ಮಂಗಳೂರು: ನಿರ್ಮಾಣವಾಗಲು ಬರೋಬ್ಬರಿ ಹತ್ತು ವರ್ಷ ತೆಗೆದುಕೊಂಡು ಸ್ಥಳೀಯರ ಆಕ್ರೋಶಕ್ಕೆ ಮಣಿದು ಕೊನೆಗೂ ಉದ್ಘಾಟನೆಗೊಂಡ ಪಂಪಲ್ ಫ್ಲೈಓವರ್ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ರಾತ್ರಿ ಇಡೀ ಸುರಿದ ಭಾರೀ ಮಳೆಗೆ ಇಂದು ಬೆಳಿಗ್ಗೆ ಫ್ಲೈಓವರ್ ಕೆಳಗಿನ ಭಾಗ ಸಂಪೂರ್ಣ ಜಲಾವೃತವಾಗಿತ್ತು. ಸರ್ವಿಸ್ ರೋಡ್ ಮತ್ತು ಜಂಕ್ಷನ್ನಲ್ಲಿ ಕೆಲ ಗಂಟೆಗಳ ಕಾಲ ವಾಹನಗಳು ಅತ್ತಿತ್ತ ಚಲಿಸದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಸ್ಥಳೀಯರ ಮತ್ತು ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗಿದೆ. ಸ್ಥಳದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡದ ಕಾರಣ ಈ ದುಸ್ಥಿತಿ ಎದುರಾಗಿದೆ ಎಂದು ಜನತೆ ಸ್ಥಳೀಯಾಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ.
ಇನ್ನೊಂದೆಡೆ ನೆಟ್ಟಿಗರು ಜಲಾವೃತದ ವಿಡಿಯೋ ತೆಗೆದು ಟ್ರೋಲ್ ಮಾಡಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಹಿಗ್ಗಾಮುಗ್ಗ ನಗೆಪಾಟಲಿಗೆ ತಳ್ಳಿದ್ದಾರೆ. ಹಲವಾರು ವಿಡಿಯೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿದ್ದು ಸಖತ್ ವೈರಲ್ ಆಗುತ್ತಿದೆ.
ಪಂಪ್ವೆಲ್ ಜಲಾವೃತವಾದ ವಿಡಿಯೋ ಇಲ್ಲಿದೆ: