Ad Widget .

ಕಡಿಮೆಯಾಗುತ್ತಿರುವ ಪಾಸಿಟಿವ್ ದರ. ಜೂ.7ರಿಂದ ರಾಜ್ಯ ಅನ್ ಲಾಕ್!?

ಬೆಂಗಳೂರು : ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೋವಿಡ್ -19 ಸೋಂಕಿನ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗುತ್ತಿರುವುದರಿಂದ ರಾಜ್ಯ ಸರ್ಕಾರ ಅನ್‌ಲಾಕ್ ಪ್ಲಾನ್ ರೂಪಿಸುತ್ತಿದೆ. ಕೊರೊನಾ ಎರಡನೇ ಅಲೆ ಕರುನಾಡನ್ನು ಸಂಪೂರ್ಣ ನಲುಗಿಸಿದೆ. ದಿನೇದಿನೇ ಉಲ್ಬಣಿಸುತ್ತಿದ್ದ ಕೊರೊನಾ ಅಬ್ಬರ, ಮತ್ತೊಂದೆಡೆ ಹೆಚ್ಚುತ್ತಿರುವ ಸಾವಿನ ಸಂಖ್ಯೆ ರಾಜ್ಯವನ್ನು ಸಂಪೂರ್ಣ ಹಿಂಡಿ ಹಿಪ್ಪೆಯಾಗಿಸಿತ್ತು. ಈ ಕೊರೊನಾದ ಆರ್ಭಟಕ್ಕೆ ನಿಯಂತ್ರಣ ಹೇರಲು ಅನಿವಾರ್ಯವಾಗಿ ಸರ್ಕಾರ ಲಾಕ್‌ಡೌನ್ ಮೊರೆ ಹೋಗಿದೆ. ಏಪ್ರಿಲ್ 27ರಿಂದ ಚಾಲ್ತಿಯಲ್ಲಿರುವ ಲಾಕ್‌ಡೌನ್‌ ದಿನ ಕಳೆದಂತೆ ಮತ್ತಷ್ಟು ಬಿಗಿಗೊಳಿಸಲಾಯಿತು.‌

Ad Widget . Ad Widget .

ಜೂನ್ 7ರವರೆಗೆ ರಾಜ್ಯದಲ್ಲಿ ಬಿಗಿ ಲಾಕ್‌ಡೌನ್ ಮುಂದುವರಿದಿದೆ. ಒಂದು ತಿಂಗಳು ರಾಜ್ಯ ಬಹುತೇಕ ಸ್ತಬ್ಧವಾಗಿದೆ.
ಇದೀಗ ರಾಜ್ಯದಲ್ಲಿ ಕೊರೊನಾ ಅಬ್ಬರ ತಗ್ಗುತ್ತಿದೆ. ಪಾಸಿಟಿವ್ ದರ ಕಡಿಮೆಯಾಗುತ್ತಿದ್ದರೆ, ಕೊರೊನಾದಿಂದ ಗುಣಮುಖರಾಗುತ್ತಿರುವ ಪ್ರಮಾಣವೂ ದಿನೇದಿನೆ ಹೆಚ್ಚಾಗುತ್ತಿದೆ. ಆದರೆ ಮರಣ ಪ್ರಮಾಣ ಹಾಗೆಯೇ ಇದೆ.

Ad Widget . Ad Widget .

ಬೆಂಗಳೂರಿನಲ್ಲಿ ಗಣನೀಯವಾಗಿ ಕೊರೊನಾ ಆರ್ಭಟ ಕಡಿಮೆಯಾಗುತ್ತಿದೆ. ಕೊರೊನಾ ರೌದ್ರಾವತಾರ ಇಳಿಕೆಯಾಗುತ್ತಿರುವ ಹಿನ್ನೆಲೆ ಇದೀಗ ಸರ್ಕಾರ ಅನ್‌ಲಾಕ್ ಪ್ರಕ್ರಿಯೆಗೆ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಕಳೆದ ಒಂದು ತಿಂಗಳಿಂದ ರಾಜ್ಯಾದ್ಯಂತ ಕಠಿಣ ಲಾಕ್‌ಡೌನ್ ಜಾರಿಯಲ್ಲಿದ್ದು, ಬಹುತೇಕ ಆರ್ಥಿಕ ಚಟುವಟಿಕೆ ಸ್ತಬ್ಧವಾಗಿದೆ. ಇದರಿಂದ ರಾಜ್ಯದ ಆರ್ಥಿಕತೆಗೆ, ಖಜಾನೆಗೆ ಭಾರೀ ಹೊಡೆತ ಬೀಳುತ್ತಿದೆ. ಹೀಗಾಗಿ, ಸರ್ಕಾರಕ್ಕೆ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭಿಸುವುದು ಅನಿವಾರ್ಯ ಎನ್ನಲಾಗಿದೆ. ಆದರೆ ಕೆಲವು ಸಚಿವರು ಕೊರೊನ ಪಾಸಿಟಿವ್ ದರ ಬಹುತೇಕ ಕಡಿಮೆಯಾಗದ ಹೊರತು ಅನ್ ಲಾಕ್ ಬೇಡ ಎನ್ನುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿಗಳು ಜೂ. 6 ರಂದು ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *