ಮಂಗಳೂರು : ರಾತ್ರೋ ರಾತ್ರಿ ಮುಸ್ಲಿಂ ಯುವತಿ ನಾಪತ್ತೆ

ಮಂಗಳೂರು: ಬಜ್ಪೆ ಸಮೀಪದ ಕೆಂಜಾರಿನಲ್ಲಿ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆ ನಡೆದಿದೆ.

Ad Widget ... ..

ಹುಸೈನ್ ಶರೀಫ್ ಎಂಬವರ ಪುತ್ರಿ ಫಾತಿಮಾ ಸಾಹಿರಾ (21) ನಾಪತ್ತೆಯಾದ ಯುವತಿ. ಇವರು ಮೇ 26ರಂದು ತಡರಾತ್ರಿ ನಾಪತ್ತೆಯಾಗಿದ್ದಾರೆ.

Ad Widget

ಹುಸೈನ್ ಶರೀಫ್ ಪತ್ನಿ ಹಾಗೂ ಇಬ್ಬರು ಪುತ್ರಿಯರು ಫಾತಿಮಾ ಸಾಹಿರಾ ಮತ್ತು ಮಿಶ್ರಿಯಾ ಎಂಬವರು ಮೇ. 26ರಂದು ಎಂದಿನಂತೆ ಊಟ ಮಾಡಿ ಮಲಗಿದ್ದರು. ಆದರೆ ಸಾಹಿರಾ ರಾತ್ರೋ ರಾತ್ರಿ ಮನೆಯಲ್ಲಿದ್ದವರು ಮಲಗಿದ್ದಾಗ ನಾಪತ್ತೆಯಾಗಿದ್ದಾರೆ.

ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುತ್ರಿಯನ್ನು ಪತ್ತೆ ಹಚ್ಚಿಕೊಡಬೇಕೆಂದು ಹುಸೈನ್ ಠಾಣೆಯಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *