Ad Widget .

ಈ ವಾರ ನಿಮ್ಮ ಭವಿಷ್ಯ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

Ad Widget . Ad Widget .

ಮುಂದಿನ ಬದುಕಿನ ಬಗ್ಗೆ ಸ್ವಲ್ಪ ಚಿಂತೆ ಮಾಡುವಿರಿ. ಸರಿಯಾದ ನಿರ್ಣಯದಿಂದ ಮುಂದಿನ ಬದುಕಿಗೊಂದು ದಾರಿ ಕಂಡುಕೊಳ್ಳುವಿರಿ. ಕಾರ್ಯಕ್ಷೇತ್ರದಲ್ಲಿ ಸ್ನೇಹಿತರಿಂದ ಮತ್ತು ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ದೊರೆತು ನೆಮ್ಮದಿ ಕಾಣುವಿರಿ. ಹಿರಿಯರಿಂದ ಬಂದ ಸಲಹೆಗಳನ್ನು ನಿರಾಕರಿಸಬೇಡಿ. ದಿಢೀರ್‌ ಶ್ರೀಮಂತರಾಗಲು ಹೋಗಿ ಅಪಕೀರ್ತಿ ಸಂಭವಿಸಬಹುದು. ಪ್ರೀತಿಪಾತ್ರರು ನಿಮ್ಮ ನಿರ್ಧಾರದ ವಿರುದ್ಧ ತಗಾದೆ ತೆಗೆಯಬಹುದು. ಬುದ್ಧಿಮತ್ತೆಯಿಂದ ಕಾರ್ಯತಂತ್ರಗಳನ್ನು ರೂಪಿಸಿದಲ್ಲಿ ಕೆಲಸಗಳಲ್ಲಿ ಯಶಸ್ಸನ್ನು ಕಾಣಬಹುದು. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಮನೆಯಲ್ಲಿ ಇದ್ದಂತಹ ಭಿನ್ನಾಭಿಪ್ರಾಯಗಳು ದೂರವಾಗಿ ತಿಳಿಯಾದ ವಾತಾವರಣ ಮೂಡುತ್ತದೆ.

Ad Widget . Ad Widget .

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಸಂತೋಷಭರಿತ ಮಾತುಗಳಿಂದ ನಿಮ್ಮ ಸಹಪಾಠಿಗಳನ್ನು ರಂಜಿಸುವಿರಿ. ಕುಟುಂಬದ ಸದಸ್ಯರೊಡನೆ ಹಿಂದಿನ ಅಪರೂಪದ ಕ್ಷಣಗಳನ್ನು ನೆನೆಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಕಡೆಗೆ ಎಚ್ಚರ ವಹಿಸಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ನಿಮ್ಮ ನೆಚ್ಚಿನ ವ್ಯಕ್ತಿಗಳ ಆಸೆ ಪೂರೈಕೆಗಾಗಿ ಒತ್ತಡ ಹೆಚ್ಚಾಗಬಹುದು. ನಿಮ್ಮ ಪರಿಶ್ರಮದ ಫಲವನ್ನು ಕುಟುಂಬದ ನಿಮ್ಮ ಬಂಧುಗಳು ನಿಮ್ಮಿಂದ ಲಪಟಾಯಿಸಲು ಯತ್ನಿಸುವರು ಈ ಬಗ್ಗೆ ಎಚ್ಚರವಹಿಸಿರಿ. ಸಾಮಾಜಿಕವಾಗಿ ನಿಮ್ಮ ಶ್ರಮದ ಬೆಲೆ ಹಲವರಿಗೆ ತಿಳಿದು ನಿಮ್ಮನ್ನು ಗೌರವಿಸುವರು. ತಂದೆಯಿಂದ ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ, ವೇತನ ಏರಿಕೆ ಆಗಬಹುದು.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಕೆಲಸ ಕಾರ್ಯಗಳಲ್ಲಿ ಅತಿಯಾದ ಆತುರ ಬೇಡ. ನಿಮ್ಮ ಕೆಲವು ಪ್ರಮುಖ ಯೋಜನೆಗಳು ಕೈಗೂಡುವ ಸಂದರ್ಭವಿದೆ. ನಿಮ್ಮ ನಿರೀಕ್ಷೆಗೆ ತಕ್ಕಷ್ಟು ಆದಾಯ ಇರುತ್ತದೆ. ಕೆಲಸದ ಒತ್ತಡ ಹೆಚ್ಚಾಗಿ ಸ್ವಲ್ಪ ಬಳಲುವಿರಿ. ಹೊಸ ಸಂಪನ್ಮೂಲಗಳ ಹುಡುಕಾಟ ನಡೆಸುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಹೊಸ ಬಂಡವಾಳವನ್ನು ಹೂಡುವ ಮುಂಚೆ ಅದರ ಆಗುಹೋಗುಗಳನ್ನು ತಿಳಿದು ಮುಂದುವರೆಯಿರಿ. ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಿರಿ. ಸ್ಥಿರಾಸ್ತಿಯನ್ನು ಈಗ ಖರೀದಿ ಮಾಡಬಹುದು. ತಂದೆಯಿಂದ ಧನಸಹಾಯವನ್ನು ನಿರೀಕ್ಷಿಸಬಹುದು. ಪರಿಚಿತರ ಸಹಾಯದಿಂದ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ.

ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)

ವ್ಯವಹಾರದ ವಿಚಾರದಲ್ಲಿ ಮಾತನಾಡುವಾಗ ಯಾವುದೇ ಸಂಕೋಚ ಬೇಡ, ಸಂಕೋಚಪಟ್ಟಲ್ಲಿ ಹಿನ್ನಡೆಯಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಂಬಂಧವನ್ನು ಹೊಂದುವಿರಿ. ಸಂಶೋಧಕರಿಗೆ ಅತ್ಯಂತ ಕ್ರಿಯಾಶೀಲರಾಗಿರುವ ಕಾಲ, ಅವರ ಸಂಶೋಧನೆಗಳಿಗೆ ಒಂದು ತಾರ್ಕಿಕ ಫಲಿತಾಂಶ ಬರುವ ಸಾಧ್ಯತೆ ಇದೆ. ಇವರ ಎಲ್ಲಾ ಕೆಲಸಗಳಲ್ಲಿ ಸಹೋದ್ಯೋಗಿಗಳು ಪೂರ್ಣಪ್ರಮಾಣದ ಸಹಕಾರವನ್ನು ನೀಡುವರು. ಕಾಯುತ್ತಿದ್ದ ಹಿರಿಯರ ಆಸ್ತಿ ಒದಗುವ ಸಾಧ್ಯತೆ ಇದೆ. ಹಣದ ಒಳಹರಿವು ನಿರೀಕ್ಷೆಯ ಪ್ರಮಾಣದಲ್ಲಿ ಇರುತ್ತದೆ. ಆಮದು ಮತ್ತು ರಫ್ತಿನ ವ್ಯವಹಾರವನ್ನು ಮಾಡುವವರ ವ್ಯವಹಾರ ವಿಸ್ತರಣೆ ಆಗುವ ಯೋಗವಿದೆ.

ಸಿಂಹ ರಾಶಿ ( ಮಖ ಪರ‍್ವಪಲ್ಗುಣಿ ಉತ್ತರ ಫಲ್ಗುಣಿ 1)

ಗೃಹಬಳಕೆ ವಸ್ತುಗಳನ್ನು ಖರೀದಿ ಮಾಡುವಿರಿ. ಮನೆಗೆ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ಮಕ್ಕಳಿಂದ ನಿಮಗೆ ಗೌರವ ದೊರೆಯುತ್ತದೆ. ವ್ಯವಹಾರದ ಒಳಗುಟ್ಟುಗಳನ್ನು ಯಾರಿಗೂ ತಿಳಿಸದೇ ಇರುವುದು ಬಹಳ ಉತ್ತಮ, ತಿಳಿಸಿದಲ್ಲಿ ನಿಮ್ಮ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರಬಹುದು. ನಿಮ್ಮ ಮಾತುಗಳಿಂದಲೇ ನಿಮಗೆ ವೃಥಾ ಆರೋಪ ಬರಬಹುದು, ಆದ್ದರಿಂದ ಮಾತಿನ ಮೇಲೆ ಹಿಡಿತ ಇರಲಿ. ಕುಟುಂಬ ಸಮೇತ ದೈವ ಕ್ಷೇತ್ರಗಳಿಗೆ ಭೇಟಿ ಕೊಡುವ ಸಾಧ್ಯತೆ ಇದೆ. ಹೊಸ ಹೂಡಿಕೆಗಳನ್ನು ಸದ್ಯಕ್ಕೆ ಮುಂದೂಡುವುದು ಒಳ್ಳೆಯದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.

ಕನ್ಯಾ ರಾಶಿ ( ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಆರಂಭದಲ್ಲಿ ನಿಮ್ಮ ಕಾರ್ಯ ಚಟುವಟಿಕೆಗಳು ಇತರರ ಹಾಸ್ಯಕ್ಕೆ ಒಂದು ವಸ್ತುವಾಗಬಹುದು. ಬಹುದಿನದ ಆಸೆ ಈಡೇರುವ ಸಾಧ್ಯತೆಯಿದೆ. ಆಸ್ತಿ ಖರೀದಿಗಾಗಿ ಬಹಳ ಶ್ರಮ ಮಾಡಬೇಕಾಗಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿರಿ. ಬುದ್ಧಿವಂತಿಕೆಯಿಂದ ಆಲೋಚಿಸಿ ನಿಮ್ಮ ಕಾರ್ಯಗಳನ್ನು ಕಾರ್ಯಗತ ಮಾಡಿದಲ್ಲಿ ಯಶಸ್ಸನ್ನು ಖಂಡಿತ ಕಾಣುವಿರಿ. ಕಾರ್ಯಾನುಭವ ಮತ್ತು ಕ್ಷಮತೆಯಿಂದ ನಿಮಗೆ ಹೊಸ ಅವಕಾಶಗಳು ಒದಗಿ ಬರುತ್ತವೆ, ಅವುಗಳನ್ನು ಬಳಸಿಕೊಳ್ಳಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣ ತೊಡಗಿಸಬೇಕಾಗುತ್ತದೆ. ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆಗಳು ಕಾಣಿಸಬಹುದು. ನುರಿತ ತಂತ್ರಜ್ಞರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ.

ತುಲಾ ರಾಶಿ ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ ದೊರೆತು ಆತ್ಮವಿಶ್ವಾಸ ಹೆಚ್ಚುತ್ತದೆ. ಸಂಗಾತಿಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಇದ್ದ ಮನಸ್ತಾಪವನ್ನು ದೂರ ಮಾಡಿಕೊಳ್ಳಿರಿ. ಆಸ್ತಿ ಖರೀದಿಯ ವಿಷಯಕ್ಕೆ ರೆಕ್ಕೆಪುಕ್ಕಗಳು ಮೂಡಿ ಅದಕ್ಕೆ ಬೇಕಾದ ತಯಾರಿಯಲ್ಲಿ ತೊಡಗಿಕೊಳ್ಳುವಿರಿ. ವ್ಯವಹಾರದಲ್ಲಿ ಎದುರಾಳಿಗಳ ಮಾತಿನಿಂದ ನಿಮಗೆ ಭಯ ಹುಟ್ಟಬಹುದು. ಆದರೆ ತಾತ್ವಿಕವಾಗಿ ಮಂಡಿಸಿದಲ್ಲಿ ಜಯ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ, ಖರ್ಚಿಗೆ ಕಡಿವಾಣ ಹಾಕುವುದು ಒಳ್ಳೆಯದು. ಮಕ್ಕಳಿಂದ ನಿಮಗೆ ಧನಸಹಾಯ ಒದಗಿಬರುವ ಸಾಧ್ಯತೆಗಳಿವೆ. ಸಂಗಾತಿಯ ಮನೆಯ ಕಡೆಯಿಂದ ಸೂಕ್ತ ಸಹಾಯ ಒದಗಿಬರುವ ಲಕ್ಷಣಗಳಿವೆ, ಇದನ್ನು ಸರಿಯಾಗಿ ಬಳಸಿಕೊಳ್ಳಿರಿ.

ವೃಶ್ಚಿಕ ರಾಶಿ ( ವಿಶಾಖಾ 4 ಅನುರಾಧ ಜೇಷ್ಠ)

