Ad Widget .

ಅವಳು ಸರ್ಜರಿ ಮಾಡಿಸಿಕೊಂಡು ಅವನಾಗಲು ಕಾರಣವೇನು..!?

ಅಮೆರಿಕ: ಈಗಿನ ಕಾಲದಲ್ಲಿ ಹಣವಿದ್ದರೆ ಎಲ್ಲವೂ ಸಾಧ್ಯವಿದೆ ಎಂಬ ಮಾತೊಂದು ಹಳ್ಳಿಗಳಲ್ಲಿದೆ. ಈ ಮಾತಿಗೆ ಪೂರಕವಾದಂತಹ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಸಿನಿಮಾ ನಟಿಯೊಬ್ಬಳು ಶಸ್ತ್ರಚಿಕಿತ್ಸೆಗೊಳಪಟ್ಟು ನಟನಾಗಿ ಬದಲಾದ ಘಟನೆ ನಡೆದಿದೆ. ಕೇಳಲು ಅಚ್ಚರಿಯೆನಿಸಿದರೂ ಇದು ಅಕ್ಷರಶಃ ಸತ್ಯ.

Ad Widget . Ad Widget .

ಹೌದು, ಹಾಲಿವುಡ್ ನಟಿ ಎಲೆನ್ ಈಗ ಸರ್ಜರಿ ಮಾಡಿಸಿಕೊಂಡು ಹುಡುಗನಾಗಿ ಬದಲಾಗಿದ್ದಾರೆ. ಅಷ್ಟೇ ಅಲ್ಲದೆ ಎಲೆನ್ ಸಿಕ್ಸ್ ಪ್ಯಾಕ್ ಮಾಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

Ad Widget . Ad Widget .

ಇನ್ಸೆಪ್ಷನ್ ಮತ್ತು ಜುನೋ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ಎಲೆನ್ ಈಗ ಹುಡುಗನಾಗಿ ಬದಲಾದ ಬಳಿಕ ಎಲಿಯಟ್ ಪೇಜ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಎಲೆನ್ ಮಹಿಳೆಯರ ಉಡುಪಿನಲ್ಲಿ ನನಗೆ ಕಂಫರ್ಟ್ ಆಗಿರುತ್ತಿರಲಿಲ್ಲ. ಬಾಲ್ಯದಲ್ಲಿ ತನ್ನ ದೇಹದಲ್ಲಿನ ಬದಲಾವಣೆ ಗಮನಿಸಿದಾಗ ತುಂಬ ಹಿಂಸೆ ಆಗುತ್ತಿತ್ತು. ಹುಡುಗನ ಹಾಗೆ ವರ್ತಿಸುತ್ತಿದ್ದೆ ಎಂದಿದ್ದಾರೆ.

2018ರಲ್ಲಿ ಡ್ಯಾನ್ಸರ್ ಎಮ್ಮಾ ಪೋರ್ಟರ್ ಅವರನ್ನು ಮದುವೆಯಾಗಿ, 2021ರಲ್ಲಿ ವಿಚ್ಛೇದನ ಪಡೆದಿದ್ದಾರೆ.
ಇದೀಗ ಸಂಪೂರ್ಣವಾಗಿ ಹುಡುಗನಾಗಿ ಬದಲಾಗಿರುವ ಎಲೆನ್ ನನ್ನ ಜೀವನ ಶೈಲಿ ಸಂಪೂರ್ಣ ಬದಲಾಗಿದೆ ಎಂದಿದ್ದಾರೆ. ಇದರೊಂದಿಗೆ ಹುಡುಗಿಯಾಗಿದ್ದ ಎಲೆನ್ ಈಗ ಸಂಪೂರ್ಣ ಹುಡುಗನಾಗಿ ಬದಲಾಗಿ ಸಂತಸದಿಂದ ಜೀವನ ನಡೆಸುತ್ತಿದ್ದಾರೆ

Leave a Comment

Your email address will not be published. Required fields are marked *