Ad Widget .

ಒಂದು ಲೀಟರ್ ಹಾಲಿಗೆ 40ml ಹಾಲು ಫ್ರೀ: ದ.ಕ ಹಾಲು ಒಕ್ಕೂಟ

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಯ ಹಾಲು ಗ್ರಾಹಕರಿಗೆ ದ.ಕ. ಹಾಲು ಒಕ್ಕೂಟ ಸಿಹಿ ಸುದ್ದಿ ನೀಡಿದ್ದು, ನಂದಿನಿ ಪ್ಯಾಕೆಟ್ ಜೊತೆ ಹೆಚ್ಚುವರಿ ಹಾಲು ನೀಡಲು ನಿರ್ಧರಿಸಿದೆ.

Ad Widget . Ad Widget .

ಕೋವಿಡ್‌ ಸಂಕಷ್ಟದ ನಡುವೆಯೂ ಹೈನುಗಾರರಿಗೆ ನೆರವಾಗಲು, ಮತ್ತು ಅಧಿಕ ಶೇಕರಣೆ ತಗ್ಗಿಸಲು ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ ನಿರ್ಧರಿಸಿದ್ದು, ಜೂನ್‌ 1ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾಲು ಖರೀದಿಸುವವರಿಗೆ ಲೀಟರ್‌ಗೆ ಹೆಚ್ಚುವರಿ ಹಾಲನ್ನು ಕೊಡುಗೆಯಾಗಿ ನೀಡಲಿದೆ.

Ad Widget . Ad Widget .

ಅರ್ಧ ಲೀಟರ್‌ ಹಾಲಿಗೆ 20 ಎಂ.ಎಲ್‌. 1 ಲೀಟರ್‌ಗೆ 40 ಎಂ.ಎಲ್‌. ಹೆಚ್ಚುವರಿ ಹಾಲನ್ನು ಪ್ಯಾಕೆಟ್‌ನಲ್ಲೇ ತುಂಬಿಸಿ ಗ್ರಾಹಕರಿಗೆ ಉಚಿತವಾಗಿ ನೀಡಲಿದೆ. ಗ್ರಾಹಕರು ನಿಗದಿತ ಲೀಟರ್‌ಗೆ ಮಾತ್ರ ಈಗಿನಂತೆ ದರ ಪಾವತಿಸಿದರೆ ಸಾಕಾಗುತ್ತದೆ. ಪ್ರಸಕ್ತ ಲಾಕ್ಡೌನ್‌ ಇರುವುದರಿಂದ ಲೀಟರ್‌ಗಟ್ಟಲೆ ಹಾಲು ಒಕ್ಕೂಟಗಳಲ್ಲಿ ಶೇಖರಣೆಯಾಗುತ್ತಿದೆ.

Leave a Comment

Your email address will not be published. Required fields are marked *