Ad Widget .

ವಿರುಷ್ಕಾ ಅಭಿಮಾನಿಗಳಿಗೆ ವಮಿಕಾಳ ಮುದ್ದು ಮುಖ ತೋರಿಸೋದ್ಯಾವಾಗ…?

ನವದೆಹಲಿ: ಲಾಕ್ ಡೌನ್ ನಲ್ಲಿ ತಮ್ಮ ಮುದ್ದು ಮಗಳ ಜೊತೆ ಎಂಜಾಯ್ ಮಾಡುತ್ತಿರುವ ವಿರುಷ್ಕಾ ದಂಪತಿಗೆ ಅಭಿಮಾನಿಯೊಬ್ಬರು ಪ್ರಶ್ನೆಯೊಂದನ್ನು ಕೇಳಿದ್ದಾರೆ. ನಿಮ್ಮ ಮಗುವಿನ ಮುದ್ದು ಮುಖವನ್ನು ನಮಗೆಂದು ತೋರಿಸುತ್ತೀರಿ ಎಂದು ಕೇಳಿದ ಅಭಿಮಾನಿಗಳಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುದ್ದಾದ ಉತ್ತರವೊಂದವೊಂದನ್ನು ನೀಡಿದ್ದಾರೆ.

Ad Widget . Ad Widget .

ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಅನುಷ್ಕಾ ಶರ್ಮ ಅವರ ಅಸಂಖ್ಯಾತ ಅಭಿಮಾನಿಗಳಿಗೆ, ಮೂರು ತಿಂಗಳ ಹಿಂದೆ ಜನಿಸಿದ ಅವರ ಮುದ್ದಾದ ಮಗಳು ಈಗ ಹೇಗಿದ್ದಾಳೆ ಅನ್ನೋ ಕುತೂಹಲ ಇದೆ. ಲಾಕ್ಡೌನ್ ಅವಧಿಯಲ್ಲಿ ವಿರಾಟ್ ಸಾಮಾಜಿಕ ಜಾಲತಾಣ ಇನ್ಸ್​​ಟಾಗ್ರಾಂ ಮೂಲಕ ಅಭಿಮಾನಿಗಳ ಜೊತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ವಿರುಷ್ಕಾ ದಂಪತಿಯ ಮುದ್ದಾದ ಮಗು ವಮಿಕಾಳ ಫೋಟೋವನ್ನು ಹಂಚಿಕೊಳ್ಳುವಂತೆ ಕೇಳಿದ್ದಾರೆ.

Ad Widget . Ad Widget .

ಇದಕ್ಕೆ ಪ್ರತಿಕ್ರಿಯಿಸಿರುವ ಕೊಹ್ಲಿ, ವಮಿಕಾ ಗೆ ಪ್ರಪಂಚದ ಜ್ಞಾನ ಅರಿಯುವವರೆಗೂ, ಸಾಮಾಜಿಕ ಜಾಲತಾಣ ಅಂದ್ರೆ ಏನು ಎಂದು ಅವಳಿಗೆ ತಿಳಿಯುವವರೆಗೂ ಆಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡೋದಿಲ್ಲ ಅಂತ ಉತ್ತರಿಸಿದ್ದಾರೆ.

Leave a Comment

Your email address will not be published. Required fields are marked *