Ad Widget .

ಕೊರೋನಾಗೆ ಜೀವತೆತ್ತರೆ 4 ಲಕ್ಷ :ವೈರಲ್ ಆಗುತ್ತಿದೆ ಫೇಕ್ ಪಿಡಿಎಫ್

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ, ಕೊರೋನಾದಿಂದ ಮೃತಪಟ್ಟರೆ 400000 ಪರಿಹಾರ ಧನ ಸಿಗಲಿದೆ ಮಾಹಿತಿಯುಳ್ಳ ಪಿಡಿಎಫ್ ಫೈಲ್ ನ ಅಂಶಗಳು ಸಂಪೂರ್ಣ ಶುದ್ಧ ಸುಳ್ಳು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Ad Widget . Ad Widget .

ಕಳೆದೆರಡುದಿನಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಪಿಡಿಎಫ್ ಫೈಲ್ ನಲ್ಲಿ ಕೊರೊನಾದಿಂದ ಮೃತಪಟ್ಟವರಿಗೆ ಕೇಂದ್ರ ಸರ್ಕಾರ ನಾಲ್ಕು ಲಕ್ಷ ಪರಿಹಾರ ಧನ ನೀಡಲಿದೆ ಇದಕ್ಕೆ ಸಂಬಂಧಿಸಿದ ಅರ್ಜಿ ನಮೂನೆಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಭ್ಯವಿದೆ ಎಂಬ ಇನ್ನಿತರ ಮಾಹಿತಿ ಇದ್ದು, ಇದನ್ನು ಎಲ್ಲರಿಗೂ ತಲುಪಿಸಿ ಎಂಬ ಸಂದೇಶವು ಜೊತೆಯಲ್ಲಿ ರವಾನೆಯಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಈ ಫೈಲ್ ನಲ್ಲಿರುವ ಮಾಹಿತಿ ಫೇಕ್ ಇದನ್ನು ಸಾರ್ವಜನಿಕರು ಯಾರು ನಂಬಬೇಡಿ ಮತ್ತು ಇತರರಿಗೆ ಹಂಚಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *