ಕಾಪು: ಟಿಪ್ಪರ್ ಢಿಕ್ಕಿ ರಿಕ್ಷಾ ಚಾಲಕ ಮೃತ್ಯು

ಕಾಪು: ಆಟೋಗೆ ಟಿಪ್ಪರ್ ಢಿಕ್ಕಿಯಾಗಿ ಆಟೋ ಚಾಲಕ ಮೃತಪಟ್ಟ ಘಟನೆ ಇಂದು ಇಲ್ಲಿನ ಶಿರ್ವ ರಸ್ತೆಯ ಮಲ್ಲಾರು ಗ್ರಾಮದ ಸ್ವಾಗತನಗರ ಬಳಿ ನಡೆದಿದೆ.
ಉಡುಪಿಯ ಮಧ್ವನಗರ ಕೊಡುವೂರು ನಿವಾಸಿ ಶಾವೂರು (೪೦) ಮೃತಪಟ್ಟವರು.

Ad Widget ... ..

ಇವರು ಶಾವೂರು ಫಕೀರಣ ಕಟ್ಟೆಗೆ ಆಗಮಿಸಿ ತಮ್ಮ ಆಟೋರಿಕ್ಷಾದಲ್ಲಿ ಹಿಂತಿರುಗುತ್ತಿದ್ದ ವೇಳೆ ಟಿಪ್ಪರ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Leave a Comment

Your email address will not be published. Required fields are marked *