Ad Widget .

ಮೋದಿಯನ್ನೇ ಕಾಯುವಂತೆ ಮಾಡಿದ ದೀದಿ | ಮಮತಾ ನಡೆಗೆ ರಾಜ್ಯಪಾಲ ಗರಂ

ಕೋಲ್ಕತಾ.ಮೇ.29: ಯಾಸ್‌ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಇವತ್ತು ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ರು. ಪಶ್ಚಿಮ ಬಂಗಾಳದ ಕಲೈಕುಂಡ್​​​ನಲ್ಲಿ ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ಜಗದೀಪ್ ಧನ್​​ಕರ್ ಸಭೆಯಲ್ಲಿ ಭಾಗಿಯಾಗಿ 30 ನಿಮಿಷ ಕಾದ್ರೂ ಸಿಎಂ ಮಮತಾ ಬ್ಯಾನರ್ಜಿ ಬರಲೇ ಇಲ್ಲ.

Ad Widget . Ad Widget .

ಅದೇ ಕಟ್ಟಡದಲ್ಲಿದ್ರೂ ಕೂಡ 30 ನಿಮಿಷ ತಡವಾಗಿ ಬಂದ ಮಮತಾ, ಯಾಸ್​ನಿಂದಾದ ಹಾನಿಯ ಕುರಿತ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿ, ನನಗೆ ಬೇರೆ ಮೀಟಿಂಗ್ ಇದೆ ಅಂತ ಕೂಡಲೇ ವಾಪಸ್ ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಕೇಂದ್ರ ಸರ್ಕಾರ, ಇದು ದುರಂಹಕಾರದ ವರ್ತನೆ ಅಂತ ಹೇಳಿದೆ. ಅದೇ ರಾಜ್ಯಪಾಲ ಜಗದೀಪ್ ಧನ್​ಕರ್ ಟ್ವೀಟ್ ಮಾಡಿ, ಇದು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ರಾಜ್ಯಕ್ಕೆ ಒಳ್ಳೆಯದಲ್ಲ ಅಂತ ಹೇಳಿದ್ದಾರೆ.

Ad Widget . Ad Widget .

ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಮಮತಾ ಬ್ಯಾನರ್ಜಿ, ನಾನು ಪ್ರತ್ಯೇಕವಾಗಿ ಪ್ರಧಾನಿಯನ್ನು ಭೇಟಿಯಾಗಿ 15 ನಿಮಿಷ ಮಾತಾಡಿದ್ದೇನೆ.
ಈ ವೇಳೆ ಯಾಸ್​​ನಿಂದಾಗಿ ರಾಜ್ಯದಲ್ಲಾದ ಹಾನಿಯ ಬಗ್ಗೆ ವಿವರಿಸಿದ್ದೀನಿ ಅಂತ ಹೇಳಿದ್ರು. ಇನ್ನು ಒಡಿಶಾದಲ್ಲಿ ಸಿಎಂ ನವೀನ್ ಪಟ್ನಾಯಕ್ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಮೋದಿ ರಾಜ್ಯದಲ್ಲಾದ ಹಾನಿಯ ಬಗ್ಗೆ ಮಾಹಿತಿ ಪಡೆದ್ರು. ಒಡಿಶಾಗೆ 500 ಕೋಟಿ ಮತ್ತು ಪಶ್ಚಿಮ ಬಂಗಳ, ಜಾರ್ಖಂಡ್​​​​ಗೆ ಒಟ್ಟು 500 ಕೋಟಿ ಪರಿಹಾರ ಘೋಷಿಸಿದ್ಧಾರೆ.

Leave a Comment

Your email address will not be published. Required fields are marked *