Ad Widget .

ಸುಳ್ಯ: ಹೊಟ್ಟೆ ನೋವೆಂದ ಕಳ್ಳತನದ ಆರೋಪಿ-ಸ್ಕ್ಯಾನಿಂಗ್‌ನಲ್ಲಿ ಚಿನ್ನದ ಗುಟ್ಟು ರಟ್ಟು

ಸುಳ್ಯ: ಹಲವು ಜ್ಯುವೆಲ್ಲರಿ ಅಂಗಡಿಯಿಂದ ಇತ್ತಿಚೆಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂದಿಸಿದ್ದರು. ಅದರಲ್ಲಿ ಓರ್ವ ಕಳ್ಳನಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನ್ ಮಾಡಿದಾಗ ಆತನ ಕರುಳಿನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ.

Ad Widget . Ad Widget .


ತಂಗಚ್ಚನ್ ಮತ್ತು ಶಿಬು ಕಳ್ಳತನದ ಆರೋಪಿಗಳು. ಆರೋಪಿ ತಂಗಚ್ಚನ್ ಅನ್ನು ಶನಿವಾರ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಇನ್ನೊಬ್ಬ ಆರೋಪಿ ಶಿಬು ಎಂಬಾತನ ಮೆಡಿಕಲ್ ಟೆಸ್ಟ್ ಮಾಡಿಸಲು ಬಾಕಿ ಇದ್ದುದರಿಂದ ಭಾನುವಾರ ಕೋರ್ಟ್ ಗೆ ಹಾಜರುಪಡಿಸಲು ನಿರ್ಧರಿಸಲಾಗಿತ್ತು. ಆರೋಪಿ ಶಿಬುಗೆ ಶನಿವಾರ ಸಂಜೆಯ ವೇಳೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆತನನ್ನು ಸರ್ಕಾರಿ ಆಸ್ಪತ್ರೆಗೆ ಪೊಲೀಸರು ಕರೆದುಕೊಂಡು ಹೋದಾಗ ಆತನಿಗೆ ಹರ್ನಿಯಾ ಆಗಿರಬಹುದೆಂದು ಆಪರೇಶನ್ ಉದ್ದೇಶದಿಂದ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

Ad Widget . Ad Widget .

ಕೆವಿಜಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಸ್ಕ್ಯಾನ್ ಮಾಡಿದಾಗ ಕರುಳಿನಲ್ಲಿ ಚಿನ್ನದ ಉಂಗುರ ಇರುವುದಾಗಿ ಪತ್ತೆಯಾಗಿದೆ. ಇಂದು ಬೆಳಿಗ್ಗೆ ಹೊರತೆಗೆಯಲಾಗಿದ್ದು 35 ಗ್ರಾಂ ಚಿನ್ನವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇನ್ನು ಆರೋಪಿ ಆರೋಗ್ಯವಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ನಂತರ ನ್ಯಾಯಂಗ ಬಂದನಕ್ಕೆ ಒಪ್ಪಿಕೊಂಡಿದ್ದಾನೆ.

Leave a Comment

Your email address will not be published. Required fields are marked *