Ad Widget .

ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಲೈಫ್ ಆಫ್ ಚಾರ್ಲಿ ಟೀಸರ್

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘777 ಚಾರ್ಲಿ’ ಸಿನಿಮಾ ಕುರಿತು ದೊಡ್ಡ ಅಪ್‍ಡೇಟ್ ಸಿಕ್ಕಿದ್ದು, ಟೀಸರ್ ಬಿಡುಗಡೆ ಕುರಿತು ಸ್ವತಃ ರಕ್ಷಿತ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದ ಅಫೀಷಿಯಲ್ ಟೀಸರ್ ಬಿಡುಗಡೆ ಬಗ್ಗೆ ಚಿತ್ರ ತಂಡ ತಿಳಿಸಿದೆ. ಈ ಕುರಿತು ಫೆಸ್ಬುಕ್‍ನಲ್ಲಿ ಐದು ಭಾಷೆಗಳ ಪೋಸ್ಟರ್ ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ, ನಮ್ಮ ಚಿತ್ರದ ಅಫೀಷಿಯಲ್ ಟೀಸರ್ ‘ಲೈಫ್ ಆಫ್ ಚಾರ್ಲಿ’ ಜೂನ್ 6ಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

Ad Widget . Ad Widget .

ಅಂದಹಾಗೆ ಜೂ.6ರಂದು ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬದ ಹಿನ್ನೆಲೆ ಈ ಟೀಸರ್ ಬಿಡುಗಡೆ ಮಾಡಲಾಗುತ್ತಿದ್ದು, ಈ ಮೂಲಕ ಅಭಿಮಾನಿಗಳಿಗೆ ಸರ್ಪೈಸ್ ನೀಡಲಾಗುತ್ತಿದೆ. ಶೂಟಿಂಗ್ ಸೇರಿದಂತೆ ಶ್ವಾನದ ಕುರಿತ ವಿವಿಧ ಕಾರ್ಯಕ್ರಮಗಳ ಮೂಲಕ ಸದಾ ಸುದ್ದಿಯಲ್ಲಿದ್ದ ‘777 ಚಾರ್ಲಿ’ ಚಿತ್ರ ತಂಡ ಇದೀಗ ಟೀಸರ್ ಬಿಡುಗಡೆ ಮಾಡುತ್ತಿರುವ ಕುರಿತು ಮಾಹಿತಿ ಹಂಚಿಕೊಂಡಿದೆ. ಕಿರಣ್ ರಾಜ್ ನಿರ್ದೇಶನದ ‘777 ಚಾರ್ಲಿ’ ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್‍ನಲ್ಲಿ ಚಿತ್ರತಂಡ ಫುಲ್ ಬ್ಯುಸಿಯಾಗಿದೆ. ಕೋವಿಡ್ ಪರಿಸ್ಥಿತಿ ಸುಧಾರಿಸಿದರೆ ಇದೇ ವರ್ಷ ‘777 ಚಾರ್ಲಿ’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

Ad Widget . Ad Widget .

ಅವನೇ ಶ್ರೀಮನ್ನಾರಾಯಣ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾದಲ್ಲಿ ಸಖತ್ ಬ್ಯುಸಿಯಾಗಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಚಿತ್ರ ತಂಡ ಶೂಟಿಂಗ್ ನಡೆಸಿದೆ. ನಾಯಿಯ ಸೆಂಟಿಮೆಂಟ್ ಇರುವುದರಿಂದ ಪ್ರೇಕ್ಷಕರಲ್ಲಿ ಸಹ ಕುತೂಹಲ ಮೂಡಿದ್ದು, ಯಾವ ರೀತಿ ಕಥೆ ಹೆಣೆಯಲಾಗಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ ಚಿತ್ರ ಬಿಡುಗಡೆ ನಂತರವೇ ಇದಕ್ಕೆ ಉತ್ತರ ಸಿಗಲಿದೆ.

Leave a Comment

Your email address will not be published. Required fields are marked *