Ad Widget .

ಕೋವಿಡ್ ರೋಗಿಗಳಲ್ಲಿ ಅಲ್ಲ ಸೋಂಕಿತರಿಗೆ ನೀಡಿದ ಚಪಾತಿಯಲ್ಲಿ ವೈಟ್ ಫಂಗಸ್…..!

ಬೆಂಗಳೂರು: ಈವರೆಗೆ ಕೊರೋನಾ ಸೋಂಕಿತರಲ್ಲಿ ಪತ್ತೆಯಾಗಿದ್ದ ವೈಟ್ ಫಂಗಸ್ ಇಂದು ಕೋವಿಡ್​ ಕೇರ್​ ಸೆಂಟರ್​ನ ಚಪಾತಿಯಲ್ಲಿಯೇ ಕಾಣಿಸಿಕೊಂಡಿದೆ. ಈ ಫಂಗಸ್ ನೋಡಿ ಕ್ವಾರಂಟೈನ್ ನಲ್ಲಿದ್ದವರು ಶಾಕ್ ಆಗಿದ್ದಾರೆ.

Ad Widget . Ad Widget .

ಹೌದು ಈಗಾಗಲೇ ಕೊರೋನಾ ರೋಗಿಗಳನ್ನು ಹಿಂಡಿ ಹಿಪ್ಪೆ ಮಾಡಿರುವ ಫಂಗಸ್​ ನಿನ್ನೆ ರಾತ್ರಿ ಕೋರಮಂಗಲದ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದ ಸೋಂಕಿತರಿಗೆ ನೀಡಲಾದ ಚಪಾತಿಯಲ್ಲಿ ಕಂಡುಬಂದಿದೆ. ಇದು ಕೋವಿಡ್ ನಿಗ್ರಹ ವಿಚಾರದಲ್ಲಿ ಬಿಬಿಎಂಪಿ ಬೇಜವಾಬ್ದಾರಿತನವನ್ನು ಮತ್ತೆ ಎತ್ತಿ ತೋರಿಸಿದೆ. ಈ ಘಟನೆ, ಇಂತಹ ಊಟವನ್ನು ಸೇವಿಸ ಬೇಕಾ ಅಥವಾ ಬೇಡವ ಎನ್ನುವ ಗೊಂದಲಕ್ಕೆ ಸೋಂಕಿತರನ್ನು ತಳ್ಳಿದೆ.
ಇನ್ನಾದರು ಬಿಬಿಎಂಪಿ ಕೊರೋನಾ ವಿಚಾರದಲ್ಲಿ ಎಚ್ಚರಿಕೆ ವಹಿಸಿದರೆ ಒಳ್ಳೆಯದು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *