Ad Widget .

ಮುಸ್ಲಿಮೇತರ ಧರ್ಮದ ನಿರಾಶ್ರಿತರಿಂದ ಪೌರತ್ವ ಅರ್ಜಿ ಆಹ್ವಾನ | ಸದ್ದಿಲ್ಲದೆ ಜಾರಿಯಾಗುತ್ತಾ ಸಿಎಎ…?

ನವದೆಹಲಿ: ಭಾರತದ ಪೌರತ್ವ ನೀಡುವುದಕ್ಕಾಗಿ ಮುಸ್ಲಿಂ ಧರ್ಮೀಯರನ್ನು ಹೊರತುಪಡಿಸಿ ಹಿಂದೂಗಳು ಸೇರಿದಂತೆ ಅನ್ಯ ಧರ್ಮಿಯ ನಿರಾಶ್ರಿತರಿಂದ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿದೆ. ಗುಜರಾತ್, ರಾಜಸ್ಥಾನ, ಚತ್ತೀಸ್‌ಗಢ, ಹರಿಯಾಣ ಮತ್ತು ಪಂಜಾಬ್‌ನ 13 ಜಿಲ್ಲೆಗಳಲ್ಲಿ ನೆಲೆಸಿರುವ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಸೇರಿದ ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರು ಸೇರಿದಂತೆ ಮುಸ್ಲಿಮೇತರರನ್ನು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಕೇಂದ್ರ ಸರಕಾರ ಶುಕ್ರವಾರ ಪ್ರಕಟಣೆ ಹೊರಡಿಸಿದೆ.

Ad Widget . Ad Widget .

ಪೌರತ್ವ ಕಾಯ್ದೆ 1955 ರ ಅಡಿಯಲ್ಲಿ ಆದೇಶವನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಮತ್ತು 2009 ರಲ್ಲಿ ಕಾನೂನಿನಡಿಯಲ್ಲಿ ರೂಪಿಸಲಾದ ನಿಯಮಗಳಿಗೆ ಕೇಂದ್ರ ಗೃಹ ಸಚಿವಾಲಯ ಈ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಹೇಳಲಾಗಿದ್ದು, ಹೊಸ ಆದೇಶಕ್ಕೂ 2019 ರಲ್ಲಿ ಜಾರಿಗೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆಗೂ ಯಾವುದೇ ಸಂಬಂಧ ಇಲ್ಲ ಎನ್ನಲಾಗಿದೆ.

Ad Widget . Ad Widget .

ಆದೇಶದ ಪ್ರಕಾರ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾದವರು ಪ್ರಸ್ತುತ ಗುಜರಾತ್‌ನ ಮೊರ್ಬಿ, ರಾಜ್‌ಕೋಟ್, ಪಟಾನ್ ಮತ್ತು ವಡೋದರಾ, ಚತ್ತೀಸ್‌ಗಢ ದ ದುರ್ಗ್ ಮತ್ತು ಬಲೋದಬಜಾರ್, ಜಲಸ್ಥಾನ, ಜಲೋರ್, ಉದಯಪುರ, ಪಾಲಿ, ಬಾರ್ಮರ್ ಮತ್ತು ಸಿರೋಹಿ, ರಾಜಸ್ಥಾನ, ಹರಿಯಾಣದ ಫರಿದಾಬಾದ್ ಮತ್ತು ಜಲಂಧರ್ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಭಾರತದ ಪ್ರಜೆಯಾಗಿ ನೋಂದಾಯಿಸಲು ಅರ್ಜಿ ಅಥವಾ ಈ ನಿಯಮಗಳ ಪ್ರಕಾರ (ನಾಗರಿಕತ್ವ ನಿಯಮಗಳು, 2009) ಭಾರತದ ಪ್ರಜೆಯಾಗಿ ನೈಸರ್ಗಿಕೀಕರಣದ ಪ್ರಮಾಣಪತ್ರವನ್ನು ಅರ್ಜಿದಾರರು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.

ಅರ್ಜಿಯ ಪರಿಶೀಲನೆಯನ್ನು ಹರಿಯಾಣ ಮತ್ತು ಪಂಜಾಬ್‌ನ ಜಿಲ್ಲಾಧಿಕಾರಿ ಅಥವಾ ಕಾರ್ಯದರ್ಶಿ (ಗೃಹ) ಇವರ ಸಮ್ಮುಖದಲ್ಲಿ ಏಕಕಾಲದಲ್ಲಿ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಸಿಎಎ ಅಡಿಯಲ್ಲಿರುವ ನಿಯಮಗಳನ್ನು ಸರ್ಕಾರ ಇನ್ನೂ ರೂಪಿಸಿಲ್ಲ. 2019 ರಲ್ಲಿ ಸಿಎಎ ಜಾರಿಗೆ ಬಂದಾಗ, ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವಾಗಿ ವ್ಯಕ್ತವಾಗಿ ಪ್ರತಿಭಟನೆಗಳು ನಡೆದು ಕೆಲ ಕಡೆಗಳಲ್ಲಿ ಹಿಂಸಾಚಾರ ಗಲಭೆಗಳು ನಡೆದಿದ್ದವು.

ಸಿಎಎ ಪ್ರಕಾರ, 2014 ರ ಡಿಸೆಂಬರ್ 31 ರವರೆಗೆ ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಬಂದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡವುದಾಗಿದೆ.

Leave a Comment

Your email address will not be published. Required fields are marked *