ಬೆಳಗಾವಿ : ಮಾಸ್ಕ್ ಧರಿಸದ ತಹಶೀಲ್ದಾರ್ ಆರ್.ಕೆ. ಕುಲಕರ್ಣಿ ಅವರಿಗೆ ಪೊಲೀಸರು ದಂಡ ವಿಧಿಸಿದ ಘಟನೆ ಬೆಳಗಾವಿ ಜಿಲ್ಲೆಯ ಲ್ಲಿ ನಡೆದಿದೆ.
ಹಶೀಲ್ದಾರ್ ಆರ್.ಕೆ. ಕುಲಕರ್ಣಿ ಸರಕಾರಿ ವಾಹನದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಖಡೇ ಬಜಾರ್ ಪೊಲೀಸರು ತಪಾಸಣೆ ನಡೆಸುತ್ತಿದ್ದು, ತಹಶೀಲ್ದಾರ್ ಮಾಸ್ಕ್ ಧರಿಸದೆ ತೆರಳುತ್ತಿರುವುದನ್ನು ಕಂಡು ವಾಹನ ನಿಲ್ಲಿಸಿ ವಿಚಾರಿಸಿ 250ರೂ. ದಂಡವನ್ನು ವಿಧಿಸಿದ್ದಾರೆ. ಬಳಿಕ ದಂಡವನ್ನು ಪಾವತಿ ಮಾಡಿ ತಹಶೀಲ್ದಾರ್ ತೆರಳಿದ್ದಾರೆ.
ಇನ್ನು ಇದೇ ವೇಳೆ ಮಾಸ್ಕ್ ಧರಿಸದೆ ತೆರಳುತ್ತಿದ್ದ ತಹಶೀಲ್ದಾರ್ ಮಾಧ್ಯಮ ದವರ ಕಣ್ಣಿಗೆ ಬಿದ್ದಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿದ ತಹಶೀಲ್ದಾರ್ ಮೇಲೆ ಪೊಲೀಸರು ದಂಡ ವಿಧಿಸಲು ಇದೇ ಕಾರಣ ಎನ್ನಲಾಗಿದೆ. ಮಾಧ್ಯಮದವರು ಇಲ್ಲದಿದ್ದರೆ ಪೊಲೀಸರು ಕೂಡ ಮೌನವಾಗಿರುತ್ತಿದ್ದರು. ದಂಡಾದಿಕಾರಿಗೆ ದಂಡ ಹಾಕುವ ದೈರ್ಯವನ್ನು ತೋರಿಸುತ್ತಿರಲಿಲ್ಲ ಎಂದು ಜನರು ಹೇಳುತ್ತಿದ್ದಾರೆ.