ಬೆಂಗಳೂರು : ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರೋ ಹಿನ್ನೆಲೆಯಲ್ಲಿ ಕೋವಿಡ್ ಪರಿಹಾರ ನಿಧಿಗೆ ಹಲವರು ಸಹಾಯ ಹಸ್ತ ಚಾಚುತ್ತಿದ್ದಾರೆ. ಈ ನಡುವೆ ಪುಟ್ಟ ಬಾಲಕನೊರ್ವ ತಾನು ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಸಿಎಂ ಕೋವಿಡ್ ಪರಿಹಾರ ನಿಧಿಗೆ ನೀಡಿದ್ದಾನೆ.
ಬೆಂಗಳೂರಿನ ಅಭಿನಂದನ್ ಹಾಗೂ ಸ್ವಪ್ನರವರ ಸುಪುತ್ರ ಮಾಯಾಂಕ್ ಜೈನ್ (೧೨) ನೆರವು ನೀಡಿದ ಬಾಲಕ. ಈತ ವರ್ಷಗಳಿಂದ ಹುಂಡಿಯಲ್ಲಿ ೪,೧೯೦ ರೂ. ಹಣವನ್ನು ಕೂಡಿಟ್ಟಿದ್ದ. ಶನಿವಾರ ಬೆಂಗಳೂರು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ಗೆ ಉಳಿತಾಯ ಮಾಡಿದ ಹಣವನ್ನು ಹಸ್ತಾಂತರಿಸಿದ್ದಾನೆ.
ಕೊರೊನಾದಿಂದಾದ ಸಾವು-ನೋವುಗಳನ್ನು ಮನಗಂಡು ಕೊರೊನಾ ಸೋಂಕಿತರ ಕಷ್ಟವನ್ನು ಅರ್ಥಮಾಡಿಕೊಂಡು ಉಳಿತಾಯದ ಹಣವನ್ನು ಸ್ವ ಇಚ್ಛೆಯಿಂದ ಸಿಎಂ ಪರಿಹಾರ ನಿಧಿಗೆ ನೀಡಿದ್ದಾನೆ. ಚಿಕ್ಕಬಾಣಾವರದ ಖಾಸಗಿ ಶಾಲೆಯಲ್ಲಿ ೭ನೇ ತರಗತಿ ಓದುತ್ತಿರೋ ಮಾಯಾಂಕ್, ಎಲ್ಲರೂ ಕೋವಿಡ್ ಪರಿಹಾರ ನಿಧಿ ಮುಖಾಂತರ ಸಹಾಯ ಮಾಡಬೇಕು. ಇತರರ ಕಷ್ಟಕ್ಕೆ ಸಹಾಯ ಮಾಡಬೇಕೆಂದು ಕೇಳಿಕೊಂಡಿರುವ ಆತನ ಹೃದಯ ವೈಶಾಲ್ಯತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.