Ad Widget .

ತವರು ಜಿಲ್ಲೆಗೆ ತೆಲಂಗಾಣ ಎನ್ಕೌಂಟರ್ ಖ್ಯಾತಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ನೆರವು

ಗದಗ: ತನ್ನ ತವರು ಜಿಲ್ಲೆ ಗದಗಕ್ಕೆ ತೆಲಂಗಾಣದಲ್ಲಿ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದ ಕರ್ನಾಟಕ ಮೂಲದ ಹಿರಿಯ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನರ ಅವರು ನೆರವು ನೀಡಿದ್ದಾರೆ.

Ad Widget . Ad Widget .

ಕೋವಿಡ್‌ ಸಂಕಷ್ಟದ ಸಮಯದಲ್ಲಿ ಗದಗ ಜಿಲ್ಲೆಗೆ ಸುಮಾರು 40 ಲಕ್ಷ ರೂ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುವ ಮೂಲಕ ಸಹಾಯಹಸ್ತ ಚಾಚಿದ್ದಾರೆ. ಅವರು 22 ಆಕ್ಸಿಜನ್‌ ಕಾನ್ಸಂಟ್ರೇಟರ್‌, 84 ಆಕ್ಸಿಜನ್‌ ಸಿಲಿಂಡರ್‌, 2000 ಕೋವಿಡ್‌ ಕಿಟ್‌ ಸೇರಿದಂತೆ ಮಾಸ್ಕ್, ಸ್ಯಾನಿಟೈಸರ್‌, ಫೇಸ್‌ಶೀಲ್ಡ್‌, ರೆಮಿಡಿಸಿವಿಯರ್‌ ಇತ್ಯಾದಿ ಔಷಧ ಸಾಮಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Ad Widget . Ad Widget .

ಔಷದ ಸಾಮಗ್ರಿಗಳನ್ನು ವಿಶ್ವನಾಥ್ ಸಹೋದರ ಹುಬ್ಬಳ್ಳಿಯವೈದ್ಯ ಡಾ|ಎಂ.ಸಿ.ಸಜ್ಜನರ ಅವರು ಶುಕ್ರವಾರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ.

Leave a Comment

Your email address will not be published. Required fields are marked *