ಕೆಲವು ರಾಜಕಾರಣಿಗಳಿಗೆ ಅಭಿವೃದ್ಧಿ ಇರುತ್ತದೆ ಮತ್ತೆ ಕೆಲವರಿಗೆ ಮೂಲೆಗುಂಪಾಗುವ ಸಾಧ್ಯತೆಗಳಿವೆ. ಮಾಧ್ಯಮ ಮತ್ತು ಪ್ರಚಾರದಲ್ಲಿ ಇರುವವರಿಗೆ ಉತ್ತಮ ಹೆಸರು ಬಂದು ಅಭಿವೃದ್ಧಿ ಇರುತ್ತದೆ. ವಿನಾಕಾರಣ ಬೇರೆಯವರ ತಪ್ಪಿಗೆ ಗುರಿಯಾಗುವ ಸಾಧ್ಯತೆಗಳಿವೆ. ಬೇರೆಯವರ ಟೀಕೆಗೆ ತಲೆಕೆಡಿಸಿಕೊಳ್ಳದೆ ಮುನ್ನುಗ್ಗಿ ನಿಮ್ಮತನವನ್ನು ಸಮರ್ಥನೆ ಮಾಡಿಕೊಳ್ಳಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಧೃಡ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ಎಲ್ಲರ ಸಹಕಾರ ನಿಮಗೆ ದೊರೆಯುತ್ತದೆ. ವೃತ್ತಿಯಲ್ಲಿ ಸಣ್ಣಪುಟ್ಟ ತೊಡಕುಗಳಿದ್ದರೂ ಅದನ್ನು ಅಧಿಕಾರಿಗಳ ಜೊತೆ ಪರಿಹರಿಸಿಕೊಳ್ಳಬಹುದು. ಧನದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಕೃಷಿ ಉತ್ಪನ್ನಗಳಿಗೆ ಬೆಲೆ ಹೆಚ್ಚಾಗಿ ದೊರೆಯುತ್ತದೆ. ಕೃಷಿಕರ ಆದಾಯ ಹೆಚ್ಚುತ್ತದೆ.

ಧನಸ್ಸು ರಾಶಿ( ಮೂಲ ಪರ‍್ವಾಷಾಢ ಉತ್ತರಾಷಾಢ 1 )

ಎಂಜಿನಿಯರಿಂಗ್ ತಂತ್ರಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ಒಳಾಂಗಣ ವಿನ್ಯಾಸಕಾರರಿಗೆ ಉತ್ತಮ ಸಂಪಾದನೆ ಇರುತ್ತದೆ. ಹೆಚ್ಚು ಮಾತನಾಡುವುದರಿಂದ ಬಂಧುಗಳ ಮಧ್ಯೆ ವೈಮನಸ್ಯ ಹೆಚ್ಚಬಹುದು. ನಿಮ್ಮ ವೃತ್ತಿರಂಗದಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಿ ಗೆಲ್ಲುವ ಅವಕಾಶವಿದೆ. ನಿಮ್ಮವರನ್ನು ಸಮರ್ಥನೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಪ್ಪಿತಸ್ಥರನ್ನು ಸಮರ್ಥನೆ ಮಾಡಿಕೊಳ್ಳಬೇಡಿರಿ. ನಿಮ್ಮ ನಡವಳಿಕೆಗೆ ವೃತ್ತಿಯಲ್ಲಿ ಗೌರವ ದೊರೆಯುತ್ತದೆ. ಹಿರಿಯರು ಒಡಕು ಬಾಯಿಂದ ಆಡಿದ ಮಾತುಗಳಿಗೆ ಪರಿತಪಿಸಬೇಕಾಗಬಹುದು. ಆಸ್ತಿಮಾರಾಟದಿಂದ ನಿರೀಕ್ಷಿತ ಧನ ಪಡೆಯಬಹುದು. ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಆರೋಗ್ಯದಲ್ಲಿ ಏನು ವ್ಯತ್ಯಾಸವಿರುವುದಿಲ್ಲ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದ್ದು ಪ್ರಶಸ್ತಿ-ಪುರಸ್ಕಾರಗಳು ದೊರೆಯುವ ಲಕ್ಷಣಗಳಿವೆ. ನಿಮ್ಮ ನೂತನ ಯೋಜನೆಗಳನ್ನು ಪಾಲುದಾರರೊಡನೆ ಸರಿಯಾಗಿ ಹಂಚಿಕೊಳ್ಳಿರಿ, ಆಗ ಅದಕ್ಕೆ ಬೇಕಾದ ಧನ ಸಹಾಯ ಮತ್ತು ಸಹಕಾರ ದೊರೆಯುತ್ತದೆ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣಬಹುದು, ಅವರ ಸಮೀಪದಲ್ಲಿದ್ದು ಆರೈಕೆಯನ್ನು ಮಾಡುವುದು ಉತ್ತಮ. ವಿದ್ಯಾರ್ಥಿಗಳು ಅವರ ಅಭ್ಯಾಸದಲ್ಲಿ ಮೇಲುಗೈ ಸಾಧಿಸುವರು. ಔತಣಕೂಟ ಮೋಜು-ಮಸ್ತಿಗಳಿಂದ ದೂರವಿರುವುದು ನಿಮಗೆ ಒಳ್ಳೆಯದು. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಚರ್ಮವ್ಯಾಧಿ ನಿಮ್ಮನ್ನು ಕಾಡಬಹುದು.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪರ‍್ವಭಾದ್ರ 1 2 3)

ಹಿಂದಿನ ಕೆಲ ಘಟನೆಗಳು ನಿಮ್ಮ ಮನಸ್ಸನ್ನು ಕಲಕಬಹುದು. ಸಂಗಾತಿಯ ಸಕಾಲಿಕ ಸಲಹೆಗಳಿಂದ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಸಹೋದ್ಯೋಗಿಗಳಿಗೆ ಉತ್ಸಾಹವನ್ನು ತುಂಬಿ ಕೆಲಸ ಮಾಡಲು ಹುರಿದುಂಬಿಸುವಿರಿ. ನಿಮ್ಮ ಪ್ರತಿಭೆಯನ್ನು ನಿಮ್ಮ ಹಿಂಜರಿಕೆ ಮರೆಮಾಚಬಹುದು ಆದ್ದರಿಂದ ಹಿಂಜರಿಕೆಯನ್ನು ಬಿಡಿರಿ. ಬರಬೇಕಾಗಿದ್ದ ಹಣ ಸಕಾಲದಲ್ಲಿ ಬಂದು ನಿಮಗೆ ಅನುಕೂಲವಾಗುತ್ತದೆ. ಮಹಿಳೆಯರ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಸರ್ಕಾರಿ ಕೆಲಸಗಳಲ್ಲಿ ನಿಧಾನಗತಿ ಇರುತ್ತದೆ. ವಯಸ್ಕರ ಒಣ ಜಂಬದ ಮಾತುಗಳು ಅವರಿಗೆ ತಿರುಗುಬಾಣವಾಗಬಹುದು. ಅದರಲ್ಲೂ ಅಧಿಕಾರಿ ವರ್ಗದವರ ಬಗ್ಗೆ ಚೇಷ್ಟೆಯ ಮಾತುಗಳು ಬೇಡ.

ಮೀನ ರಾಶಿ( ಪರ‍್ವಭಾದ್ರ 4 ಉತ್ತರಾಭಾದ್ರ ರೇವತಿ)

ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವವರಿಗೆ ಈಗ ಪ್ರಶಸ್ತ ಕಾಲ. ಅನಿರೀಕ್ಷಿತ ಅವಕಾಶಗಳು ಒದಗಿಬರುವ ಸಾಧ್ಯತೆಗಳಿವೆ. ಹಿರಿಯ ಸ್ಥಾನದಲ್ಲಿರುವವರಿಗೆ ಉದ್ಯೋಗಿಗಳಿಂದ ಗೌರವ ಸಮರ್ಪಣೆ ಇರುತ್ತದೆ. ಹಿರಿಯ ಅಧಿಕಾರಿಗಳ ಮೇಲಿದ್ದ ಆಪಾದನೆಗಳು ಮಂಜಿನಂತೆ ಕರಗುತ್ತವೆ. ಜನಮನ್ನಣೆಗಳಿಸಲು ನೀವು ಮಾಡುವ ಕಸರತ್ತುಗಳು ಸ್ವಲ್ಪವಷ್ಟೇ ಫಲಿತಾಂಶ ಕೊಡುತ್ತವೆ. ಹಣದ ಒಳಹರಿವು ಸರಾಗವಾಗಿರುತ್ತದೆ. ಒಡಹುಟ್ಟಿದವರ ನಡುವೆ ಕಾವೇರಿದ ಮಾತುಗಳು ನಡೆಯಬಹುದು. ಕೃಷಿಕರ ಉತ್ಪನ್ನಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಜಲ ತಂತ್ರಜ್ಞರಿಗೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದೆ. ನಯವಾಗಿ ಮಾತನಾಡಿ ಜನಗಳನ್ನು ನಂಬಿಸುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಿ.

Leave a Comment

Your email address will not be published. Required fields are marked *