡು ಬಂದಿದ್ದ ಸೋಂಕು ಕಂಡುಬಂದಿತ್ತು. ಶನಿವಾರ ನಡೆಸಿದ ಟೆಸ್ಟ್ ನಲ್ಲಿ ಬಹುತೇಕ ಎಲ್ಲರಲ್ಲೂ ಸೋಂಕು ಪತ್ತೆಯಾಗಿದೆ. ಸಿಯೋನ್ ಆಶ್ರಮದಲ್ಲಿ ಬಹುತೇಕ ವೃದ್ಧರು ಮತ್ತು ಮನೋರೋಗಿಗಳಿದ್ದು, ಸೋಂಕಿತರನ್ನು ಕೊವೀಡ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಲು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಮುಂದಾಗಿದ್ದಾರೆ.
ಹತ್ತಕ್ಕೂ ಹೆಚ್ಚು ಅಂಬುಲೆನ್ಸ್ ಗಳಲ್ಲಿ ಸೋಂಕಿತರ ಶಿಫ್ಟ್ ಮಾಡಲಾಗಿದೆ‌. ಧರ್ಮಸ್ಥಳದ ರಜತಾದ್ರಿ ವಸತಿಗೃಹಕ್ಕೆ ಸೋಂಕಿತರು ಶಿಫ್ಟ್ ಆಗಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ದ ರಜತಾದ್ರಿ ವಸತಿ ಗೃಹ ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಗಿದೆ.
ಅತೀ ಹೆಚ್ಚಾಗಿ ವೃದ್ಧರು ಮತ್ತು ಮನೋರೋಗಿಗಳೇ ಇರುವ ಸಿಯೋನ್ ಆಶ್ರಮದಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳಿದ್ದು, ಅವುಗಳ ಸ್ಥಿತಿಯೂ ಕರುಣಾಜನಕವಾಗಿದೆ. ಕ್ರೈಸ್ತ ಧಾರ್ಮಿಕ ಮುಖಂಡರಿಂದ ನಡೆಸಲ್ಪಡುವ ಸಿಯೋನ್ ಆಶ್ರಮದಲ್ಲಿ 50ಕ್ಕೂ ಹೆಚ್ಚು ದನಗಳು, 10 ಹೆಚ್ಚು ಎಮ್ಮೆ, ಕೋಣಗಳು, 10ಕ್ಕೂ ಹೆಚ್ಚು ಕರುಗಳಿವೆ.

Ad Widget . Ad Widget .

ಈ ಹಿಂದೆ ಆಕಳುಗಳ ಲಾಲನೆ ಪಾಲನೆ ಮಾಡುತ್ತಿದ್ದವರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಒಂದು ವಾರದಿಂದ ಆಕಳುಗಳ ನಿರ್ವಹಣೆ ಯಾಗುತ್ತಿಲ್ಲ. ದನಗಳಿಗೆ ಆಹಾರವೂ ಕಡಿಮೆಯಾಗಿದೆ. ಹುಲ್ಲು, ಒಣಹುಲ್ಲು, ನೀರು ನೀಡೋಕೂ ಆಶ್ರಮದಲ್ಲಿ ಸಿಬ್ಬಂದಿಗಳಿಲ್ಲ. ಇದರಿಂದ ಹಸಿವಿನಿಂದ ಬಳಲಿ ನಿತ್ರಾಣವಾದ ಸ್ಥಿತಿಯಲ್ಲಿ ಸಿಯೋನ್ ಆಶ್ರಮದ ಜಾನುವಾರುಗಳಿವೆ. ಕಳೆದೊಂದು ವಾರದಿಂದ ಜಾನುವಾರುಗಳಿಗೆ ಮೇವು ಹಾಕದೇ ಅವುಗಳ ಸ್ಥಿತಿ ಕಠೋರವಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *