Ad Widget .

ಆಕೆಯ ಸಹವಾಸವೇ ಆತನಿಗೆ ಮುಳುವಾಯ್ತು: ಪಾಶವಾದ ಪರಸ್ತ್ರೀ ಪ್ರೇಮ!

ಮುಂಬೈ: ಕೆಲವೊಮ್ಮೆ ನಮ್ಮ ಆಸೆಗಳೇ ನಮಗೆ ತಿರುಗುಬಾಣವಾಗುತ್ತವೆ ಎನ್ನುವುದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ಇಲ್ಲೊಬ್ಬನ ಅಕ್ರಮ ಸಂಬಂಧವೇ ಆತನ ಸಾವಿಗೆ ಕಾರಣವಾದ ಘಟನೆ ನಡೆದಿದೆ. ಪ್ರೇಮಪಾಶಕ್ಕೆ ತಾನೇ ಬಲಿಯಾದ ಘಟನೆ ನಡೆದಿರುವುದು ಇಲ್ಲಿನ ಖುಮ್ ಗಾಂವ್ ಎಂಬಲ್ಲಿ.

Ad Widget . Ad Widget .

ಮಹಾರಾಷ್ಟ್ರದ ಖಮ್‌ಗಾಂವ್ ತಾಲೂಕಿನ ಪಹುರ್ಜಿರಾ ನಿವಾಸಿ ಪ್ರಭುದಾಸ್ ಬೋಲೆಗೆ ಮದುವೆಯಾಗಿತ್ತು. ಆದರೆ ಹೆಂಡತಿಯೊಂದಿಗಿನ ಸಂಬಂಧ ಸಾಕಾಗದ ಆತ ವಿಧವೆ ಶಿಕ್ಷಕರಿಯೊಬ್ಬರ ಅಕ್ರಮ ಸಂಬಂಧದ ಬಲೆಗೆ ಬಿದ್ದಿದ್ದಾನೆ. ಮೊದ ಮೊದಲು ಸ್ನೇಹದ ರೂಪದಲ್ಲಿ ಆರಂಭವಾದ ಅವರ ಸಂಬಂಧ ಕೊನೆಗೆ ಸಾಕಷ್ಟು ಆಳವಾಗಿ ಬೇರೂರಿದೆ.
ಈ ನಡುವೆ ಕೆಲಸ ಕಳೆದುಕೊಂಡ ಶಿಕ್ಷಕಿ ಉಪಾಯ ಮಾಡಿ ಪ್ರಭುದಾಸ್​ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ನಾನು ಮನೆ ತೆಗೆದುಕೊಳ್ಳಬೇಕು, ನನಗೆ ಹಣ ಕೊಡು ಎಂದು ಕೇಳಿದ್ದಾಳೆ. ಆದರೆ ತನ್ನ ಬಳಿ ಹಣವಿಲ್ಲವೆಂದು ಆತ ಹೇಳಿದಾಗ, ಅವರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದಾಳೆ.
ಶಿಕ್ಷಕಿಯ ಬೆದರಿಕೆಗೆ ಹೆದರಿದ ಪ್ರಭುದಾಸ್ ಆಕೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇಶ ಕಳುಹಿಸಿ ಮೇ 16ರಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಹೆಂಡತಿ ಗಂಡನ ಸಾವಿಗೆ ಶಿಕ್ಷಕಿಯೇ ಕಾರಣವೆಂದು ಪೊಲೀಸರಲ್ಲಿ ದೂರು ನೀಡಿದ್ದಾಳೆ. ಶಿಕ್ಷಕಿಗೆ ಅನೇಕರು ಸಾಥ್​ ಕೊಟ್ಟಿದ್ದಾಗಿಯೂ ಹೇಳಲಾಗಿದೆ. ಇದೀಗ ಪೊಲೀಸರು ಆರೋಪಿತ ಶಿಕ್ಷಕಿಯನ್ನು ವಶಕ್ಕೆ ಪಡೆದಿದ್ದಾರೆ.
ಇದಕ್ಕೆ ಅನ್ನೋದು ಮಾಡಿದ್ದುಣ್ಣೊ ಮಹರಾಯ ಅಂತ.

Ad Widget . Ad Widget .

Leave a Comment

Your email address will not be published. Required fields are marked *