Ad Widget .

ಅಗೆದಷ್ಟು ಆಳ ಬೆಂಗಳೂರು ಗ್ಯಾಂಗ್ ರೇಪ್ ಪ್ರಕರಣ | ಸಂತ್ರಸ್ತೆ ಭಾರತದಲ್ಲಿ ಅಂತರ್ರಾಜ್ಯ ವೇಶ್ಯಾವಾಟಿಕೆ ಕಿಂಗ್ ಪಿನ್…!? | ಬಾಂಗ್ಲಾ ಪ್ರಜೆಗಳಿಗೆ ಬೆಂಗ್ಳೂರಲ್ಲಿ ಆಧಾರ್….?

ಬೆಂಗಳೂರು: ರಾಮಮೂರ್ತಿ ನಗರ ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ವೈರಲ್ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದ ಆರೋಪಿಗಳ ಬಳಿ ಆಧಾರ ಕಾರ್ಡ್ ಪತ್ತೆಯಾಗಿದೆ. ಆದರೆ ಈ ಬಾಂಗ್ಲಾ ಪ್ರಜೆಗಳಿಗೆ ಆಧಾರ ಕಾರ್ಡ್ ಸಿಕ್ಕಿದ್ದು ಹೇಗೆ..? ಎಂಬುದನ್ನು ಬೆಂಗಳೂರು ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅದರ ಬೆನ್ನು ಬಿದ್ದಿದ್ದಾರೆ. ಅಕ್ರಮವಾಗಿ ಆಧಾರ ಕಾರ್ಡ್ ಮಾಡಿಕೊಟ್ಟವರಿಗಾಗಿ ವಿಶೇಷ ತಂಡ ರಚಿಸಿ ಶೋಧ ಆರಂಭಿಸಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಅಕ್ರಮ ಜಾಲ ಕೆಲಸ ಮಾಡಿದ್ದರ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅಕ್ರಮವಾಗಿ ಬಾಂಗ್ಲಾದಿಂದ ಬಂದು ನೆಲೆಸಿದ್ದ ಆರೋಪಿಗಳಿಗೆ ಆಧಾರ್ ಕಾರ್ಡ್ ಸಿಕ್ಕಿದ್ದು ಹೇಗೆ ಎಂಬುದೇ ಈಗ ಕುತೂಹಲದ ಕೇಂದ್ರಬಿಂದು.

Ad Widget . Ad Widget .

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಮೇ.22ರಂದು ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ವಿಡಿಯೋ ಚಿತ್ರಿಕರಣದ ವೇಳೆ ಸಂತ್ರಸ್ತೆ ಯುವತಿ ತನಗಾದ ನೋವನ್ನು ತಡೆಯಲಾಗದೆ ಜೋರಾಗಿ ಕಿರುಚಾಡಿದ್ದಾಳೆ ಕಿರುಚಾಟ ಅಕ್ಕಪಕ್ಕದ ರೂಂನವರಿಗೆ ತಿಳಿಯದಂತೆ ಯುವಕರು ದೊಡ್ಡದಾಗಿ ಮ್ಯೂಸಿಕ್ ಹಾಕಿಕೊಂಡು ಕುಕೃತ್ಯ ನಡೆಸಿದ್ದಾರೆ. ಬಂಧಿತ ರಿಧಾಯ್ ಬಾಬು ಮತ್ತು ಮಿಸ್ಸಿಂಗ್ ರುಪ್ಸಾನ್ ಕೃತ್ಯ ನಡೆಸಲು ಉಳಿದವರಿಗೆ ಪ್ರೇರಣೆ ನೀಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಇಬ್ಬರೂ ನಗರದಲ್ಲಿ ಪಿಂಪ್ ಆಗಿ ಕೆಲಸ ಮಾಡುತ್ತಿದ್ದರು. ಬಾಂಗ್ಲಾದಿಂದ ಯುವತಿಯರನ್ನು ಅಕ್ರಮವಾಗಿ ಕರೆತಂದು ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದರು ಎಂದು ಪೊಲೀಸ್ ವಿಚಾರಣೆ ವೇಳೆ ಬಹಿರಂಗವಾಗಿದೆ.

Ad Widget . Ad Widget .

ಈ ಪ್ರಕರಣದ ಬೆನ್ನುಬಿದ್ದಿದ್ದ ಬಾಂಗ್ಲಾದೇಶದ ಡಾಕಾ ಪೊಲೀಸರು ಲಭ್ಯವಾದ ಸ್ಥಳೀಯ ಎಲ್ಲಾ ಮಾಹಿತಿಗಳನ್ನು ಕಳಿಸಿ ಅಸ್ಸಾಂ ಪೊಲೀಸರ ಸಹಾಯ ಕೇಳಿದ್ದರು. ಈ ಮಾಹಿತಿ ಪಡೆದ ಅಸ್ಸಾಂ ಪೊಲೀಸರು ಮೇ 27 ರಂದು ಟ್ವೀಟ್ ಮೂಲಕ ಆರೋಪಿಗಳ ಬಗ್ಗೆ ತಿಳಿದಿದ್ದರೆ ಮಾಹಿತಿ ಕೋರಿ ಮನವಿ ಮಾಡಿದ್ದರು.

ಓರ್ವ ಟಿಕ್ಟಾಕ್ ಸ್ಟಾರ್

ಇದೇ ವೇಳೆ ಐಪಿ ಆಡ್ರಸ್ ಮತ್ತು ಕೊಟ್ಟಿದ್ದ ಮೊಬೈಲ್ ನಂಬರ್ ಬಗ್ಗೆ ಪರಿಶೀಲನೆ ನಡೆಸಿದಾಗ ಆ ನಂಬರ್ ಸ್ವೀಚ್ ಆಫ್ ಆಗಿರುವುದು ಪತ್ತೆಯಾಗಿತ್ತು. ರಿಧಾಯ್ ಎಂಬಾತ ಯೂಟ್ಯೂಬರ್ ಮತ್ತು ಟಿಕ್ಟಾಕ್ ಸ್ಟಾರ್ ಆಗಿದ್ದು, ಆತನ ಪೋಟೊಗಳು ಮತ್ತು ನಂಬರ್‌ನ್ನು ಸಂಗ್ರಹಿಸಲಾಗಿತ್ತು. ಜತೆಗೆ ಬಾಂಗ್ಲಾದೇಶದಲ್ಲಿ ಕೃತ್ಯ ನಡೆದಿಲ್ಲ ಎಂಬುದು ಡಾಕಾ ಪೊಲೀಸರಿಗೆ ಖಚಿತವಾಗಿತ್ತು.

ಪೊಲೀಸರಿಗೆ ಕ್ಲೂ ನೀಡಿದ್ದು ಆರೋಪಿ ರಿದಾತ್ ಪೋನ್

ಐಎಂಇಐ ನಂಬರ್‌ನ್ನು ಪರಿಶೀಲಿಸಿದಾಗ ಭಾರತದ ಮೊಬೈಲ್ ನಂಬರ್ ಕಾಲ್ ಡಿಟೇಲ್ಸ್ ಪತ್ತೆಯಾಗಿತ್ತು. ಈ ಮಾಹಿತಿ ಆದರಿಸಿ ತನಿಖೆ ನಡೆಸಿದಾಗ ಆರೋಪಿಗಳು ಬೆಂಗಳೂರಲ್ಲಿ ಇರೋದು ಖಚಿತವಾಗಿತ್ತು. ಆಗ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕಮಲ್ ಪಂತ್‌ರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು. ಆ ಬಳಿಕ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್‌ಗೆ ಮಾಹಿತಿ ರವಾನಿಸಲಾಗಿತ್ತು. ಕೂಡಲೇ ಸಿಸಿಬಿ ಎಸಿಪಿ ಗೌತಮ್ ವಿಶೇಷ ತಂಡ ಆರೋಪಿಗಳ ಪತ್ತೆಗಿಳಿದಿತ್ತು.

ವೈರಲ್ ಆದ ವಿಡಿಯೋದಿಂದ ಯುವಕರ ಪತ್ತೆ

ಇನ್ಸಪೆಕ್ಟರ್ ಲಕ್ಷ್ಮಿಕಾಂತಯ್ಯ, ಪಿಸಿಗಳಾದ ಶಶಿ ಹಾಗೂ ರವಿಶಂಕರ್ ಸಿಸಿಬಿ ಪೊಲೀಸರಿಗೆ ಪೂರ್ವ ವಿಭಾಗದ ಪೊಲೀಸರ ಸಹ ಸಾಥ್ ಕೊಟ್ಟಿದ್ದರು. ಮೊದಲು ಆರೋಪಿಗಳ ನಂಬರ್ ಟವರ್ ಡಂಪ್ ಪಡೆದಾಗ ಮಾರ್ಗೊಂಡನಹಳ್ಳಿಯ ಗ್ರೀನ್ ವೀವ್ ಲೇಔಟ್ ಲಿಂಕ್ ಆಗಿತ್ತು. ಅಲ್ಲಿಗೆ ತೆರಳಿದ ಪೊಲೀಸರಿಗೆ ಅನೇಕ ಮಂದಿ ಬಾಂಗ್ಲಾದೇಶದವರು ಇದ್ದಿದ್ದರು. ಈ ವೇಳೆ ಸ್ಥಳೀಯ ವರದಿಗಾರರ ಸಹಾಯ ಪಡೆದು ವೈರಲ್ ಆಗಿದ್ದ ವಿಡಿಯೋದ ಆರೋಪಿಗಳನ್ನು ಪತ್ತೆಹಚ್ಚಲಾಯಿತು.

ಪೊಲೀಸರ ನಿರ್ಲಕ್ಷ್ಯತೆ

ಇನ್ನು ಈ ಪ್ರಕರಣ ಮೊದಲೇ ಪೊಲೀಸರಿಗೆ ಗೊತ್ತಿದ್ದರೂ ರಾಮಮೂರ್ತಿನಗರ ಪೊಲೀಸರು ಹಾಗೂ ಕೆ.ಆರ್. ಪುರಂ ಪೊಲೀಸರು ಕರ್ತವ್ಯ ಲೋಪ ಎಸಗಿರುವ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ವರದಿ ತರಿಸಿಕೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಇದ್ದರೂ ಯಾವುದೇ ಕ್ರಮ ಜರುಗಿಸದೇ ಇರುವ ಪೊಲೀಸರ ಕರ್ತವ್ಯ ಲೋಪ ಕುರಿತು ವರದಿ ಕೇಳಿದ್ದು, ವಿಚಾರಣೆ ಪ್ರಗತಿಯಲ್ಲಿದೆ.

ಸಂತ್ರಸ್ತೆ ಅಂತರ್ ರಾಜ್ಯ ವೇಶ್ಯಾವಾಟಿಕೆ ಜಾಲದ ಕಿಂಗ್ಪಿನ್

ಪ್ರಕರಣದ ಸಂತ್ರಸ್ತೆ ಬಾಂಗ್ಲಾ ಮೂಲದ ಯುವತಿ ಕೆಲವರ್ಷಗಳ ಹಿಂದೆ ಅರಬಿಯನ್ ದೇಶಗಳಲ್ಲಿ ಬಾರ್ ಡ್ಯಾನ್ಸರ್ ಆಗಿ ಕೆಲಸ ಮಾಡಿಕೊಂಡಿದ್ದಳು. ಅಲ್ಲಿಂದ ತವರಿಗೆ ಹಿಂದಿರುಗಿದ ಆಕೆ ಭಾರತಕ್ಕೆ ಅಕ್ರಮವಾಗಿ ನುಸುಳಿ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ವ್ಯವಸ್ಥಿತ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದಾಳೆ ಎನ್ನಲಾಗಿದೆ. ಆಕೆಯನ್ನೇ ಅತ್ಯಾಚಾರ ಮಾಡಿರುವ ಆರೋಪಿಗಳೂ ಆಕೆ ಸಹಚರರಾಗಿದ್ದು, ಹಣದ ಲೆಕ್ಕಚಾರದಲ್ಲಿ ಇದ್ದ ಅಭಿಪ್ರಾಯದೊಂದಿಗೆ ಮಾದಕ ವಸ್ತುಗಳ ಅಮಲು ಸೇರಿ ಕುಕೃತ್ಯ ಹಾಗೂ ಹಲವಾರು ವ್ಯವಸ್ಥಿತ ಜಾಲಗಳ ಬಹಿರಂಗಕ್ಕೆ ಎಡೆಮಾಡಿಕೊಟ್ಟಿದೆ. ಪ್ರಕರಣದ ನಿನ್ನ ಹಿಡಿದಿರೋ ಪೊಲೀಸರಿಗೆ ಹಲವಾರು ಆಘಾತಕಾರಿ ಮಾಹಿತಿಗಳು ದೊರೆಯುತ್ತಿದ್ದು ಬಾಂಗ್ಲಾದ ಈ ಖತರ್ನಾಕ್ ಯುವಕರೊಂದಿಗೆ ಸ್ಥಳೀಯರ ಸಹಕಾರ ವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *